7 ಸೀಟರ್ ಬಿಟ್ಟುಬಿಡಿ.. ಬಂದೇಬಿಡ್ತು 10 ಸೀಟರ್’ನ ಬೆಸ್ಟ್ ಕಾರು: ಹಿಂದೆಂದೂ ಕಂಡಿರದ ವೈಶಿಷ್ಟ್ಯ; ಭಾರಿ ಅಗ್ಗದ ಬೆಲೆಯಲ್ಲಿ!
10 Seater Force Cityline car: ಇದು ಯಾವುದೇ ವಿದೇಶಿ ತಯಾರಿಕಾ ಕಂಪನಿಯ ಕಾರಲ್ಲ. ಬದಲಾಗಿ ಭಾರತೀಯ ಕಾರು ತಯಾರಿಕಾ ಕಂಪನಿಯಾದ ಫೋರ್ಸ್’ನ ಸಿಟಿಲೈನ್ ಕಾರಾಗಿದೆ. ಇದು ಕಂಪನಿಯ ಫೋರ್ಸ್ ಟ್ರಾಕ್ಸ್ ಕ್ರೂಸರ್’ನ ಅಪ್ಡೇಟೆಡ್ ಆವೃತ್ತಿಯಾಗಿದೆ. `ಕುಟುಂಬ ಮತ್ತು ಸ್ನೇಹಿತರೊಂದಿಗೆ ಸುದೀರ್ಘ ಪ್ರವಾಸ ಕೈಗೊಳ್ಳಲು ಸಿಟಿಲೈನ್ ಪರಿಪೂರ್ಣ ಆಯ್ಕೆಯಾಗಿದೆ` ಎಂದು ಕಂಪನಿ ಹೇಳಿದೆ.
10 Seater Force Cityline car: ಇದುವರೆಗೆ ನೀವು ಕೇಳಿದ್ದು 5-ಸೀಟರ್, 6-ಸೀಟರ್ ಅಥವಾ 7-ಸೀಟರ್ ಕಾರುಗಳ ಬಗ್ಗೆ. ಆದರೆ ಈಗ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 10-ಸೀಟರ್ ಕಾರುಗಳು. ಇದು ನಂಬಲು ಅಸಾಧ್ಯ. ಆದರೆ ಇದೇ ನಿಜ. 10 ಆಸನಗಳ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: Surya Grahan 2023: ಸೂರ್ಯಗ್ರಹಣದ ಸಮಯ ಮತ್ತು ಸೂತಕ ಕಾಲದ ಬಗ್ಗೆ ತಿಳಿಯಿರಿ
ಇದು ಯಾವುದೇ ವಿದೇಶಿ ತಯಾರಿಕಾ ಕಂಪನಿಯ ಕಾರಲ್ಲ. ಬದಲಾಗಿ ಭಾರತೀಯ ಕಾರು ತಯಾರಿಕಾ ಕಂಪನಿಯಾದ ಫೋರ್ಸ್’ನ ಸಿಟಿಲೈನ್ ಕಾರಾಗಿದೆ. ಇದು ಕಂಪನಿಯ ಫೋರ್ಸ್ ಟ್ರಾಕ್ಸ್ ಕ್ರೂಸರ್’ನ ಅಪ್ಡೇಟೆಡ್ ಆವೃತ್ತಿಯಾಗಿದೆ. 'ಕುಟುಂಬ ಮತ್ತು ಸ್ನೇಹಿತರೊಂದಿಗೆ ಸುದೀರ್ಘ ಪ್ರವಾಸ ಕೈಗೊಳ್ಳಲು ಸಿಟಿಲೈನ್ ಪರಿಪೂರ್ಣ ಆಯ್ಕೆಯಾಗಿದೆ' ಎಂದು ಕಂಪನಿ ಹೇಳಿದೆ. ಇನ್ನು ಇದರಲ್ಲಿರುವ ಎಲ್ಲಾ ಆಸನಗಳು ಮುಂಭಾಗಕ್ಕೆ ಮುಖ ಮಾಡಿದ್ದು, ಇದರಿಂದಾಗಿ ಟ್ಯಾಕ್ಸಿಯ ಅನುಭವವನ್ನು ನೀಡುವುದಿಲ್ಲ.
ಫೋರ್ಸ್ ಸಿಟಿಲೈನ್’ನಲ್ಲಿ ಚಾಲಕನನ್ನು ಹೊರತುಪಡಿಸಿ 9 ಜನರು ಕುಳಿತುಕೊಳ್ಳಬಹುದು. ಚಾಲಕ ಸೇರಿದಂತೆ 10 ಜನರು ಕುಳಿತುಕೊಳ್ಳಬಹುದು. 7 ಸೀಟರ್ ಕಾರುಗಳಲ್ಲಿ 3 ಸಾಲುಗಳಳಿದ್ದರೆ, ಫೋರ್ಸ್ ಸಿಟಿಲೈನ್’ನಲ್ಲಿ 10 ಜನರು ಕುಳಿತುಕೊಳ್ಳಲು 4 ಸಾಲುಗಳನ್ನು ನೀಡಲಾಗಿದೆ. ಇದರ ಮೊದಲ ಸಾಲಿನಲ್ಲಿ 2 ಜನರು, ಎರಡನೇ ಸಾಲಿನಲ್ಲಿ 3, ಮೂರನೇ ಸಾಲಿನಲ್ಲಿ 2 ಮತ್ತು ನಾಲ್ಕನೇ ಸಾಲಿನಲ್ಲಿ 3 ಜನರು ಕುಳಿತುಕೊಳ್ಳಬಹುದು. ಇದರ ಆರಂಭಿಕ ಬೆಲೆ ರೂ.16.5 ಲಕ್ಷ (ಎಕ್ಸ್ ಶೋ ರೂಂ).
ಸೈಜ್ ಮತ್ತು ಎಂಜಿನ್:
ಫೋರ್ಸ್ ಸಿಟಿಲೈನ್ ಸಾಕಷ್ಟು ದೊಡ್ಡ ಕಾರು. ಇದರ ಉದ್ದ 5120mm, ಅಗಲ 1818mm, ಎತ್ತರ 2027mm, ವೀಲ್ ಬೇಸ್ 3050mm ಮತ್ತು ಗ್ರೌಂಡ್ ಕ್ಲಿಯರೆನ್ಸ್ 191mm. ಮುಂಭಾಗದ ವಿನ್ಯಾಸವು ಟಾಟಾ ಸುಮೊವನ್ನು ಹೋಲುತ್ತದೆ. ಇದು 2.6 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 91 ಅಶ್ವಶಕ್ತಿ ಮತ್ತು 250 Nm ಟಾರ್ಕ್ ಅನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಸಹ ಹೊಂದಿದೆ. ಈ ಕಾರಿನ ತೂಕ 3140 ಕೆ.ಜಿ. ಇದು 63.5 ಲೀಟರ್ ಇಂಧನ ಟ್ಯಾಂಕ್ ಸಹ ಇದೆ.
ಇದನ್ನೂ ಓದಿ: Vastu plants: ಈ ಸಸ್ಯವು ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ, ಇಂದೇ ಮನೆಗೆ ತನ್ನಿ!
ಆಂತರಿಕ ಮತ್ತು ವೈಶಿಷ್ಟ್ಯಗಳು
ಇದು ಶಕ್ತಿಯುತ ಡ್ಯುಯಲ್ ಹವಾನಿಯಂತ್ರಣ, ಸೆಂಟ್ರಲ್ ಲಾಕಿಂಗ್ ಪವರ್ ವಿಂಡೋಗಳು, ಮಲ್ಟಿ USB ಚಾರ್ಜಿಂಗ್ ಪೋರ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಅಲರ್ಟ್, ಬಾಟಲ್ ಹೋಲ್ಡರ್’ಗಳು ಮತ್ತು ಲಗೇಜ್ ಇಟ್ಟುಕೊಳ್ಳಲು ಕೊನೆಯ ಸಾಲಿನ ಸೀಟುಗಳ ಬಳಿ ಸ್ಥಳಾವಕಾಶ ಮಾಡಲಾಗಿದ್ದು, ಇದನ್ನು ಮಡಿಚಬಹುದಾಗಿದೆ. ಹಿಂದೆಂದೂ ಕಂಡಿರದ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಪ್ರಯಾಣಿಕರು ಆರಾಮವಾಗಿ ವಾಹನದಲ್ಲಿ ಪ್ರಯಾಣಿಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.