Surya Grahan 2023: ಸೂರ್ಯಗ್ರಹಣದ ಸಮಯ ಮತ್ತು ಸೂತಕ ಕಾಲದ ಬಗ್ಗೆ ತಿಳಿಯಿರಿ

ಸೂರ್ಯಗ್ರಹಣ 2023: ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗ ಸೂತಕ ಕಾಲ ಯಾವ ಸಮಯಕ್ಕೆ ಶುರುವಾಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಈ ಬಾರಿ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.  

Written by - Puttaraj K Alur | Last Updated : Apr 19, 2023, 07:52 PM IST
  • ಏಪ್ರಿಲ್ 20ರಂದು ವರ್ಷದ ಮೊದಲ ಸೂರ್ಯಗ್ರಹಣವು ಸಂಭವಿಸಲಿದೆ
  • ಸೂರ್ಯಗ್ರಹಣ ಬೆಳಗ್ಗೆ 7.4ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.29ಕ್ಕೆ ಕೊನೆಗೊಳ್ಳಲಿದೆ
  • ಸೂತಕ ಅವಧಿಯು ಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ
Surya Grahan 2023: ಸೂರ್ಯಗ್ರಹಣದ ಸಮಯ ಮತ್ತು ಸೂತಕ ಕಾಲದ ಬಗ್ಗೆ ತಿಳಿಯಿರಿ   title=
ಸೂರ್ಯ ಗ್ರಹಣದ ಸೂತಕ ಕಾಲ

ಸೂರ್ಯ ಗ್ರಹಣದ ಸೂತಕ ಕಾಲ: ಗ್ರಹಣದ ಬಗ್ಗೆ ಹೇಳಿದಾಗ ಬಹುತೇಕರ ಮನಸ್ಸಿನಲ್ಲಿ ಭಯದ ಭಾವನೆ ಮೂಡುತ್ತದೆ. ಏಕೆಂದರೆ ರಾಹು-ಕೇತುವು ಸೂರ್ಯ ಅಥವಾ ಚಂದ್ರನಂತಹ ಗ್ರಹಗಳ ಜೊತೆಗೆ ಸೆಣಸಿದಾಗ ಅದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗ್ರಹಣ ಎಂದರೆ ಪ್ರಮುಖ ಗ್ರಹದಲ್ಲಿ ಬಿಕ್ಕಟ್ಟು ಉಂಟಾಗುತ್ತದೆ ಎಂದರ್ಥ. ಸೂರ್ಯಗ್ರಹಣದ ಸಮಯ ಮತ್ತು ಸೂತಕದ ಅವಧಿಯ ಬಗ್ಗೆ ತಿಳಿಯಿರಿ.  

ಈ ವರ್ಷದ ಮೊದಲ ಗ್ರಹಣವು ಅಮವಾಸ್ಯೆಯಂದು ಅಂದರೆ ನಾಳೆ(ಏಪ್ರಿಲ್ 20) ವೈಶಾಖ ಮಾಸದ ಕೃಷ್ಣ ಪಕ್ಷದಲ್ಲಿ ಸಂಭವಿಸುತ್ತದೆ. ಸೂರ್ಯನ ಮೇಲೆ ಈ ಖಂಡ್ಗ್ರಾಸ್ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಜಗತ್ತಿನ ಯಾವ ಭಾಗದಲ್ಲಿ ಈ ಗ್ರಹಣ ಸಂಭವಿಸುತ್ತಿದೆಯೋ, ಅಲ್ಲಿನ ನಿವಾಸಿಗಳ ಮೇಲೆ ಇದು ಖಂಡಿತ ಪರಿಣಾಮ ಬೀರುತ್ತದೆ. ಆದರೆ ಅದು ಗೋಚರಿಸದ ಪ್ರದೇಶದ ಜನರು ಚಿಂತಿಸಬೇಕಾಗಿಲ್ಲ.

ಇದನ್ನೂ ಓದಿ: Kedar Yog: ಅದೃಷ್ಟವಂತರ ಜಾತಕದಲ್ಲಿರುತ್ತದೆ ಈ ಯೋಗ, ಅಪಾರ ಧನ-ಸಂಪತ್ತು, ಸ್ಥಾನಮಾನದ ಒಡೆಯರಾಗುತ್ತಾರೆ!

ಸೂತಕದ ಅವಧಿ

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯಗ್ರಹಣದ ಸಮಯವು ಬೆಳಗ್ಗೆ 7.4ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.29ಕ್ಕೆ ಕೊನೆಗೊಳ್ಳಲಿದೆ. ಸೂರ್ಯಗ್ರಹಣದ ಅವಧಿ 5 ಗಂಟೆ 24 ನಿಮಿಷಗಳು. ಸೂರ್ಯ ಗ್ರಹಣದ ಮುಂಚಿನ ಅಶುಭ ಸಮಯವನ್ನು ‘ಸೂತಕ’ ಅವಧಿ ಎಂದು ಕರೆಯಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ ಸೂತಕದ ಸಮಯದಲ್ಲಿ ಭೂಮಿಯ ವಾತಾವರಣವು ಕಲುಷಿತಗೊಳ್ಳುತ್ತದೆ. ಹೀಗಾಗಿ ಹಾನಿಕಾರಕ ಅಡ್ಡಪರಿಣಾಮ ತಪ್ಪಿಸಲು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಸೂತಕ ಅವಧಿಯು ಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ, ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಈ ಬಾರಿ ಇದನ್ನು ಸೂತಕದ ಅವಧಿ ಎಂದು ಇಲ್ಲಿ ಪರಿಗಣಿಸಲಾಗುವುದಿಲ್ಲ.

ಎಲ್ಲಿ ಗ್ರಹಣ ಗೋಚರಿಸುತ್ತದೆ?

ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಆದರೆ ಚೀನಾ, ಅಮೆರಿಕ, ಮಲೇಷ್ಯಾ, ಫಿಜಿ, ಜಪಾನ್, ಸಮೋವಾ, ಸೊಲೊಮನ್, ಸಿಂಗಾಪುರ್, ಥೈಲ್ಯಾಂಡ್, ಕಾಂಬೋಡಿಯಾ, ಅಂಟಾರ್ಕ್ಟಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವಿಯೆಟ್ನಾಂ, ತೈವಾನ್, ಪಪುವಾ ನ್ಯೂಗಿನಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ದಕ್ಷಿಣ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ: Surya Grahan 2023: ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬಾರದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News