Flipkart, Amazonಗಿಂತಲೂ ಕಡಿಮೆ ಬೆಲೆಗೆ ಇಲ್ಲಿ ಸಿಗುತ್ತವೆ ಸರಕುಗಳು .!
Diwali Offers : ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡುವುದರಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮುಂಚೂಣಿಯಲ್ಲಿವೆ. ಆದರೆ, ಈ ಎರಡು ವೆಬ್‌ಸೈಟ್‌ಗಳಿಗಿಂತಲೂ ಅಗ್ಗದ ಬೆಲೆಗೆ ಸರಕುಗಳನ್ನು ಮಾರುತ್ತಿರುವ ವೆಬ್‌ಸೈಟ್‌ಗಳಿವೆ.
Diwali Offers : ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಹಬ್ಬದ ಹಿನ್ನೆಲೆಯಲ್ಲಿ ಜನರು ಶಾಪಿಂಗ್ ನಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಆನ್‌ಲೈನ್ ಶಾಪಿಂಗ್ ಸೈಟ್‌ಗಳತ್ತ ಜನ ಹೆಚ್ಚು ಹೆಚ್ಚು ವಾಲುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಉತ್ಪನ್ನಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡುವುದರಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮುಂಚೂಣಿಯಲ್ಲಿವೆ. ಆದರೆ, ಈ ಎರಡು ವೆಬ್‌ಸೈಟ್‌ಗಳಿಗಿಂತಲೂ ಅಗ್ಗದ ಬೆಲೆಗೆ ಸರಕುಗಳನ್ನು ಮಾರುತ್ತಿರುವ ವೆಬ್‌ಸೈಟ್‌ಗಳಿವೆ. ಇಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಸರಕುಗಳನ್ನು ಖರೀದಿಸಬಹುದು.
ಮೀಶೋ:
ಭಾರತದಲ್ಲಿ ಮೀಶೋ ಅತ್ಯಂತ ಟ್ರೆಂಡಿಂಗ್ ಶಾಪಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇತರ ಆನ್‌ಲೈನ್ ವೆಬ್‌ಸೈಟ್‌ಗಳಿಗೆ ಹೋಲಿಸಿದರೆ, ಇಲ್ಲಿ ಉತ್ಪನ್ನಗಳನ್ನು ಅರ್ಧದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸೈಟ್ ಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಬಟ್ಟೆ ಅಥವಾ ಮಕ್ಕಳ ಆಟಿಕೆಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ದೀಪಾವಳಿಯಲ್ಲಿ ಶಾಪಿಂಗ್ ಮಾಡುವ ಯೋಚನೆ ಇದ್ದರೆ, ಮಿಶೋ ಉತ್ತಮ ಆಯ್ಕೆಯಾಗಿದೆ. ಇಲ್ಲಿ ಶೇಕಡಾ 50 ಕ್ಕಿಂತ ಹೆಚ್ಚಿನ ರಿಯಾಯಿತಿ ಕೂಡಾ ಸಿಗುತ್ತೆ.
ಇದನ್ನೂ ಓದಿ : ಜನರ ವೈಯಕ್ತಿಕ ಡೇಟಾವನ್ನು ಶೇರ್ ಮಾಡುತ್ತಿದ್ದ ಆರೋಪ : ಈ ಮಿಡಿಯಾ ಸೈಟ್ ಗೆ ಸರ್ಕಾರ ನಿಷೇಧ
ಶಾಪ್ಸಿ :
ಶಾಪ್ಸಿ ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮಾಡುವುದರ ಜೊತೆಗೆ ಹಣ ಕೂಡಾ ಸಂಪಾದಿಸಬಹುದು. ಈ ವೆಬ್‌ಸೈಟ್ ಇತ್ತೀಚೆಗಷ್ಟೇ ಪರಿಚಿತವಾಗಿದ್ದು, ಇಲ್ಲಿ ಜನ ಹೆಚ್ಚು ಹೆಚ್ಚು ಶಾಪಿಂಗ್ ಮಾಡುತ್ತಿದ್ದಾರೆ. ಅಲ್ಲದೆ, ಇಲ್ಲಿ ಶಾಪಿಂಗ್ ಮಾಡುವ ಮೂಲಕ ಹಣ ಕೂಡಾ ಉಳಿತಾಯ ಮಾಡುತ್ತಿದ್ದಾರೆ. ಈ ಹಬ್ಬದ ಸೀಸನ್ ನಲ್ಲಿ ಶಾಪಿಂಗ್ ಮೂಲಕ ಸಾಕಷ್ಟು ಹಣ ಉಳಿಸಬೇಕಾದರೆ, ಇದು ಉತ್ತಮ ವೇದಿಕೆಯಾಗಿದೆ.
ಇದನ್ನೂ ಓದಿ : BSNL ಅಗ್ಗದ ಪ್ಲಾನ್: 300 ರೂ.ಗಿಂತ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಲಾಭ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.