ಚಳಿಗಾಲದಲ್ಲಿ ಫ್ರಿಜ್‌ನ ತಾಪಮಾನ ಇಷ್ಟೇ ಇರಬೇಕು! 90 ಶೇ. ದಷ್ಟು ಜನರಿಗೆ ಗೊತ್ತಿಲ್ಲದ ಮಾಹಿತಿ ಇದು !

ಒಂದು ವೇಳೆ ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ಫ್ರಿಜ್‌ನ  ಕಂಪ್ರೆಸರ್  ಹೆಚ್ಚು ಕೆಲಸ ಮಾಡಬೇಕಾಗುತ್ತದೆ.    

Written by - Ranjitha R K | Last Updated : Oct 22, 2024, 04:05 PM IST
  • ಚಳಿಗಾಲದಲ್ಲಿ ಫ್ರಿಜ್ ಸೆಟ್ಟಿಂಗ್ ಗಳನ್ನು ಬದಲಾಯಿಸಬೇಕಾಗುತ್ತದೆ.
  • ಚಳಿಗಾಲದಲ್ಲಿ ಈ ತಾಪಮಾನವನ್ನು ಹೊಂದಿಸಿ
  • ಫ್ರಿಜ್ ಅನ್ನು ಪದೇ ಪದೇ ಡಿಫ್ರಾಸ್ಟ್ ಮಾಡಬೇಕು.
ಚಳಿಗಾಲದಲ್ಲಿ ಫ್ರಿಜ್‌ನ ತಾಪಮಾನ ಇಷ್ಟೇ ಇರಬೇಕು! 90 ಶೇ. ದಷ್ಟು ಜನರಿಗೆ ಗೊತ್ತಿಲ್ಲದ ಮಾಹಿತಿ ಇದು !

ಬೆಂಗಳೂರು : ಚಳಿಗಾಲದಲ್ಲಿ ಫ್ರಿಜ್ ಸೆಟ್ಟಿಂಗ್ ಗಳನ್ನು ಬದಲಾಯಿಸಬೇಕಾಗುತ್ತದೆ. ಚಳಿಗಾಲದಲ್ಲಿ ಹೊರಗಿನ ಉಷ್ಣತೆಯೂ ತಣ್ಣಗಿರುವ ಕಾರಣ ಫ್ರಿಡ್ಜ್‌ನ ತಾಪಮಾನವನ್ನು ಬೇಸಿಗೆಯ ತಾಪಮಾನದಲ್ಲಿ ಇಡಬಾರದು. ಒಂದು ವೇಳೆ ಚಳಿಗಾಲದಲ್ಲಿ ಫ್ರಿಜ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸದಿದ್ದರೆ, ಫ್ರಿಜ್‌ನ  ಕಂಪ್ರೆಸರ್  ಹೆಚ್ಚು ಕೆಲಸ ಮಾಡಬೇಕಾಗುತ್ತದೆ.  

Add Zee News as a Preferred Source

ತಾಪಮಾನವನ್ನು ಹೊಂದಿಸಿ : 
ಚಳಿಗಾಲದಲ್ಲಿ ತಾಪಮಾನವು ಕಡಿಮೆಯಾಗಿಯೇ ಇರುತ್ತದೆ. ಅಂತಹ ಸಂದರ್ಭಗಳಲ್ಲಿ, ಫ್ರಿಜ್ ತಾಪಮಾನವನ್ನು ಹೆಚ್ಚಿಸದಿದ್ದರೆ, ಫ್ರಿಜ್ ನಲ್ಲಿ ಇಟ್ಟಿರುವ ವಸ್ತುಗಳು ಫ್ರೀಜ್ ಆಗಬಹುದು. ಕೆಲವೊಮ್ಮೆ ಹಾಳಾಗಲೂಬಹುದು. ಈ ಸಮಸ್ಯೆಯನ್ನು ತಪ್ಪಿಸಲು ಚಳಿಗಾಲದಲ್ಲಿ ಫ್ರಿಡ್ಜ್ ನ ಉಷ್ಣತೆಯನ್ನು ಕೆಲವು ಡಿಗ್ರಿಗಳಷ್ಟು ಹೆಚ್ಚಿಸಬೇಕಾಗುತ್ತದೆ. 

ಇದನ್ನೂ ಓದಿ : BSNL ನೀಡುತ್ತಿದೆ ಗ್ರಾಹಕರ ಆಯ್ಕೆಯ VIP ಮೊಬೈಲ್ ನಂಬರ್, ಇಲ್ಲಿದೆ ಅದನ್ನು ಪಡೆಯುವ ಸರಳ ವಿಧಾನ..!

ಡಿ-ಫ್ರಾಸ್ಟ್ :
ಫ್ರಿಜ್ ಅನ್ನು ಪದೇ ಪದೇ ಡಿಫ್ರಾಸ್ಟ್ ಮಾಡಬೇಕು. ಡಿ-ಫ್ರಾಸ್ಟ್ ಮಾಡದಿದ್ದರೆ, ಅತಿಯಾದ ಮಂಜುಗಡ್ಡೆಯು ಒಳಗೆ ನಿರ್ಮಾಣವಾಗುತ್ತದೆ. ಇದರಿಂದಾಗಿ ಫ್ರಿಡ್ಜ್‌ನ ಉಷ್ಣತೆಯು ಕಡಿಮೆಯಾಗಿ ಒಳಗಿನ ಆಹಾರವು ಬೇಗನೆ ಕೆಡುತ್ತದೆ ಮತ್ತು ಫ್ರಿಜ್‌ನ ಕಂಪ್ರೆಸರ್ ಸಹ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಕಾರಣಗಳಿಂದಾಗಿ ಫ್ರಿಜ್ ಬೇಗನೇ ಹಾಳಾಗುತ್ತದೆ. ಮಂಜುಗಡ್ಡೆಯ ಶೇಖರಣೆಯಿಂದಾಗಿ ಫ್ರಿಡ್ಜ್ ಬಾಗಿಲು ತೆರೆಯಲು ಮತ್ತು ಮುಚ್ಚಲು ಕಷ್ಟವಾಗುತ್ತದೆ. 

 ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ರೆಫ್ರಿಜರೇಟರ್‌ಗಳು 1 ರಿಂದ 5 ರವರೆಗಿನ ಸಂಖ್ಯೆಯನ್ನು ಹೊಂದಿವೆ. ಹೆಚ್ಚಿನವರು ಫ್ರಿಜ್ ತಾಪಮಾನವನ್ನು ಕಡಿಮೆ ಸಂಖ್ಯೆಯಲ್ಲಿ ಇಟ್ಟಿರುತ್ತಾರೆ.ಇದರಿಂದ ಫ್ರಿಡ್ಜ್‌ನಲ್ಲಿರುವ ವಸ್ತುಗಳು ಹಾಳಾಗಬಹುದು.ಬೇಸಿಗೆಯಲ್ಲಿ ಫ್ರಿಡ್ಜ್ ಅನ್ನು ಮಧ್ಯಮ ಅಂದರೆ 3 ರಿಂದ 4 ರವರೆಗೆ ಇಡುವುದು ಸೂಕ್ತವಾಗಿದೆ. ಆದರೆ ಚಳಿಗಾಲದಲ್ಲಿ ಫ್ರಿಜ್ ಅನ್ನು ನಂಬರ್ 1 ನಲ್ಲಿ ಇರಿಸಿದರೆ ಸಾಕಾಗುತ್ತದೆ. 

ಇದನ್ನೂ ಓದಿ ಫೋನ್ ಚಾರ್ಜ್ ಮಾಡುವುದಕ್ಕೆ ವಿದ್ಯುತ್ ಬೇಕಿಲ್ಲ, ಬಿಸಿಲು ಸಾಕು !ಮಾರುಕಟ್ಟೆಗೆ ಬಂದಿದೆ ಹೊಸ ಡಿವೈಸ್

ತರಕಾರಿ ಚೇಂಬರ್  : 
ನಿಮ್ಮ ಫ್ರಿಡ್ಜ್‌ನಲ್ಲಿ ತರಕಾರಿ ಚೇಂಬರ್ ಇದ್ದರೆ, ಚಿಂತೆ ಮಾಡಬೇಕಾಗಿಲ್ಲ. ವೆಜಿಟೇಬಲ್ ಚೇಂಬರ್ ತಾಪಮಾನವು ವಿಭಿನ್ನವಾಗಿರುತ್ತದೆ. ಈ ಕಾರಣದಿಂದಾಗಿ, ತರಕಾರಿಗಳು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ.ಚಳಿಗಾಲದಲ್ಲಿ, ತರಕಾರಿ ಚೇಂಬರ್ ತಾಪಮಾನವನ್ನು 5 ರಿಂದ 7 ಡಿಗ್ರಿಗಳ ನಡುವೆ ಇಡಬೇಕು. ಹೀಗಾದರೆ   10 ರಿಂದ 15 ದಿನಗಳವರೆಗೆ ತರಕಾರಿಗಳನ್ನು ತಾಜಾವಾಗಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News