Instagram Latest Update: ಫೇಸ್‌ಬುಕ್ ಒಡೆತನದ ಫೋಟೋ ಹಂಚಿಕೆ ವೇದಿಕೆ ಡೆಸ್ಕ್‌ಟಾಪ್‌ನಲ್ಲಿ ಸ್ಟೋರೀಸ್ (Instagram Stories) ವೀಕ್ಷಿಸಲು ಇನ್‌ಸ್ಟಾಗ್ರಾಮ್ ಹೊಸ ಇಂಟರ್ಫೇಸ್ ಅನ್ನು ಪರೀಕ್ಷಿಸುತ್ತಿದೆ. ವರದಿಯ ಪ್ರಕಾರ ಹೊಸ ವಿನ್ಯಾಸದಲ್ಲಿ ಡೆಸ್ಕ್‌ಟಾಪ್‌ನಲ್ಲಿನ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಕರೋಸೆಲ್‌ಗಳಲ್ಲಿ (Carousels) ಗೋಚರಿಸುತ್ತವೆ. ಇದು ಪುಟದಾದ್ಯಂತ ತೋರಿಸುವ ಸಿಂಗಲ್-ಟೈಲ್ ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಇದರಲ್ಲಿ ನ್ಯಾವಿಗೇಷನ್ ಗುಂಡಿಗಳನ್ನು ಒದಗಿಸಲಾಗಿದ್ದು ಬಳಕೆದಾರರು ಸ್ಟೋರೀಸ್ ಮೇಲೆ ಹಸ್ತಚಾಲಿತವಾಗಿ ಕ್ಲಿಕ್ ಮಾಡಬೇಕಾಗುತ್ತದೆ ಅಥವಾ ಅವುಗಳನ್ನು ಸ್ವಯಂಚಾಲಿತವಾಗಿ ಒಂದೊಂದಾಗಿ ಪ್ಲೇ ಮಾಡಲು ಆಯ್ಕೆ ಮಾಡಬಹುದು. ಹೊಸ ವಿನ್ಯಾಸವನ್ನು ಯಾವಾಗ ಪರಿಚಯಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್‌ಸ್ಟಾಗ್ರಾಮ್ (Instagram) ಸ್ಟೋರೀಸ್ ಇಡೀ ಪರದೆಯಲ್ಲಿ ಗೋಚರಿಸುತ್ತದೆ ಮತ್ತು ಮುಂದಿನ ಬಳಕೆದಾರರ ಸ್ಟೋರಿ ಸ್ವೈಪ್ ಮಾಡಲು ಯಾವುದೇ ಆಯ್ಕೆಗಳಿಲ್ಲ, ಆದರೂ ಇದು ನ್ಯಾವಿಗೇಷನ್ ಬಟನ್‌ಗಳನ್ನು ಹೊಂದಿದೆ. ಎಂಗಡ್ಜೆಟ್ (Engadget) ವರದಿಯ ಪ್ರಕಾರ, ಹೊಸ ವಿನ್ಯಾಸವು ಡೆಸ್ಕ್‌ಟಾಪ್‌ನಲ್ಲಿನ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಅನ್ನು ಖಂಡಿತವಾಗಿಯೂ ಹೆಚ್ಚು ಆಕರ್ಷಕವಾಗಿ ಮತ್ತು ಸ್ಪಷ್ಟವಾಗಿ ನೋಡಲು ಅನುವು ಮಾಡುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ
ಎಂಗಡ್ಜೆಟ್‌ನ ವರದಿಯ ಪ್ರಕಾರ ಇನ್‌ಸ್ಟಾಗ್ರಾಮ್ ಈಗಾಗಲೇ ಹೊಸ ವಿನ್ಯಾಸವನ್ನು ಪರೀಕ್ಷಿಸಲು ಪ್ರಾರಂಭಿಸಿದೆ, ಆದರೆ ಎಷ್ಟು ಮಂದಿ ಬಳಕೆದಾರರು ಹೊಸ ವಿನ್ಯಾಸವನ್ನು ನೋಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಇನ್‌ಸ್ಟಾಗ್ರಾಮ್ ಸ್ಟೋರೀಸ್ ಹೊಸ, ವಿಭಿನ್ನ ವಿನ್ಯಾಸವನ್ನು ನೋಡುತ್ತಿರುವವರಿಗೆ ಈ ಹೊಸ ಬೆಳವಣಿಗೆ ಶಾಶ್ವತವಾಗಿದೆಯೇ? ಪರೀಕ್ಷಾರ್ಥವೆ ಎಂಬುದನ್ನು ಇನ್ನೂ ಸ್ಪಷ್ಟವಾಗಿಲ್ಲ. ಇನ್ಸ್ಟಾಗ್ರಾಮ್ ವಕ್ತಾರರು ಕಂಪನಿಯು ಹೊಸ ಇನ್ಸ್ಟಾಗ್ರಾಮ್ ಸ್ಟೋರೀಸ್ ವಿನ್ಯಾಸವನ್ನು ನಿಜವಾಗಿಯೂ ಪರೀಕ್ಷಿಸುತ್ತಿದ್ದಾರೆ ಮತ್ತು ಇನ್ಸ್ಟಾಗ್ರಾಮ್ ಬಳಕೆದಾರರು ಕಳೆದ ತಿಂಗಳು ಹೊಸ ವೈಶಿಷ್ಟ್ಯವನ್ನು ಕಂಡಿದ್ದಾರೆ ಎಂದು ದೃಢಪಡಿಸಿತು. ಆದರೆ ಕಂಪನಿಯು ಅದರ ಜಾಗತಿಕ ಬಳಕೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ.
ಇದನ್ನೂ ಓದಿ : ಫೇಸ್‌ಬುಕ್ ಮೆಸೆಂಜರ್‌ನಲ್ಲಿ Vanish Mode, ಸ್ವಯಂಚಾಲಿತವಾಗಿ ಕಣ್ಮರೆ ಆಗುತ್ತೆ ಮೆಸೇಜ್
ಇನ್‌ಸ್ಟಾಗ್ರಾಮ್ 2020 ರಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳು, ಇನ್‌ಸ್ಟಾಗ್ರಾಮ್ ಲೈವ್‌ಗೆ ವರ್ಧನೆಗಳು, ವ್ಯಾನಿಶ್ ಮೋಡ್ (Vanish Mode) ಮತ್ತು ಇನ್‌ಸ್ಟಾಗ್ರಾಮ್ ಇನ್‌ಬಾಕ್ಸ್‌ನೊಂದಿಗೆ ಫೇಸ್‌ಬುಕ್ ಮೆಸೆಂಜರ್‌ನ ಏಕೀಕರಣದಂತಹ ವೈಶಿಷ್ಟ್ಯಗಳನ್ನು ಪರಿಚಯಿಸಿತ್ತು. ಇದೀಗ ಇನ್‌ಸ್ಟಾಗ್ರಾಮ್ನ ಹೊಸ ವಿನ್ಯಾಸಕ್ಕಾಗಿ ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.