SAMSUNG Galaxy Z Flip4 Discount : ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ರಿಯಾಯಿತಿಗಳನ್ನು ಬಳಸಿಕೊಂಡು ಫ್ಲಿಪ್‌ಕಾರ್ಟ್ ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ. ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಪ್ರಕಾರ, ಇಲ್ಲಿ ಯಾವ ಮಟ್ಟದಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದರೆ ಒಂದು ಕ್ಷಣಕ್ಕೆ ಇದನ್ನೂ ನಂಬುವುದು ಕೂಡಾ ಕಷ್ಟ ಎನಿಸುತ್ತದೆ.  ಹೌದು ಈ ರಿಯಾಯಿತಿ ಬಳಸಿಕೊಂಡು ಫೋನ್ ಖರೀದಿಸಿದರೆ ಗ್ರಾಹಕರು ಫೋನ್ ಖರೀದಿ ಮೇಲೆ ಸಾಕಷ್ಟು ಹಣವನ್ನು ಉಳಿತಾಯ ಮಾಡುವುದಂತೂ ಖಂಡಿತಾ.


COMMERCIAL BREAK
SCROLL TO CONTINUE READING

ಯಾವ ಸ್ಮಾರ್ಟ್‌ಫೋನ್ ಮೇಲೆ ಎಷ್ಟು ರಿಯಾಯಿತಿ ? :
SAMSUNG Galaxy Z Flip4 5G ಸ್ಮಾರ್ಟ್‌ಫೋನ್ ಮೇಲೆ ಈ ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡಲಾಗುತ್ತಿದೆ.  ಈ ಸ್ಮಾರ್ಟ್‌ಫೋನ್  ಖರೀದಿಸುವ ಗ್ರಾಹಕರು ಇದುವರೆಗಿನ  ಅತಿ ಹೆಚ್ಚು ರಿಯಾಯಿತಿಯನ್ನು ಪಡೆಯಬಹುದು. ಅಂದರೆ ಈ ಸ್ಮಾರ್ಟ್‌ಫೋನ್ ನ ಮೂಲ ಬೆಲೆಗೆ ಹೋಲಿಸಿದರೆ, ಅತೀ ಕಡಿಮೆ ಬೆಲೆಗೆ ಫೋನ್ ಖರೀದಿಸುವ ಅವಕಾಶ  ಸಿಗುತ್ತಿದೆ. 


ಇದನ್ನೂ ಓದಿ : Vivo Smartphone: ಶೀಘ್ರದಲ್ಲೇ 9,000ರೂ.ಗಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಈ ಸ್ಮಾರ್ಟ್‌ಫೋನ್


ಸ್ಮಾರ್ಟ್‌ಫೋನ್‌ನ ನಿಜವಾದ ಬೆಲೆ  1,01,999 ರೂಪಾಯಿ.   ಆದರೆ ಈ ಫೋನ್ ಖರೀದಿ ಮೇಲೆ 11% ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿಯ ನಂತರ, ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು 89,999 ರೂಗಳಿಗೆ ಖರೀದಿಸುವುದು ಸಾಧ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೆ ಈ ಫೋನ್ ಮೇಲೆ ಇನ್ನೂ ಅನೇಕ ಆಫರ್ ಗಳನ್ನೂ ನೀಡಲಾಗಿದೆ. 


ಎಕ್ಸ್ ಚೇಂಜ್ ಆಫರ್  : 
 ಇನ್ನು ಈ ಸ್ಮಾರ್ಟ್ ಫೋನ್ ಖರೀದಿ ಮೇಲೆ  24,500 ರೂಪಾಯಿಗಳ ವಿನಿಮಯ ಬೋನಸ್ ನೀಡಲಾಗುತ್ತಿದೆ. ಈ ಬೋನಸ್ ಪಡೆಯಲು ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. ಎಕ್ಸ್ ಚೇಂಜ್ ಬೋನಸ್ ಅನ್ನು ಸಂಪೂರ್ಣವಾಗಿ ಪಡೆಯುವುದು ಸಾಧ್ಯವಾದರೆ ಗ್ರಾಹಕರು ಈ ಸ್ಮಾರ್ಟ್‌ಫೋನ್‌ ಮೇಲೆ 24,500 ರೂಪಾಯಿಗಳನ್ನು  ಉಳಿಸಬಹುದು. ಇಷ್ಟೆಲ್ಲಾ ರಿಯಾಯಿತಿಯ ನಂತರ 1,01,999 ರೂ. ಬೆಲೆಯ ಫೋನ್ ಅನ್ನು  ಕೇವಲ 65,499 ರೂಗಳಲ್ಲಿ ಖರೀದಿಸಬಹುದು.  


ಇದನ್ನೂ ಓದಿ : Disease X: ಪ್ರಪಂಚಕ್ಕೆ ಕಾಲಿಡುವ ಮುನ್ನವೇ ಜನರ ನಿದ್ದೆಗಿಡಿಸಿದ ನಿಗೂಢ ಕಾಯಿಲೆ, ಆತಂಕ ಹೊರಹಾಕಿದ WHO


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.