WhatsApp ತಂದಿದೆ 4 ಹೊಸ ಟೆಕ್ಸ್ಟ್ ಫಾರ್ಮ್ಯಾಟ್ : ಇವುಗಳಲ್ಲಿ ಶಾರ್ಟ್ ಕಟ್ ಕೂಡಾ ಲಭ್ಯ

WhatsApp ಅನ್ನು ಬಳಸುವ ಜನರಿಗೆ ಅಥವಾ ಅವರ ಚಾಟ್‌ಗಳನ್ನು  ಸ್ವಲ್ಪ  ಇಂಟರೆಸ್ಟಿಂಗ್ ಮಾಡಲು ಬಯಸುವವರಿಗೆ ಈ ವೈಶಿಷ್ಟ್ಯಗಳು ಹೆಚ್ಚು ಪ್ರಯೋಜನಕಾರಿಯಾಗಿರಲಿವೆ. ನಿಮ್ಮ ಟೆಕ್ಸ್ಟ್ ಅನ್ನು ಇನ್ನಷ್ಟು ಸುಂದರಗೊಳಿಸಲು ಈಗ ನಾಲ್ಕು ಹೊಸ ಆಯ್ಕೆಗಳನ್ನು ಬಳಸಬಹುದು.

Written by - Ranjitha R K | Last Updated : Feb 22, 2024, 10:36 AM IST
  • WhatsApp ಕೆಲವು ಹೊಸ ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
  • ಚಾಟ್‌ಗಳನ್ನು ಸ್ವಲ್ಪ ಇಂಟರೆಸ್ಟಿಂಗ್ ಮಾಡಲು ಬಯಸುವವರಿಗೆ ಇದು ಸಹಾಯಕ
  • ಟೆಕ್ಸ್ಟ್ ಅನ್ನು ಸುಂದರಗೊಳಿಸಲು ಬಳಸಬಹುದು ಈ ನಾಲ್ಕು ಹೊಸ ಆಯ್ಕೆ
WhatsApp ತಂದಿದೆ 4 ಹೊಸ ಟೆಕ್ಸ್ಟ್ ಫಾರ್ಮ್ಯಾಟ್ : ಇವುಗಳಲ್ಲಿ ಶಾರ್ಟ್ ಕಟ್ ಕೂಡಾ ಲಭ್ಯ title=

ಬೆಂಗಳೂರು : WhatsApp ಕೆಲವು ಹೊಸ ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಕೆಲಸಕ್ಕಾಗಿ WhatsApp ಅನ್ನು ಬಳಸುವ ಜನರಿಗೆ ಅಥವಾ ಅವರ ಚಾಟ್‌ಗಳನ್ನು  ಸ್ವಲ್ಪ  ಇಂಟರೆಸ್ಟಿಂಗ್ ಮಾಡಲು ಬಯಸುವವರಿಗೆ ಈ ವೈಶಿಷ್ಟ್ಯಗಳು ಹೆಚ್ಚು ಪ್ರಯೋಜನಕಾರಿಯಾಗಿರಲಿವೆ. ನಿಮ್ಮ ಟೆಕ್ಸ್ಟ್ ಅನ್ನು ಇನ್ನಷ್ಟು ಸುಂದರಗೊಳಿಸಲು ಈಗ ನಾಲ್ಕು ಹೊಸ ಆಯ್ಕೆಗಳನ್ನು ಬಳಸಬಹುದು.ಈ ಹೊಸ ವೈಶಿಷ್ಟ್ಯಗಳನ್ನು ಬಳಸುವ ಮೂಲಕ ನಿಮ್ಮ ಲಿಸ್ಟ್ ನಲ್ಲಿ ಬುಲೆಟ್ ಬಳಸಬಹುದು ಅಥವಾ ನಂಬರ್ ಹಾಕಬಹುದು. ಕೊಟೇಶನ್ ಅನ್ನು ಎದ್ದು ಕಾಣುವಂತೆ ಮಾಡಬಹುದು ಅಥವಾ ತಾಂತ್ರಿಕ ಕೋಡ್ ಅನ್ನು ಸರಳವಾಗಿ ಬರೆಯಬಹುದು. ಇದರ ಇನ್ನೊಂದು  ಪ್ಲಸ್ ಪಾಯಿಂಟ್ ಎಂದರೆ ಅವುಗಳೆಲ್ಲದಕ್ಕೂ ಸುಲಭವಾದ ಶಾರ್ಟ್‌ಕಟ್‌ಗಳಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಬೋಲ್ಡ್, ಇಟಾಲಿಕ್, ಸ್ಟ್ರೈಕ್‌ಥ್ರೂ ಮತ್ತು ಮೊನೊಸ್ಪೇಸ್ ಹೊರತುಪಡಿಸಿ, ಈ ಹೊಸ ಆಯ್ಕೆಗಳು ನಿಮ್ಮ ಚಾಟ್‌ಗಳನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಹೊಸ WhatsApp ಶಾರ್ಟ್‌ಕಟ್‌ಗಳು :
ಇನ್ನು ಮುಂದೆ, ನೀವು iPhone, Android, ಕಂಪ್ಯೂಟರ್ ಅಥವಾ Mac ಹೀಗೆ ಯಾವುದನ್ನೇ ಬಳಸುತ್ತಿದ್ದರೂ, WhatsAppನಲ್ಲಿ ನಿಮ್ಮ ಸಂದೇಶಗಳನ್ನು  ಹೆಚ್ಚು ಆಕರ್ಷಕವಾಗಿ ಬರೆಯಬಹುದು. ಇಲ್ಲಿ ನೀವು ಬುಲೆಟ್ ಮಾಡಬಹುದು, ನಂಬರ್ ಹಾಕಬಹುದು, ನಿರ್ದಿಷ್ಟ ವಿಷಯವನ್ನು ಹೈಲೈಟ್ ಮಾಡಬಹುದು ಅಥವಾ ತಾಂತ್ರಿಕ ಕೋಡ್ ಬರೆಯಬಹುದು. 

ಇದನ್ನೂ ಓದಿ : 2027ರವರೆಗೆ AI ಬೇಡಿಕೆ ಶೇ. 15ರಷ್ಟು ಬೆಳೆಯುವ ನಿರೀಕ್ಷೆ

ಈಗ whatsapp ಪರಿಚಯಿಸಿರುವ ನಾಲ್ಕು ಹೊಸ ಆಯ್ಕೆಗಳ ಬಗ್ಗೆ ನೋಡೋಣ. ಮೊದಲನೆಯದು 'ಬುಲೆಟ್ ಲಿಸ್ಟ್ . ಇದನ್ನು ನೀವು ಸಾಮಗ್ರಿಗಳ ಪಟ್ಟಿ ಮಾಡುವಾಗ ಅಥವಾ ಯಾವುದೇ ಇತರ ಪಟ್ಟಿ ಮಾಡುವಾಗ ಬಳಸಬಹುದು. ಇದನ್ನು ರಚಿಸಲು, ನಿಮ್ಮ ವಾಕ್ಯದ ಮೊದಲು "-" (ಡ್ಯಾಶ್) ಅನ್ನು ಹಾಕಿದಾಗ ಅದು ತನ್ನಷ್ಟಕ್ಕೆ ಬುಲೆಟ್ ಆಗುತ್ತದೆ. ಮುಂದಿನ ಬುಲೆಟ್ ರಚಿಸಲು "Shift+Enter" ಒತ್ತಬೇಕು. ಇದಾದ ಮೇಲೆ "-" ನಂತರ ಸ್ಪೇಸ್ ಬಿಡಬೇಕು.  

ಈಗ  ನಂಬರ್ ಲಿಸ್ಟ್ ಹೇಗೆ ಕೆಲಸ ಮಾಡುತ್ತದೆ ನೋಡೋಣ. ಇದು ಬುಲೆಟ್ ಲಿಸ್ಟ್ ಅನ್ನೇ ಹೋಲುತ್ತದೆ. ಆದರೆ ಸ್ವಲ್ಪ ಹೆಚ್ಚು ಫಾರ್ಮಲ್ ಆಗಿದೆ. ಇದನ್ನು ಬಳಸಲು, 1, 2, ಅಥವಾ 3 ಸಂಖ್ಯೆಗಳನ್ನು ಟೈಪ್ ಮಾಡಿ, ನಂತರ  ಒಂದು ಬಿಂದಿ ಮಾತು ಸ್ಪೇಸ್ ಕೊಡಬೇಕು. ನಂತರ ಬುಲೆಟ್ ಲಿಸ್ಟ್ ನಂತೆ  Shift+Enter ಅನ್ನು ಒತ್ತುವುದರಿಂದ ಸ್ವಯಂಚಾಲಿತವಾಗಿ ಪಟ್ಟಿಯಲ್ಲಿರುವ ಮುಂದಿನ ಸಂಖ್ಯೆಗೆ ನಿಮ್ಮನ್ನು ಕರೆದೊಯ್ಯುತ್ತದೆ.

ಇದನ್ನೂ ಓದಿ : IRCTC App: ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಸುಲಭ ಪ್ರಕ್ರಿಯೆ

ಈಗ, "ಕೋಟ್ ಬ್ಲಾಕ್". ಪ್ರಮುಖ ಅಂಶಗಳನ್ನು ಹೈಲೈಟ್ ಮಾಡಲು ಮತ್ತು ಸಂದೇಶದಲ್ಲಿ ಅವುಗಳನ್ನು ಹೆಚ್ಚು ಗಮನಿಸುವಂತೆ ಮಾಡಲು ಇದನ್ನು ಬಳಸಲಾಗುತ್ತದೆ. ಇದನ್ನು ಬಳಸಲು, ">" ಚಿಹ್ನೆಯನ್ನು ಟೈಪ್ ಮಾಡಿ, ನಂತರ ಒಂದು ಸ್ಪೇಸ್ ನೀಡಬೇಕು. 'Inline Code' ಎನ್ನುವುದು ನಿಮ್ಮ ಟೆಕ್ಸ್ಟ್ ನಲ್ಲಿ  ಕೆಲವು ಮಾಹಿತಿಯನ್ನು ಉಳಿದ  ಟೆಕ್ಸ್ಟ್ ನಿಂದ ಪ್ರತ್ಯೇಕವಾಗಿ ತೋರಿಸಬಹುದಾದ ಒಂದು ವಿಧಾನವಾಗಿದೆ. 

ಈ ಶಾರ್ಟ್‌ಕಟ್‌ಗಳು ನಿಮ್ಮ WhatsApp ಸಂದೇಶಗಳನ್ನು  ಆಕರ್ಷಕವಾಗಿಸಲು ನಿಮಗೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News