ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್: iPhone 13 ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ

Flipkart Big Diwali Sale: ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ನಿನ್ನೆಯಿಂದ ಅಂದರೆ ಅಕ್ಟೋಬರ್ 11ರಿಂದ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಮಾರಾಟದಲ್ಲಿ ಖರೀದಿದಾರರು ಐಫೋನ್ 13 ಅನ್ನು ಕೇವಲ 45 ಸಾವಿರಕ್ಕೆ ಖರೀದಿಸಬಹುದಾಗಿದೆ. ಇದರ ಹೊರತಾಗಿ ಇತ್ತೀಚಿನ 5G ಸ್ಮಾರ್ಟ್‌ಫೋನ್‌ಗಳಲ್ಲಿ ಸಹ ಭಾರೀ ರಿಯಾಯಿತಿ ಲಭ್ಯವಾಗುತ್ತಿದೆ. 

Written by - Yashaswini V | Last Updated : Oct 12, 2022, 07:53 AM IST
  • ಅಕ್ಟೋಬರ್ 10 ರ ಮಧ್ಯರಾತ್ರಿಯಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಅಕ್ಟೋಬರ್ 16 ರವರೆಗೆ ನಡೆಯಲಿದೆ.
  • ಈ ಸೇಲ್ನಲ್ಲಿ ಐಫೋನ್ 13 ಅನ್ನು ಕೇವಲ 45 ಸಾವಿರಕ್ಕೆ ಖರೀದಿಸುವ ಅವಕಾಶವಿದೆ
  • ಇತ್ತೀಚೆಗಷ್ಟೇ ಬಿಡುಗಡೆಯಾದ ನಥಿಂಗ್ ಫೋನ್ (1) ಕೂಡ ಭಾರಿ ರಿಯಾಯಿತಿಯಲ್ಲಿ ಲಭ್ಯವಾಗಲಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್: iPhone 13 ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ  title=
Flipkart Big Diwali Sale

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್:  ಕಡಿಮೆ ಬೆಲೆಯಲ್ಲಿ ಐಫೋನ್,  ಇತ್ತೀಚಿನ 5G ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ನೀವು  ಇತ್ತೀಚಿನ ಬಿಗ್ ಬಿಲಿಯನ್ ಡೇಸ್ ಮಾರಾಟವನ್ನು ಮಿಸ್ ಮಾಡಿಕೊಂಡಿದ್ದೀರಾ... ಚಿಂತೆಬಿಡಿ, ಅತಿದೊಡ್ಡ ಇ-ಕಾಮರ್ಸ್ ಪೋರ್ಟಲ್ ಈ ಸೀಸನ್‌ನ ಅತಿದೊಡ್ಡ ಮಾರಾಟದೊಂದಿಗೆ ಮತ್ತೆ ಬಂದಿದೆ.  ಫ್ಲಿಪ್‌ಕಾರ್ಟ್‌ನ ಇತ್ತೀಚಿನ ಆಫರ್ ಈ ಹಬ್ಬದ ಋತುವಿನಲ್ಲಿ ಐಫೋನ್, ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿರುವ ಲಕ್ಷಾಂತರ ಜನರಿಗೆ ಪರಿಹಾರವಾಗಿದೆ. ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ನಿನ್ನೆಯಿಂದ ಅಂದರೆ ಅಕ್ಟೋಬರ್ 11ರಿಂದ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಮಾರಾಟದಲ್ಲಿ ಖರೀದಿದಾರರು ಐಫೋನ್ 13 ಅನ್ನು ಕೇವಲ 45 ಸಾವಿರಕ್ಕೆ ಖರೀದಿಸಬಹುದಾಗಿದೆ. ಇದರ ಹೊರತಾಗಿ ಇತ್ತೀಚಿನ 5G ಸ್ಮಾರ್ಟ್‌ಫೋನ್‌ಗಳಲ್ಲಿ ಸಹ ಭಾರೀ ರಿಯಾಯಿತಿ ಲಭ್ಯವಾಗುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ನಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಾಗಲಿದೆ ಎಂದು ತಿಳಿಯೋಣ...

ಅಕ್ಟೋಬರ್ 10 ರ ಮಧ್ಯರಾತ್ರಿಯಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಅಕ್ಟೋಬರ್ 16 ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ   ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಫ್ಯಾಷನ್ ಪರಿಕರಗಳು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಲಭ್ಯವಾಗಲಿದೆ. ಎಸ್‌ಬಿಐ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವವರಿಗೆ  ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. 

ಇದನ್ನೂ ಓದಿ- YouTube Diwali Offer: ಈ ದೀಪಾವಳಿಯಲ್ಲಿ ಯೂಟ್ಯೂಬ್ ನೀಡುತ್ತಿದೆ ಬಂಪರ್ ಆಫರ್, ಕೇವಲ 10 ರೂ.ಗೆ ಸಿಗಲಿದೆ ಈ ಸೌಲಭ್ಯ

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್:  ಐಫೋನ್ 13 ಅನ್ನು ಕೇವಲ 45 ಸಾವಿರಕ್ಕೆ ಖರೀದಿಸುವ ಅವಕಾಶ:
ವೆಬ್‌ಸೈಟ್‌ನಲ್ಲಿ 128 ಜಿಬಿ ರೂಪಾಂತರದೊಂದಿಗೆ ಐಫೋನ್ 13 ಬೆಲೆ 58,900 ರೂ. ಆದಾಗ್ಯೂ, ನೀವು ಅದರ ಮೇಲೆ ಎರಡು ಸಾವಿರ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ, ಫ್ಲಿಪ್‌ಕಾರ್ಟ್ 16,900 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ, ಅದರ ನಂತರ ನೀವು A15 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ iPhone 13 ಮತ್ತು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಸಮಯದಲ್ಲಿ 45000 ಗೆ ಖರೀದಿಸಬಹುದು. ಆದರೆ ಇದು ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಫೋನ್‌ನ ಮೌಲ್ಯವನ್ನು ಅವಲಂಬಿಸಿರುತ್ತದೆ. 

ಇತ್ತೀಚೆಗಷ್ಟೇ ಬಿಡುಗಡೆಯಾದ ನಥಿಂಗ್ ಫೋನ್ (1) ಕೂಡ ಭಾರಿ ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್‌ನ ದೀಪಾವಳಿ ಮಾರಾಟದಲ್ಲಿ, ಈ ಫೋನ್ 27,000 ಬೆಲೆಯಲ್ಲಿ ಲಭ್ಯವಿದೆ. ಈ ಫೋನ್‌ನಲ್ಲಿ 16,900 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ. ಸ್ಮಾರ್ಟ್ಫೋನ್ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ, ಇದು 128GB ಮತ್ತು 256GB ರೂಪಾಂತರಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ- Nokia 5 Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ನೋಕಿಯಾದ 5G ಸ್ಮಾರ್ಟ್‌ಫೋನ್!

ಏತನ್ಮಧ್ಯೆ, Samsung Z Flip 3 ರಿಯಾಯಿತಿಯ ನಂತರ 59,999 ರೂ.ಗೆ ಲಭ್ಯವಿದೆ. ಸ್ಮಾರ್ಟ್‌ಫೋನ್‌ನ ವಾಸ್ತವಿಕ ಬೆಲೆ 95,999 ರೂ. ಆಗಿದೆ. ಆದರೆ, ಇದರಲ್ಲಿ ಲಭ್ಯವಿರುವ ಕೊಡುಗೆಗಳ ಪ್ರಯೋಜನವನ್ನು ಬಳಸಿಕೊಂಡು ಇದನ್ನು  60000 ರೂ.ಗಳಿಗೆ ಖರೀದಿಸಬಹುದಾಗಿದೆ. ಖರೀದಿದಾರರಿಗೆ ಇದರ ಮೇಲೆ 21,900ರೂ. ವಿನಿಮಯ ಕೊಡುಗೆಯೂ ಸಿಗಲಿದೆ. ಎಸ್‌ಬಿಐ ಬ್ಯಾಂಕ್ ಕಾರ್ಡ್ ಹೊಂದಿರುವವರು 10 ಪ್ರತಿಶತದವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. Z Flip 3 ಹೊರತುಪಡಿಸಿ, Samsung Galaxy S21 FE 5G ಸಹ 34,000 ರೂ.ಗಳಿಗೆ ಲಭ್ಯವಿದೆ ಮತ್ತು Samsung Galaxy S22+ ಸ್ಮಾರ್ಟ್‌ಫೋನ್ ಅನ್ನು 57,000 ರೂ.ಗೆ ಖರೀದಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News