ನವದೆಹಲಿ : ರಿಯಲ್ಮೆ ನಾರ್ಜೊ 30 ಎ (Realme Narzo 30A)  ಫೋನ್ ಅನ್ನು ಈಗ ಆಕರ್ಷಕ ದರದಲ್ಲಿ ಪಡೆಯಬಹುದು.  ರಿಯಲ್ಮೆ ಡೇಸ್ ಸೇಲ್ ನಲ್ಲಿ ನೊಂದಿಗೆ (Realme Days Sale), ಈ ಫೋನ್ ಅನ್ನು ಬಹಳ ಅಗ್ಗದ ಬೆಲೆಗೆ ನಿಮ್ಮದಾಗಿಸಿಕೊಳ್ಳ ಬಹುದು. ಈ ಫೋನ್ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಫೋನ್‌ನ ಪ್ರೈಮರಿ ಕ್ಯಾಮೆರಾ 13 ಮೆಗಾಪಿಕ್ಸೆಲ್‌ಗಳಾಗಿದ್ದು, ಫೋಟೋ ಕ್ವಾಲಿಟಿಯನ್ನು ಉತ್ತಮಗೊಳಿಸುತ್ತದೆ.


COMMERCIAL BREAK
SCROLL TO CONTINUE READING

ಫೋನ್ ನ ಬೆಲೆ :
Realme Days Saleನಲ್ಲಿ , ಈ ಫೋನ್ ಕೇವಲ 8,499 ರೂಗಳಿಗೆ ಲಭ್ಯವಿದೆ.


ಸ್ಪೆಸಿಫಿಕೇಶನ್ : 
ರಿಯಲ್ಮೆ ನಾರ್ಜೊ 30 ಎ (Realme Narzo 30A) ಸ್ಮಾರ್ಟ್‌ಫೋನ್ 6.5-ಇಂಚಿನ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, ಇದು 720x1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಫೋನ್‌ನಲ್ಲಿ ಮೀಡಿಯಾ ಟೆಕ್ ಹೆಲಿಯೊ ಜಿ 85 ಪ್ರೊಸೆಸರ್ ಅಳವಡಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB RAM ಮತ್ತು 64 GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ.


ಇದನ್ನೂ ಓದಿ : Smartphone: ಮಳೆಯಿಂದಾಗಿ ನಿಮ್ಮ ಫೋನ್‌ನಲ್ಲಿ ನೀರು ಹೋಗಿದೆಯೇ? ಭಯಬಿಡಿ, ಈ ಸುಲಭ ಟ್ರಿಕ್ ಬಳಸಿ


ಬ್ಯಾಟರಿ ಮತ್ತು ಕನೆಕ್ಟಿವಿಟಿ :
ರಿಯಲ್ಮೆ ನಾರ್ಜೊ 30 ಎ ಫೋನ್‌ ನಲ್ಲಿ  6000mAh  ಬ್ಯಾಟರಿಯನ್ನು ನೀಡಲಾಗಿದೆ. ಇದು 18ವ್ಯಾಟ್ ಫಾಸ್ಟ್ ಚಾರ್ಜಿಂಗ್ ನ ಬೆಂಬಲದೊಂದಿಗೆ ಬರುತ್ತದೆ. ಕನೆಕ್ಟಿವಿಟಿಗಾಗಿ, 4 G LTE, WiFi, ಬ್ಲೂಟೂತ್ ವಿ 5.0, GPS/A-GPS ಮತ್ತು ಟೈಪ್ ಸಿ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ. ಸೆಕ್ಯೂರಿಟಿಗಾಗಿ  ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.


ಕ್ಯಾಮೆರಾ :
ಫೋಟೋ ಗ್ರಾಫಿಗಾಗಿ  ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ (Camera) ಸೆಟಪ್ ನೀಡಲಾಗಿದೆ.  ಇದರ ಪ್ರೈಮರಿ ಕ್ಯಾಮೆರಾ 13 ಮೆಗಾಪಿಕ್ಸೆಲ್‌ಗಳು ಮತ್ತು ಅದರ  ಅಪರ್ಚರ್ ಎಫ್ / 2.2, ಜೊತೆಗೆ ಪೋರ್ಟ್ರೇಟ್ ಕ್ಯಾಮೆರಾ ಸೆನ್ಸಾರ್, ಅಪರ್ಚರ್ ಎಫ್ / 2.4ಗಳಾಗಿವೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.


ಇದನ್ನೂ ಓದಿ : Whatsapp: ನಿಮ್ಮನ್ನು ಯಾರು Block ಮಾಡಿದ್ದಾರೆ ಎಂದು ತಿಳಿಯಲು ಈ ಸುಲಭ ಟ್ರಿಕ್ ಬಳಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.