ಬೆಂಗಳೂರು : ಇಂದಿನಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇಲ್ ಶುರುವಾಗಿದೆ. ಫೋನ್‌, ಲ್ಯಾಪ್‌ಟಾಪ್‌, ಟಿವಿ ಮತ್ತು ಇತರ ಹಲವು ವಸ್ತುಗಳನ್ನು ಈ ಸೇಲ್ ನಲ್ಲಿ ಅಗ್ಗದ ಬೆಲೆಗೆ ಖರೀದಿಸಬಹುದು. ಅನೇಕ ಉತ್ತಮ ಬ್ರಾಂಡ್‌ಗಳ ಫೋನ್‌ಗಳು ಈ ಸೇಲ್ ನಲ್ಲಿ  ಕಡಿಮೆ ಬೆಲೆಗೆ ಲಭ್ಯವಿದೆ.ಈ ಸೇಲ್ ನಲ್ಲಿ Apple iPhone 15 Plus ಸಹ ಅಗ್ಗದ ಬೆಲೆಗೆ ಸಿಗುತ್ತಿದೆ.ಹಳೆಯ ಫೋನ್ ನೀಡುವ ಮೂಲಕ  ರಿಯಾಯಿತಿ ಬೆಲೆಯಲ್ಲಿ ಈ ದುಬಾರಿ ಫೋನ್ ಅನ್ನು ಖರೀದಿಸಬಹುದು. 


COMMERCIAL BREAK
SCROLL TO CONTINUE READING

iPhone 15 Plus ರಿಯಾಯಿತಿ : 
ಐಫೋನ್ 15 ಪ್ಲಸ್ ಈ ಹಿಂದೆ 89,900 ರೂ. ಆಗಿತ್ತು.ಆದರೆ iPhone 16 ಬಂದಾಗ ಅದರ ಬೆಲೆ 10,000 ರೂಪಾಯಿಗಳಷ್ಟು ಕಡಿಮೆಯಾಯಿತು.ಈಗ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್  ನಡೆಯುತ್ತಿದೆ. ಈ ಸೇಲ್ ನಲ್ಲಿ ಐಫೋನ್ ಅನ್ನು 64,999 ರೂ.ಗೆ ಖರೀದಿಸಬಹುದು. ಬ್ಯಾಂಕ್ ಕಾರ್ಡ್ ಬಳಸಿದರೆ, 5,000 ರೂ.ವರೆಗೆ ಹೆಚ್ಚಿನ ರಿಯಾಯಿತಿ ಸಿಗುತ್ತದೆ. 


ಇದನ್ನೂ ಓದಿ : ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!


iPhone 15 Plus ಖರೀದಿಸಿದರೆ, ಬ್ಯಾಂಕ್‌ನಿಂದ 2,800 ರೂ.ವರೆಗೆ ರಿಯಾಯಿತಿ ಪಡೆಯಬಹುದು.SBI ಕಾರ್ಡ್ ಮೂಲಕ ಈ ಫೋನ್ ಅನ್ನು EMI ನಲ್ಲಿ ಖರೀದಿಸಿದರೆ, 10% ಹೆಚ್ಚಿನ ರಿಯಾಯಿತಿ ಸಿಗುತ್ತದೆ. ಇನ್ನು ನಿಮ್ಮ ಹಳೆಯ ಫೋನ್ ಅನ್ನು ನೀಡಿದರೆ  2,000 ವರೆಗೆ ರಿಯಾಯಿತಿ ಸಿಗುತ್ತದೆ. iPhone 15 Plus 128GB ಮತ್ತು 256GB ಸ್ಟೋರೇಜ್ ನೊಂದಿಗೆ ಬರುತ್ತದೆ. 


iPhone 15 Plus ವಿಶೇಷಣಗಳು :
ಐಫೋನ್ 15 ಪ್ಲಸ್ ಉತ್ತಮ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, A16 ಬಯೋನಿಕ್ ಚಿಪ್ ಅನ್ನು ಹೊಂದಿದೆ. ಇದರಲ್ಲಿ 512GB ಡೇಟಾವನ್ನು ಸ್ಟೋರ್ ಮಾಡಬಹುದು. ಈ ಫೋನ್ ಐದು ಬಣ್ಣಗಳಲ್ಲಿ ಬರುತ್ತದೆ. ಇದು iOS 18 ಹೆಸರಿನ ಸಾಫ್ಟ್‌ವೇರ್ ಅನ್ನು ಹೊಂದಿದೆ. ಇದರಲ್ಲಿ ವೈರ್‌ಲೆಸ್ ಮತ್ತು ವೈರ್ಡ್ ಚಾರ್ಜಿಂಗ್ ಎರಡೂ ಲಭ್ಯವಿದೆ.ಎರಡು ಸಿಮ್ ಕಾರ್ಡ್‌ಗಳನ್ನು ಸಹ ಇದರಲ್ಲಿ ಹಾಕಬಹುದು. ಇದು USB ಟೈಪ್ C ಪೋರ್ಟ್ ಅನ್ನು ಹೊಂದಿದ್ದು, Wi-Fi ಸಹ ಲಭ್ಯವಿದೆ. ಹಿಂಭಾಗದಲ್ಲಿ  48 ಮೆಗಾಪಿಕ್ಸೆಲ್‌ಗಳು ಮತ್ತು 12 ಮೆಗಾಪಿಕ್ಸೆಲ್‌ನ ಎರಡು ಕ್ಯಾಮೆರಾಗಳಿವೆ. ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಕೂಡಾ ಇದೆ.


ಇದನ್ನೂ ಓದಿ : BSNL ನಲ್ಲಿ ಈಗ ಉಚಿತ ವೈಫೈ ರೋಮಿಂಗ್ ಸೌಲಭ್ಯ..! ಉಚಿತ ನೋಂದಣಿಗೆ ಹೀಗೆ ಮಾಡಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.