ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿದೆ Instagram, ಶೀಘ್ರವೇ ಸಿಗಲಿದೆ New Audio Feature
Instagram New Feature - ಇತ್ತೀಚಿಗೆ ಅಮೇರಿಕಾದಲ್ಲಿ Clubhouse App ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಈ ಆಪ್ ನಲ್ಲಿ ಕೇವಲ ಆಡಿಯೋ ಕ್ಲಿಪ್ ಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ಅಂದರೆ ನಿಮಗೆ ಕ್ಲಬ್ ಹೌಸ್ ಬಳಸಲು ಟೈಪ್ ಮಾಡುವ ಅಥವಾ ಫೋಟೋ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಚಲಿತವಾಗುತ್ತಿರುವ ಈ ಆಪ್ ಅನ್ನು ಗಮನಿಸಿರುವ ಇನ್ಸ್ಟಾಗ್ರಾಮ್ ಆಡಿಯೋ ವೈಶಿಷ್ಟ್ಯ ಜಾರಿಗೆ ತರಲು ಯೋಚಿಸುತ್ತಿದೆ.
ನವದೆಹಲಿ: Instagram New Update - ಸಾಮಾಜಿಕ ಫೋಟೋ ಹಂಚಿಕೆಯ ತಾಣ Instagram ಇದೀಗ ತನ್ನನ್ನು ತಾನು ಮತ್ತಷ್ಟು ಪ್ರಚಲಿತಗೊಳಿಸಲು ಯೋಜನೆ ರೂಪಿಸುತ್ತಿದೆ. ಇಂಟರ್ನೆಟ್ ನಲ್ಲಿ ಎಂಗೇಜ್ಮೆಂಟ್ ರೇಟ್ ಹಾಗೂ ರೆವಿನ್ಯೂ ಹೆಚ್ಚಿಸುವ ಉದ್ದೇಶದಿಂದ ಇನ್ಸ್ಟಾಗ್ರಾಮ್ ಇದೀಗ ಮತ್ತೊಂದು ಜಬರ್ದಸ್ತ್ ವೈಶಿಷ್ಟ್ಯ ಬಿಡುಗಡೆಗೊಳಿಸಲಿದೆ. ಈ ಕುರಿತಾದ ಹೊಸ ಚರ್ಚೆಗಳೇನು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ಬರಲಿದೆ ಆಡಿಯೋ ವೈಶಿಷ್ಟ್ಯ
ಟೆಕ್ ಸೈಟ್ ಆಗಿರುವ Pocket-lint ಪ್ರಕಾರ Instagram ಇದೀಗ ನೂತನ ಆಡಿಯೋ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿಯೇ ನೀವು ಈ ವೈಶಿಷ್ಟ್ಯವನ್ನು ಬಳಸಿ ಫೋಟೋ ಹಾಗೂ ಶಾರ್ಟ್ ವಿಡಿಯೋಗಳ ಜೊತೆಗೆ ಹಾರ್ಟ್ ವಿಡಿಯೋ ಆಗೂ ಆಡಿಯೋ ಫೈಲ್ ಗಳನ್ನು ಕೂಡ ಅಪ್ಲೋಡ್ ಮಾಡಬಹುದು. ಈ ಕುರಿತು ತಜ್ಞರು ನೀಡಿರುವ ಮಾಹಿತಿ ಪ್ರಕಾರ, ಇನ್ಸ್ಟಾಗ್ರಾಮ್ ಈ ನೂತನ ವೈಶಿಷ್ಟ್ಯಗಳ ಬಿಡುಗಡೆಯ ಅಡ್ವಾನ್ಸ್ಡ್ ಸ್ಟೇಜ್ ನಲ್ಲಿದೆ ಎನ್ನಲಾಗಿದೆ. ಶೀಘ್ರವೇ ಇದನ್ನು ಬಳಕೆದಾರರಿಗಾಗಿ ಅಪ್ಡೇಟ್ ಮಾಡಲಾಗುವುದು.
Clubhouse ಅನ್ನು ಕಾಪಿ ಮಾಡುವ ಸಿದ್ಧತೆ
ಇತ್ತೀಚಿಗೆ ಅಮೇರಿಕಾದಲ್ಲಿ Clubhouse App ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಈ ಆಪ್ ನಲ್ಲಿ ಕೇವಲ ಆಡಿಯೋ ಕ್ಲಿಪ್ ಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. ಅಂದರೆ ನಿಮಗೆ ಕ್ಲಬ್ ಹೌಸ್ ಬಳಸಲು ಟೈಪ್ ಮಾಡುವ ಅಥವಾ ಫೋಟೋ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಚಲಿತವಾಗುತ್ತಿರುವ ಈ ಆಪ್ ಅನ್ನು ಗಮನಿಸಿರುವ ಇನ್ಸ್ಟಾಗ್ರಾಮ್ ಆಡಿಯೋ ವೈಶಿಷ್ಟ್ಯ ಜಾರಿಗೆ ತರಲು ಯೋಚಿಸುತ್ತಿದೆ.
ಇದನ್ನೂ ಓದಿ- New Facebook Update: ಭಾರತದ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook
ಚೀನಾ ಆಪ್ TikTok ಅನ್ನು ಕೂಡ ಕಾಪಿ ಮಾಡುವ ಸಿದ್ಧತೆ
ಇತ್ತೀಚೆಗಷ್ಟೇ ಪ್ರಕಟಗೊಂಡ ಮಾಧ್ಯಮ ವರದಿಗಳ ಪ್ರಕಾರ ಚೀನಾದ ಶಾರ್ಟ್ ವಿಡಿಯೋ ಆಪ್ TikTokಕೂಡ ಚೀನಾದಲ್ಲಿ ಆಡಿಯೋ ಶೇರಿಂಗ್ ಆಪ್ ತಯಾರಿಸುವ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ, ಟಿಕ್ ಟಾಕ್ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ- ಹೊಸ ವಿನ್ಯಾಸದೊಂದಿಗೆ ಬರುತ್ತಿದೆ Instagram
ಇನ್ಮುಂದೆ ಇನ್ಸ್ಟಾಗ್ರಾಮ್ Reels ವಿಡಿಯೋ ಕೂಡ Facebookನಲ್ಲಿ ಕಾಣಿಸಲಿವೆ
ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ Facebook ಭಾರತೀಯ ಬಳಕೆದಾರರಿಗಾಗಿ Facebook News Feedಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಜೋಡಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ ಭಾರತದಲ್ಲಿ ಕೆಲ Instagram ಬಳಕೆದಾರರು ತಮ್ಮ 30 ಸೆಕೆಂಡ್ ಗಳ Reels ವಿಡಿಯೋಗಳನ್ನು Facebook News Feedಗಳಲ್ಲಿ ಹಂಚಿಕೊಳ್ಳಬಹುದು. ಆದರೆ, ಇದುವರೆಗೆ ಈ ಹೊಸ ವೈಶಿಷ್ಟ್ಯ ಕೇವಲ ಟೆಸ್ಟ್ ಮೋಡ್ ನಲ್ಲಿ ಮಾತ್ರ ಇದೆ. ಬಹುಬೇಗನೆ ಇದನ್ನು ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು ಎನ್ನಲಾಗುತ್ತಿದೆ.
ಇದನ್ನೂ ಓದಿ- Instagram Reels New Feature: Reels ನಲ್ಲಿ ಬಹುನಿರೀಕ್ಷಿತ ವೈಶಿಷ್ಟ್ಯ ಪರಿಚಯಿಸಿದ Instagram
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.