iPhone 15 Pro Max Price Cut : ಆಪಲ್ ಶೀಘ್ರದಲ್ಲೇ ತನ್ನ ಹೊಸ ಐಫೋನ್ 16 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.ಈ ಹಿಂದೆ, ಐಫೋನ್ 15 ಸರಣಿಯ ಬೆಲೆಯನ್ನು ಆನ್‌ಲೈನ್‌ನಲ್ಲಿ ಕಡಿಮೆ ಮಾಡಲಾಗಿತ್ತು. iPhone 15 ಮತ್ತು iPhone 15 Plus ಈಗಾಗಲೇ ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಆದರೆ ಈಗ iPhone 15 Pro Max ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ iPhone 15 Pro Max ರಿಯಾಯಿತಿ : 
ಕಳೆದ ವರ್ಷ,iPhone 15 Pro Max ಅನ್ನು ಭಾರತದಲ್ಲಿ 1,59,900  ರೂಪಾಯಿಗೆ  ಬಿಡುಗಡೆ ಮಾಡಲಾಯಿತು. ಪ್ರಸ್ತುತ ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಫೋನ್ 1,37,990 ರೂ.ಗೆ ಲಭ್ಯವಿದೆ. ಅಂದರೆ ರಿಲಯನ್ಸ್ ಡಿಜಿಟಲ್ ಈ ಫೋನ್‌ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡುತ್ತಿದೆ.ಮೇಲೆ ನೀಡಿರುವ ಬೆಲೆಯು 256GB ಸ್ಟೋರೇಜ್ ಹೊಂದಿರುವ ಬ್ಲ್ಯಾಕ್ ಟೈಟಾನಿಯಂ ಬಣ್ಣದ ಮಾದರಿಯದ್ದಾಗಿದೆ. 


ಇದನ್ನೂ ಓದಿ : ಅತ್ಯಂತ ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ Samsung Galaxy A06 ಸ್ಮಾರ್ಟ್‌ಫೋನ್


iPhone 15 Pro ಮ್ಯಾಕ್ಸ್ ಬ್ಯಾಂಕ್ ರಿಯಾಯಿತಿಗಳು:
ಇದಲ್ಲದೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಖರೀದಿಸಿದರೆ  5,000 ರೂ.ಗಳ ರಿಯಾಯಿತಿ ಲಭ್ಯವಿದೆ. ಹೀಗಾಗಿ ಈ ಫೋನ್ ಬೆಲೆ 1,32,990 ರೂ.ಗೆ ಇಳಿಕೆಯಾಗಲಿದೆ.ಇನ್ನು EMI ಮೇಲೆ ಈ ಫೋನ್ ಖರೀದಿಸುವುದಾದರೆ ಬ್ಯಾಂಕ್ ಕಾರ್ಡ್‌ನಲ್ಲಿ ಇನ್ನೂ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು.ಹಾಗಾಗಿ ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಸಲು ಇದು ಒಳ್ಳೆಯ ಅವಕಾಶ. ಆದ್ರೆ ಈ ಆಫರ್ ಎಲ್ಲಿಯವರೆಗೆ ಇರಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.ಹಾಗಾಗಿ ಕಡಿಮೆ ಬೆಲೆಗೆ iPhone 15 Pro Max ಖರೀದಿಸಬೇಕು ಎಂದಿದ್ದರೆ ತ್ವರಿತವಾಗಿ ಖರೀದಿಸುವುದು ಒಳ್ಳೆಯದು. 


iPhone 15 Pro ಮ್ಯಾಕ್ಸ್ ವಿಶೇಷಣಗಳು :
iPhone 15 Pro Max 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಹೊಂದಿದೆ. ಇದು 2796 x 1290 ಪಿಕ್ಸೆಲ್ ಗಳ ರೆಸಲ್ಯೂಶನ್ ಮತ್ತು 120Hz ನ ರಿಫ್ರೆಶ್ರೇಟ್ ಅನ್ನು ಹೊಂದಿದೆ. ಇದು 2000nits ವರೆಗೆ ಹೊಳಪನ್ನು ಒದಗಿಸುತ್ತದೆ. iPhone 15 Pro Max ಆಪಲ್‌ನ A17 Pro ಚಿಪ್ ಅನ್ನು ಹೊಂದಿದೆ.ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 


ಇದನ್ನೂ ಓದಿ : Daiwa ಹೊರ ತಂದಿದೆ 32 ಮತ್ತು 55 ಇಂಚಿನ Smart TV ! ಬೆಲೆ ಕೇವಲ 11 ಸಾವಿರ ರೂಪಾಯಿ!


ಐಫೋನ್ 15 ಪ್ರೊ ಮಾದರಿಯು ಏಳು ಕ್ಯಾಮೆರಾಗಳನ್ನು ಹೊಂದಿರುವಂತಹ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ ಎಂದು ಆಪಲ್ ಹೇಳಿದೆ. ಐಫೋನ್ 15 ಪ್ರೊ ಮಾದರಿಯು 48 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡುತ್ತದೆ. ಅದರಲ್ಲಿ 4K60 ProRes ವೀಡಿಯೊವನ್ನು ಸಹ ರೆಕಾರ್ಡ್ ಮಾಡಬಹುದು. iPhone 15 Pro Max 4,441mAh ಬ್ಯಾಟರಿಯನ್ನು ಹೊಂದಿದೆ. ಇದು 20W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜರ್‌ನೊಂದಿಗೆ ಚಾರ್ಜ್ ಆಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.