ಜಿಯೋ ಬೆವರಿಳಿಸುವ ಪ್ಲಾನ್ ಪರಿಚಯಿಸಿದ BSNL !ಇಷ್ಟು ಅಗ್ಗದ ರಿಚಾರ್ಜ್ ಪ್ಲಾನ್ ಬೇರೆಲ್ಲೂ ಇಲ್ಲ

BSNL Affordable Plan:ಬಿಎಸ್ಎನ್ಎಲ್ ಅತ್ಯಂತ ಅಗ್ಗದ ಪ್ಲಾನ್ ಪರಿಚಯಿಸಿದೆ. ಇದು ಅಗ್ಗದ ಮತ್ತು ದೀರ್ಘ ಕಾಲದ ಮಾನ್ಯತೆ ಇರುವ ರಿಚಾರ್ಜ್ ಪ್ಲಾನ್ ಆಗಿದೆ.  

Written by - Ranjitha R K | Last Updated : Sep 4, 2024, 10:28 AM IST
  • BSNLನ ಅಗ್ಗದ ಪ್ರಿಪೇಯ್ಡ್ ಯೋಜನೆ
  • 160 ದಿನಗಳವರೆಗೆ ನೆಟ್ ಮತ್ತು ಪ್ರತಿದಿನ 2GB ಡೇಟಾ
  • ಈ ಯೋಜನೆಯು ಅನೇಕ ಜನರಿಗೆ ಪ್ರಯೋಜನಕಾರಿಯಾಗಿರಲಿದೆ.
ಜಿಯೋ ಬೆವರಿಳಿಸುವ ಪ್ಲಾನ್ ಪರಿಚಯಿಸಿದ BSNL !ಇಷ್ಟು ಅಗ್ಗದ ರಿಚಾರ್ಜ್ ಪ್ಲಾನ್ ಬೇರೆಲ್ಲೂ ಇಲ್ಲ  title=

BSNL Affordable Plan : ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದೆ.ಇದರಲ್ಲಿ 160 ದಿನಗಳವರೆಗೆ ನೆಟ್ ಮತ್ತು ಪ್ರತಿದಿನ 2GB ಡೇಟಾ ಸಿಗುತ್ತದೆ. ಈ 160 ದಿನಗಳ ಪ್ಲಾನ್  BSNLನ ಅತ್ಯದ್ಭುತ ಪ್ಲಾನ್ ಆಗಿದೆ.ಇದು ಅಗ್ಗದ ಪ್ಲಾನ್ ಅನ್ನುವುದರ ಜೊತೆಗೆ ದೀರ್ಘಾವಧಿವರೆಗೆ ಸೇವೆ ಒದಗಿಸುತ್ತದೆ. BSNL ವೇಗವಾಗಿ 4G ನೆಟ್‌ವರ್ಕ್ ಅನ್ನು ನಿಯೋಜಿಸುತ್ತಿರುವ ಕಾರಣ,ಮುಂಬರುವ ದಿನಗಳಲ್ಲಿ ಈ ಯೋಜನೆಯು ಅನೇಕ ಜನರಿಗೆ ಪ್ರಯೋಜನಕಾರಿಯಾಗಿರಲಿದೆ.

BSNL ಪ್ರಿಪೇಯ್ಡ್ 997 ರೂ. ಯೋಜನೆ : 
BSNLನ 997  ರೂ. ಪ್ಲಾನ್ ಹಳೆಯದ್ದು. ಇದರಲ್ಲಿ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನೀಡುತ್ತದೆ.ಇದರೊಂದಿಗೆ, ಹಾರ್ಡಿ ಗೇಮ್ಸ್, ಜಿಂಗ್ ಮ್ಯೂಸಿಕ್, ವಾವ್ ಎಂಟರ್‌ಟೈನ್‌ಮೆಂಟ್, ಬಿಎಸ್‌ಎನ್‌ಎಲ್ ಟ್ಯೂನ್ಸ್ ಮತ್ತು ಲಿಸನ್ ಪಾಡ್‌ಕಾಸ್ಟ್‌ನಂತಹ ಇತರ ಪ್ರಯೋಜನಗಳಿವೆ.

ಇದನ್ನೂ ಓದಿ : ಇದೊಂದು ನಂಬರಿಗೆ ಕಾಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!

320GB ಡೇಟಾ :
ಈ ಪ್ಲಾನ್ ನಲ್ಲಿ 320GB ಡೇಟಾ ಸಿಗುತ್ತದೆ. ಇದು 160 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. BSNL ಸೆಲ್ಫ್-ಕೇರ್ ಅಪ್ಲಿಕೇಶನ್ ಅಥವಾ ಕಂಪನಿಯ ವೆಬ್‌ಸೈಟ್ ಮೂಲಕ ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು.ಇದನ್ನು  ಹೊರತುಪಡಿಸಿ ಬೇರೆ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಿಂದ ಕೂಡಾ ರೀಚಾರ್ಜ್ ಮಾಡಬಹುದು.

BSNL ನೆಟ್‌ವರ್ಕ್ ಹೊಂದಿರುವ ಎಲ್ಲಾ ಪ್ರದೇಶಗಳಲ್ಲಿ ಈ ಯೋಜನೆ ಲಭ್ಯವಿರುತ್ತದೆ.BSNL ನ 4G ನೆಟ್ವರ್ಕ್ ಅನ್ನು ಪ್ರಸ್ತುತ ಸ್ಥಾಪಿಸಲಾಗುತ್ತಿದೆ. ಕಂಪನಿಯು ಎಲ್ಲಾ ಪ್ರದೇಶಗಳಲ್ಲಿ 4G ಅನ್ನು ಸ್ಥಾಪಿಸಲು ಇನ್ನೂ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.ಇದುವರೆಗೆ 25,000 ಸ್ಥಳಗಳಲ್ಲಿ 4G ಅಳವಡಿಸಲಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ 75,000 ಸ್ಥಳಗಳಲ್ಲಿ ಅಳವಡಿಸಲಾಗುವುದು.

ಇದನ್ನೂ ಓದಿ : Jio ₹175 ಪ್ಲಾನ್​ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆ ಓ‌ಟಿ‌ಟಿ ಪ್ರವೇಶವೂ ಉಚಿತ, ಈ ರೀತಿ ರೀಚಾರ್ಜ್ ಮಾಡಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News