ವಾಟ್ಸಾಪ್ ಚಾಟ್‌ಗಳನ್ನು ಇನ್ನಷ್ಟು ಮಜವಾಗಿಸಲು Lottie ಸ್ಟಿಕ್ಕರ್‌ಗಳ ಪರಿಚಯ!
WhatsApp: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾಳೆ ಇರುತ್ತದೆ. ಇದೀಗ, ವಾಟ್ಸಾಪ್ ಸಂದೇಶವನ್ನು ಮತ್ತಷ್ಟು ಮೋಜುಗೊಳಿಸಲು ಕಂಪನಿಯು ಮಾತೊಂದು ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ.
WhatsApp New Features: ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ಚಾಟ್‌ಗಳನ್ನು ಇನ್ನಷ್ಟು ಮೋಜು ಮಾಡಲು ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ. ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್‌ನಲ್ಲಿ ಚಾಟ್ ಮಾಡುವಾಗ, ಬಳಕೆದಾರರು ಸ್ಟಿಕ್ಕರ್‌ಗಳು, ಎಮೋಜಿ, ಅವತಾರ್ ನಂತಹ ವೈಶಿಷ್ಟ್ಯಗಳನ್ನು ಬಳಸುತ್ತಾರೆ. ಇದೀಗ ಈ ತ್ವರಿತ ಸಂದೇಶ ಅಪ್ಲಿಕೇಶನ್ ತನ್ನ ಬಳಕೆದಾರರಿಗಾಗಿ Lottie ಸ್ಟಿಕ್ಕರ್‌ಗಳನ್ನು ಪರಿಚಯಿಸಲು ಕಾರ್ಯನಿರ್ವಹಿಸುತ್ತಿದೆ.
WhatsApp Lottie ಸ್ಟಿಕ್ಕರ್‌ಗಳು:
ಸದಾ ವಾಟ್ಸಾಪ್‌ನ ವೈಶಿಷ್ಟ್ಯಗಳ ಮೇಲೆ ಕಣ್ಣಿಡುವ ವೆಬ್‌ಸೈಟ್ WABetainfo, ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ Lottie ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಪ್ರಸ್ತುತ, ಈ ಸೌಲಭ್ಯವು ಅಭಿವೃದ್ಧಿ ಹಂತದಲ್ಲಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ- WhatsApp ತಂದಿದೆ 4 ಹೊಸ ಟೆಕ್ಸ್ಟ್ ಫಾರ್ಮ್ಯಾಟ್ : ಇವುಗಳಲ್ಲಿ ಶಾರ್ಟ್ ಕಟ್ ಕೂಡಾ ಲಭ್ಯ
ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.24.5.10 ಅಪ್‌ಡೇಟ್‌ಗಾಗಿ ವಾಟ್ಸಾಪ್ ಬೀಟಾ ಕಂಪನಿಯು ಸ್ಟಿಕ್ಕರ್‌ಗಳಿಗೆ Lottie ಬೆಂಬಲವನ್ನು ತರಲು ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.
ವಾಟ್ಸಾಪ್ ಸ್ಟಿಕ್ಕರ್‌ಗಳ ಅನುಭವವನ್ನು ಇನ್ನಷ್ಟು ಮೋಜುಗೊಳಿಸುವತ್ತ ಗಮನ ಹರಿಸುತ್ತಿದೆ ಎಂದು ಉಲ್ಲೇಖಿಸಿರುವ WABetainfo ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದೆ.
ಇದನ್ನೂ ಓದಿ- WhatsApp ಹೊಸ ವೈಶಿಷ್ಟ್ಯ: ಇನ್ಮುಂದೆ ಪ್ರೊಫೈಲ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ
Lottie WebP ಫೋಟೋಗಳಿಗಿಂತ ಹೆಚ್ಚು ಸಂಕೀರ್ಣ ಮತ್ತು ಕ್ರಿಯಾತ್ಮಕ ಅನಿಮೇಷನ್‌ಗಳನ್ನು ಒದಗಿಸುತ್ತದೆ. Lottie ಸ್ಟಿಕ್ಕರ್‌ಗಳು ಚಾಟ್‌ಗಳನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ಲೊಟ್ಟಿ ಅನಿಮೇಶನ್‌ಗಳನ್ನು ಗುಣಮಟ್ಟವನ್ನು ಕಳೆದುಕೊಳ್ಳದೆ ಅಡ್ಜಸ್ಟ್ ಮಾಡಬಹುದು ಎಂದು ತಿಳಿದುಬಂದಿದೆ.
ಆದಾಗ್ಯೂ, ಮೆಟಾ- ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಹೊರತರಲು ಯೋಜಿಸುತ್ತಿರುವ ಈ ಲೊಟ್ಟಿ ಅನಿಮೇಶನ್ ಸ್ಟಿಕ್ಕರ್‌ಗಳು ಪರೀಕ್ಷಾ ಹಂತದಲ್ಲಿದ್ದು, ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಗಳನ್ನು ಬಿಡುಗಡೆ ಮಾಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.