Disease X: ಪ್ರಪಂಚಕ್ಕೆ ಕಾಲಿಡುವ ಮುನ್ನವೇ ಜನರ ನಿದ್ದೆಗಿಡಿಸಿದ ನಿಗೂಢ ಕಾಯಿಲೆ, ಆತಂಕ ಹೊರಹಾಕಿದ WHO

New Disease: ಕೊರೊನಾ ವೈರಸ್‌ನ ಅಪಾಯ ಇನ್ನೂ ಮುಗಿದಿಲ್ಲ. ಅಷ್ಟರಲ್ಲಿಯೇ ಹೊಸ ಕಾಯಿಲೆಯ ಬಗ್ಗೆ WHO ವ್ಯಕ್ತಪಡಿಸಿರುವ ಆತಂಕ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ವಾಸ್ತವದಲ್ಲಿ WHO ಭವಿಷ್ಯದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಬಹುದಾದ ರೋಗಗಳ ಪಟ್ಟಿಯನ್ನು ತಯಾರಿಸುತ್ತಿದೆ, ಅದರಲ್ಲಿ ಅತ್ಯಂತ ಅಪಾಯಕಾರಿ ರೋಗ ಎಂದರೆ ಅದು ಡಿಸೀಜ್  X ಎನ್ನಲಾಗಿದೆ.  

Written by - Nitin Tabib | Last Updated : Nov 25, 2022, 12:20 PM IST
  • ಎಬೋಲಾ ವೈರಸ್‌ನ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ ಜೀನ್ ಜಾಕ್, ಡಿಸೀಸ್ ಎಕ್ಸ್ ಬಗ್ಗೆ ಎಚ್ಚರಿಕೆ ನೀಡಿದ್ದರು.
  • ಡಿಸೀಸ್ ಎಕ್ಸ್ ಎಂದರೆ ಇದುವರೆಗೆ ಅದರ ಬಗ್ಗೆ ಯಾರಿಗೂ ಏನೂ ತಿಳಿಯದ ಒಂದು ಕಾಯಿಲೆಯಾಗಿದೆ ಎಂದು ಅವರು ಹೇಳಿದ್ದಾರೆ.
Disease X: ಪ್ರಪಂಚಕ್ಕೆ ಕಾಲಿಡುವ ಮುನ್ನವೇ ಜನರ ನಿದ್ದೆಗಿಡಿಸಿದ ನಿಗೂಢ ಕಾಯಿಲೆ, ಆತಂಕ ಹೊರಹಾಕಿದ WHO title=
Disease X

Dangerous Disease-X: ಚೀನಾದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳು ಇದೀಗ ಮತ್ತೆ ಚೀನಾ ಸರ್ಕಾರದ ಸಂಕಷ್ಟವನ್ನು ಹೆಚ್ಚಿಸಿವೆ, ಇನ್ನೊಂದೆಡೆ ಇದು ವಿಶ್ವದ ಇತರ ದೇಶಗಳ ಆತಂಕವನ್ನು ಕೂಡ ಹೆಚ್ಚಿಸಿದೆ. ಹೆಚ್ಚುತ್ತಿರುವ ಕರೋನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಚೀನಾ ಅನೇಕ ನಗರಗಳಲ್ಲಿ ಸಾಮುದಾಯಿಕ ಲಾಕ್‌ಡೌನ್ ವಿಧಿಸಿದೆ. ಇವೆಲ್ಲವುಗಳ ನಡುವೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ನೀಡಿರುವ ಹೊಸ ವರದಿಯೊಂದು ಜನರಲ್ಲಿ ಮತ್ತಷ್ಟು ಭಯ ಮೂಡಿಸಿದೆ. ವಾಸ್ತವದಲ್ಲಿ WHO, ಭವಿಷ್ಯದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಬಹುದಾದ ರೋಗಗಳ ಪಟ್ಟಿಯನ್ನು ತಯಾರಿಸುತ್ತಿದೆ, ಈ ಪಟ್ಟಿಯಲ್ಲಿ ಅತ್ಯಂತ ಅಪಾಯಕಾರಿ ರೋಗ ಎಂದರೆ ಅದುವೇ 'ಡಿಸೀಜ್ X' ಎನ್ನಲಾಗಿದೆ.

ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಇದುವರೆಗೆ ಈ ರೋಗದ ಪ್ರಕರಣಗಳು ಕಂಡುಬಂದಿವೆ
ಕೋವಿಡ್‌ನ ಎರಡನೇ ಹೊಡೆತ ಈಗಷ್ಟೇ ಆರಂಭವಾಗಿದೆ ಎನ್ನುವಷ್ಟರಲ್ಲಿ 'ಡಿಸೀಸ್ ಎಕ್ಸ್‌'ನ ಚರ್ಚೆ ಕೇಳಿಬರಲಾರಂಭಿಸಿದೆ. 2021 ರಲ್ಲಿ, ಈ ಭವಿಷ್ಯದ ರೋಗವು ಎಬೋಲಾಕ್ಕಿಂತ ಹೆಚ್ಚು ಮಾರಕವಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಪಶ್ಚಿಮ ಆಫ್ರಿಕಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ವೈರಲ್ ಕಾಯಿಲೆಯಿಂದ ಬಳಲುತ್ತಿರುವ ಸುಮಾರು ಶೇ. 80ರಷ್ಟು  ರೋಗಿಗಳು ಸಾವನ್ನಪ್ಪುತ್ತಾರೆ ಎಂದು ವಿಜ್ಞಾನಿಗಳು ಹೇಳಿದ್ದರು.

ಕೆಲವೇ ಜನರಿಗೆ ಇದರ ಬಗ್ಗೆ ತಿಳಿದಿದೆ
ಎಬೋಲಾ ವೈರಸ್‌ನ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ ಜೀನ್ ಜಾಕ್, ಡಿಸೀಸ್ ಎಕ್ಸ್ ಬಗ್ಗೆ ಎಚ್ಚರಿಕೆ ನೀಡಿದ್ದರು. ಡಿಸೀಸ್ ಎಕ್ಸ್ ಎಂದರೆ ಇದುವರೆಗೆ ಅದರ ಬಗ್ಗೆ ಯಾರಿಗೂ ಏನೂ ತಿಳಿಯದ ಒಂದು ಕಾಯಿಲೆಯಾಗಿದೆ ಎಂದು ಅವರು ಹೇಳಿದ್ದರು . ಯಾರಿಂದ ಬರುತ್ತದೆ ಮತ್ತು ಯಾವ ದೇಶದಿಂದ ಶುರುವಾಗುತ್ತದೆ, ಅದು ಹೇಗೆ ವಾಸಿಯಾಗುತ್ತದೆ ಯಾರಿಗೂ ಗೊತ್ತಿಲ್ಲ. ಎಕ್ಸ್ ಎಂದರೆ ಇದೊಂದು ಅನಿರೀಕ್ಷಿತ ಕಾಯಿಲೆಯಾಗಿದೆ.

ಕರೋನಾಗಿಂತ ಮೊದಲೇ ಈ ಅಪಾಯದ ಕುರಿತು ಹೇಳಲಾಗಿದೆ
ಕೋವಿಡ್‌ಗೂ ಮುನ್ನ ಡಿಸೀಸ್ ಎಕ್ಸ್ ಕುರಿತು ಚರ್ಚೆಗಳು ನಡೆದಿವೆ. ಇದರ ಅಪಾಯಗಳ ಬಗ್ಗೆ ವಿಜ್ಞಾನಿಗಳೂ ಕೂಡ ಈ ಮೊದಲೇ ಹೇಳಿದ್ದಾರೆ. ಆದರೆ ಬಳಿಕ ಕರೋನಾ ವೈರಸ್  2 ವರ್ಷಗಳ ಕಾಲ ಭಾರಿ ವಿನಾಶವನ್ನೇ ಸೃಷ್ಟಿಸಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಪ್ರಸ್ತುತ ಚೀನಾ ಹೊರತುಪಡಿಸಿ, ವಿಶ್ವಾದ್ಯಂತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಇದೀಗ ಮತ್ತೊಮ್ಮೆ ಡಿಸೀಸ್ ಎಕ್ಸ್ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದು,  ಜನರ ಆತಂಕವನ್ನು ಹೆಚ್ಚಿಸಿವೆ. ಇತ್ತೀಚೆಗೆ, ಕಾಂಗೋದ ಇಂಗೆಡೆ ಪ್ರದೇಶದಲ್ಲಿ ನಿಗೂಢ ಜ್ವರದ ಪ್ರಕರಣ ಕಂಡುಬಂದಿದೆ. ರೋಗಿಗೆ ರಕ್ತಸ್ರಾವದ ಸಮಸ್ಯೆಯೂ ಇತ್ತು. ಮೊದಲಿಗೆ ಸ್ಥಳೀಯ ವೈದ್ಯರು ವ್ಯಕ್ತಿಗೆ ಎಬೋಲಾ ವೈರಸ್ ಸೋಂಕು ತಗುಲಿದೆ ಎಂದು ಭಾವಿಸಿದ್ದರು. ಆದರೆ, ನಂತರ ವೈದ್ಯರು ಇದು ಬೇರೆ ಯಾವುದೋ ಕಾಯಿಲೆ ಎಂದು ಊಹಿಸಿದ್ದಾರೆ. ಕ್ರಮೇಣ ರೋಗಿಯ ಸ್ಥಿತಿ ಹದಗೆಟ್ಟಿದೆ. ವ್ಯಕ್ತಿಯು ಡಿಸೀಸ್ ಎಕ್ಸ್ ಎಂಬ ರೋಗವನ್ನು ಹೊಂದಿರಬಹುದು ಎಂದು ವೈದ್ಯರು ಹೇಳಿದ್ದರು.

ಇದನ್ನೂ ಓದಿ-Vi ನಿಂದ ಛೋಟು ವೈಫೈ ಬಿಡುಗಡೆ, ಏಕಕಾಲಕ್ಕೆ 10 ಡಿವೈಸ್ ಕನೆಕ್ಟ್ ಮಾಡಬಹುದು

ಹೇಗೆ ಹರಡಿದೆ?
'ಡಿಸೀಸ್ ಎಕ್ಸ್' ಪ್ರಾಣಿಗಳು ಮತ್ತು ಪಕ್ಷಿಗಳಿಂದ ಹರಡಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಏಕೆಂದರೆ ಈ ರೋಗದ ಲಕ್ಷಣಗಳು ಇತರ ಅನೇಕ ರೋಗಗಳಲ್ಲಿಯೂ ಕಂಡುಬರುತ್ತವೆ. ಕೊರೊನಾ ಹೇಗೆ ಬಾವಲಿಗಳಿಂದ ಹರಡಿದೆ ಎಂದು ಹೇಳಲಾಗಿತ್ತೋ ಮತ್ತು ಅದೇ ರೀತಿ ಸಾರ್ಸ್ ಹಾಗೂ ಮರ್ಸ್ ಗಳ ಕಥೆಯೂ ಕೂಡ ಇದೆ. ಇದಲ್ಲದೇ ಪ್ರಾಣಿಗಳಿಂದಲೂ ನಮಗೆ ಏಡ್ಸ್, ಹಳದಿ ಜ್ವರದಂತಹ ಕಾಯಿಲೆಗಳು ಬಂದಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ-ಸೂರ್ಯನ ಶಾಖಕ್ಕೆ ಚಾರ್ಜ್ ಆಗುತ್ತದೆ ಈ ಸ್ಪೀಕರ್ .! ಬೆಲೆ ಕೂಡಾ ಭಾರೀ ಕಡಿಮೆ

ಭವಿಷ್ಯದ ಸಾಂಕ್ರಾಮಿಕದ ಪಟ್ಟಿಯಲ್ಲಿ ಆಗ್ರ ಸ್ಥಾನದಲ್ಲಿದೆ
WHO ಪ್ರಸ್ತುತ ಡಿಸೀಜ್ X ಅನ್ನು ಭವಿಷ್ಯದ ಸಾಂಕ್ರಾಮಿಕ ರೋಗಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಿದೆ. ಇದರ ಅಪಾಯವನ್ನು ನೋಡಿ, ಪ್ರಪಂಚದ 300 ಕ್ಕೂ ಹೆಚ್ಚು ವಿಜ್ಞಾನಿಗಳು ಈ ವರ್ಗದಲ್ಲಿ 25 ಕ್ಕೂ ಹೆಚ್ಚು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಇರಿಸುತ್ತಾರೆ, ಅಷ್ಟೇ ಅಲ್ಲ ಅವುಗಳ ಕುರಿತಾದ ಮಾಹಿತಿಯು ಯಾರಿಗೂ ಲಭ್ಯವಿಲ್ಲ. ವೈರಸ್‌ಗಳಿಂದ ಉಂಟಾಗುವ ರೋಗಗಳು ಹೆಚ್ಚು ಅಪಾಯಕಾರಿಯಾಗಿವೆ, ಆದರೆ ಬ್ಯಾಕ್ಟೀರಿಯಾಗಳು ಅದಕ್ಕಿಂತ ಹೆಚ್ಚು ಅಪಾಯಕಾರಿ. ಇಡೀ ವಿಶ್ವದಲ್ಲಿ ವೈರಸ್ ರೋಗಗಳಿಂದ ಸಾವನ್ನಪ್ಪುವವರಿಗಿಂತ ಹೆಚ್ಚು ಜನರು ಬ್ಯಾಕ್ಟೀರಿಯಾದಿಂದ ಸಾಯುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News