Whatsapp: ನಿಮ್ಮನ್ನು ಯಾರು Block ಮಾಡಿದ್ದಾರೆ ಎಂದು ತಿಳಿಯಲು ಈ ಸುಲಭ ಟ್ರಿಕ್ ಬಳಸಿ

ವಾಟ್ಸಾಪ್ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಸಂದೇಶಗಳ ಜೊತೆಗೆ, ಆಡಿಯೋ ಮತ್ತು ವಿಡಿಯೋ ಕರೆ ಸೌಲಭ್ಯವೂ ಹೆಚ್ಚು ಜನಪ್ರಿಯವಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದರೆ  ಈ 4 ವಿಧಾನಗಳಲ್ಲಿ ಸುಲಭವಾಗಿ ಕಂಡುಹಿಡಿಯಬಹುದು.

Written by - Yashaswini V | Last Updated : Jul 7, 2021, 02:00 PM IST
  • ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕೆ?
  • ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದಾರೆಯೇ ಎಂದು ಪರಿಶೀಲಿಸಲು ವಾಟ್ಸಾಪ್ ಕೆಲವು ಸೂಚಕಗಳನ್ನು ಹೊಂದಿಸಿದೆ
  • ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ಸುಲಭವಾದ ಮಾರ್ಗವೆಂದರೆ ಚಾಟ್ ವಿಂಡೋದಲ್ಲಿ ಅವರ ಲಾಸ್ಟ್ ಸೀನ್ ಅಥವಾ ಆನ್‌ಲೈನ್ ಸ್ಟೇಟಸ್ ಹುಡುಕುವುದು
Whatsapp:  ನಿಮ್ಮನ್ನು ಯಾರು Block ಮಾಡಿದ್ದಾರೆ ಎಂದು ತಿಳಿಯಲು ಈ ಸುಲಭ ಟ್ರಿಕ್ ಬಳಸಿ title=
Image courtesy: Whatsapp

ಬೆಂಗಳೂರು: ವಾಟ್ಸಾಪ್‌ನಲ್ಲಿ ನೀವು ಯಾರಿಗಾದರೂ ಸಂದೇಶ ಕಳುಹಿಸುತ್ತಿದ್ದು ಅದು ಅವರಿಗೆ ತಲುಪುತ್ತಿಲ್ಲವೇ? ಅಥವಾ ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕೆ? ಇದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅದಕ್ಕಾಗಿ ನಾಲ್ಕು ಸುಲಭ ವಿಧಾನಗಳಿವೆ. ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದಾರೆಯೇ ಎಂದು ಪರಿಶೀಲಿಸಲು ವಾಟ್ಸಾಪ್ ಕೆಲವು ಸೂಚಕಗಳನ್ನು ಹೊಂದಿಸಿದೆ.

1. ಲಾಸ್ಟ್ ಸೀನ್ / ಆನ್‌ಲೈನ್ ಸ್ಥಿತಿ (Last Seen / Online Status) :
 ವಾಟ್ಸಾಪ್‌ನಲ್ಲಿ (Whatsapp) ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ಸುಲಭವಾದ ಮಾರ್ಗವೆಂದರೆ ಚಾಟ್ ವಿಂಡೋದಲ್ಲಿ ಅವರ ಲಾಸ್ಟ್ ಸೀನ್ ಅಥವಾ ಆನ್‌ಲೈನ್ ಸ್ಟೇಟಸ್ ಹುಡುಕುವುದು. ಒಂದೊಮ್ಮೆ ಯಾರಾದರೂ ನಿಮ್ಮ ನಂಬರ್ ಅನ್ನು ಬ್ಲಾಕ್ ಮಾಡಿದ್ದರೆ ಅಂತಹವರ ಲಾಸ್ಟ್ ಸೀನ್ / ಆನ್‌ಲೈನ್ ಸ್ಟೇಟಸ್ ಮತ್ತು ಡಿಪಿ ಅಲ್ಲಿ ಹಾಕಿರುವ ಫೋಟೋವನ್ನು ನೋಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಲಾಸ್ಟ್ ಸೀನ್', ಆನ್‌ಲೈನ್ ಸ್ಟೇಟಸ್ ಮತ್ತು ಫೋಟೋವನ್ನು ಮರೆಮಾಡಲು ಬಳಕೆದಾರರಿಗೆ ಅವಕಾಶವಿದೆ. ಆದ್ದರಿಂದ ನೀವು ಎರಡನೇ ಹಂತವನ್ನು ಸಹ ಅನುಸರಿಸಬಹುದು.

ಇದನ್ನೂ  ಓದಿ- WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು

2. ಮೆಸೇಜಿಂಗ್‌ನಲ್ಲಿ ಬ್ಲೂ ಟಿಕ್ :
ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ ನಂತರ ನೀಲಿ ಟಿಕ್ ಕಾಣಿಸಿಕೊಳ್ಳುತ್ತದೆ. ಇದರರ್ಥ ವ್ಯಕ್ತಿಯು ಸಂದೇಶವನ್ನು ಓದಿದ್ದಾರೆ. ಡಬಲ್ ಟಿಕ್ ಸಹ ಗೋಚರಿಸಿದರೆ, ಸಂದೇಶವು ತಲುಪಿದೆ ಎಂದು ಅರ್ಥಮಾಡಿಕೊಳ್ಳಿ. ಆದರೆ ಸಿಂಗಲ್ ಟಿಕ್ ಇದ್ದರೆ ಬಳಕೆದಾರರು ಅದನ್ನು ಓದಿಲ್ಲ ಎಂದರ್ಥ. ಹಲವು ಬಾರಿ ನೆಟ್ ಆಫ್ ಇದ್ದಾಗಲೂ ಒಂದೇ ಟಿಕ್ ಕಾಣಿಸುತ್ತದೆ. ಆದರೆ ಆ ವ್ಯಕ್ತಿಯ ವಾಟ್ಸಾಪ್‌ ಚಾಲನೆಯಲ್ಲಿದ್ದೂ ನಿಮ್ಮ ಸಂದೇಶವನ್ನು ಮಾತ್ರ ಆ ವ್ಯಕ್ತಿ ತೆರೆಯುತ್ತಿಲ್ಲ ಎಂದಾದರೆ ಆ ವ್ಯಕ್ತಿ ನಿಮ್ಮ ನಂಬರ್ ಅನ್ನು ನಿರ್ಬಂಧಿಸಿದ್ದಾರೆ ಎಂದು ಅರ್ಥಮಾಡಿಕೊಳ್ಳಿ.

3. ಧ್ವನಿ ಮತ್ತು ವೀಡಿಯೊ ಕರೆಗಳ ವೈಫಲ್ಯ:
ಸಂದೇಶಗಳ ಹೊರತಾಗಿ, ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಧ್ವನಿ ಮತ್ತು ವೀಡಿಯೊ ಕರೆಗಳು (Whatsapp Call) ಕೂಡ ಹೆಚ್ಚು ಜನಪ್ರಿಯವಾಗಿವೆ. ನೀವು ಯಾವುದೇ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ ಕರೆ ಮಾಡುವಾಗ ಸ್ಕ್ರೀನ್ ಮೇಲೆ ರಿಂಗಿಂಗ್ ಎಂದು ಬರೆಯಲ್ಪಟ್ಟಿದ್ದರೆ, ಕರೆ ವ್ಯಕ್ತಿಯನ್ನು ತಲುಪಿದೆ ಎಂದು ಅರ್ಥಮಾಡಿಕೊಳ್ಳಿ. ಆದರೆ ವ್ಯಕ್ತಿಯು ನಿಮ್ಮನ್ನು ನಿರ್ಬಂಧಿಸಿದ್ದರೆ, ಕರೆ ಮತ್ತೆ ಮತ್ತೆ ವಿಫಲಗೊಳ್ಳುತ್ತದೆ. ಆದರೆ ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕರೆ ಸ್ವೀಕರಿಸುವುದಿಲ್ಲ. 

ಇದನ್ನೂ  ಓದಿ- WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ

4. ವಾಟ್ಸಾಪ್‌ನಲ್ಲಿ  ಗ್ರೂಪ್ ರಚಿಸಿ :
ವಾಟ್ಸಾಪ್‌ನಲ್ಲಿ  ಗ್ರೂಪ್ ರಚಿಸುವ ಮೂಲಕ ಕೂಡ ನಿಮ್ಮನ್ನು ಯಾರಾದರೂ ನಿರ್ಬಂಧಿಸಿದ್ದಾರೋ ಇಲ್ಲವೋ ಎಂಬುದು ನಿಮಗೆ ಸುಲಭವಾಗಿ ತಿಳಿಯುತ್ತದೆ. ನೀವು ವಾಟ್ಸಾಪ್‌ನಲ್ಲಿ ಒಂದು ಗುಂಪನ್ನು ರಚಿಸಬೇಕು. ಆ ಗುಂಪಿಗೆ ನೀವು ನಿಮ್ಮನ್ನು ನಿರ್ಬಂಧಿಸಿರಬಹುದು ಎಂದು ನೀವು ಭಾವಿಸುವ ವ್ಯಕ್ತಿಯನ್ನು ಸೇರಿಸಬೇಕು. ನಂತರ 'ಈ ಸಂಪರ್ಕವನ್ನು ಗುಂಪಿನಲ್ಲಿ ಸೇರಿಸಲು ಸಾಧ್ಯವಿಲ್ಲ' (Couldn't Add This Contact On Group) ಎಂಬ ಸಂದೇಶವು ಕಾಣಿಸಿಕೊಂಡರೆ, ಅವರು ನಿಮ್ಮನ್ನು ನಿರ್ಬಂಧಿಸಿದ್ದಾರೆ ಎಂದರ್ಥ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News