iPhone 16 Series: ಐಫೋನ್ ಹೊಸ ಸರಣಿಗಾಗಿ ಕಾತುರರಾಗಿ ಕಾಯುತ್ತಿರುವ ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ಒಂದಿದೆ. ಈಗಾಗಲೇ ಐಫೋನ್ 16 ಸರಣಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೋನ್ ಬಿಡುಗಡೆಗೂ ಮುನ್ನವೇ ಈ ಫೋನ್ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. 


COMMERCIAL BREAK
SCROLL TO CONTINUE READING

ಪ್ರತಿ ವರ್ಷ ಮೆಗಾ ಈವೆಂಟ್ ಆಯೋಜನೆ ಮಾಡಿ ಐಫೋನ್‌ನ ಹೊಸ ಸರಣಿಯನ್ನು (iPhone New Series) ಬಿಡುಗಡೆ ಮಾಡುವ ಆಪಲ್ ಕಂಪನಿ ಸೆಪ್ಟೆಂಬರ್ 9 ರಂದು ಐಫೋನ್ 16 ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಆಪಲ್ ಏರ್‌ಪಾಡ್ಸ್ ಮತ್ತು ಆಪಲ್ ವಾಚ್ ಕೂಡ ಬಿಡುಗಡೆಯಾಗಲಿದೆ. ಇತ್ತೀಚೆಗೆ ನಡೆದ WWDC 2024 ಈವೆಂಟ್‌ನಲ್ಲಿ Apple iOS 18 ಮತ್ತು AI ಅನ್ನು ಪರಿಚಯಿಸಿದ್ದ ಆಪಲ್ ಐಫೋನ್ 16 ಸರಣಿಯಲ್ಲಿ ಬಳಕೆದಾರರು ಎಐ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಈ ಕುರಿತಂತ ಮಾಹಿತಿ ಬಹಿರಂಗವಾಗಿದ್ದು ಇದರ ಪ್ರಕಾರ, ಐಫೋನ್ 16ನಲ್ಲಿ ಐದು ಅದ್ಭುತ ವೈಶಿಷ್ಟ್ಯಗಳು ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.  ಅವುಗಳೆಂದರೆ... 


ಬದಲಾಗಲಿದೆ ಐಫೋನ್ ವಿನ್ಯಾಸ (iPhone Design): 
ಐಫೋನ್ 16 ಗೆ (iPhone 16) ಸಂಬಂಧಿಸಿದಂತೆ ಸೋರಿಕೆಯಾಗಿರುವ ವರದಿಗಳ ಪ್ರಕಾರ, ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿರುವ ಐಫೋನ್ 16 ಹೊಸ ವಿನ್ಯಾಸದೊಂದಿಗೆ ಬರಲಿದೆ. ಇದು ಮಾದರಿಗಳು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಹೊಸ ಲುಕ್  ಹೊಂದಿರುತ್ತದೆ. ಅಷ್ಟೇ ಅಲ್ಲ ಇದರ ಬೆಜೆಲ್‌ಗಳು ಹಿಂದಿನ ಸರಣಿಗಳಿಗಿಂತ  ತೆಳ್ಳಗಿರಬಹುದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Jio ₹175 ಪ್ಲಾನ್​ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆ ಓ‌ಟಿ‌ಟಿ ಪ್ರವೇಶವೂ ಉಚಿತ, ಈ ರೀತಿ ರೀಚಾರ್ಜ್ ಮಾಡಿ!


ಫೋನ್‌ನ ಕ್ಯಾಮೆರಾದಲ್ಲೂ ಇರಲಿದೆ ವಿಶೇಷತೆ :  
ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಐಫೋನ್ 16 ಸರಣಿ (iPhone 16 Series) ಯಲ್ಲಿ, ಬಳಕೆದಾರರು ಮೊದಲಿಗಿಂತ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಪಡೆಯಬಹುದು. ಅಷ್ಟೇ ಅಲ್ಲ, ಫೋನ್‌ನ ಪ್ರೊ ಮಾದರಿಯಲ್ಲಿ 48MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಲಭ್ಯವಾಗುವ ಸಾಧ್ಯತೆ ಇದೆ. 


ವಿಶೇಷ ಬಟನ್‌ಗಳು: 
ಐಫೋನ್ 16 ಸರಣಿಯಲ್ಲಿ ಆಕ್ಷನ್ ಮತ್ತು ಕ್ಯಾಪ್ಚರ್ ಬಟನ್‌ಗಳನ್ನು ಒದಗಿಸುವ ಸಾಧ್ಯತೆ ಇದೆ. ಐಫೋನ್ (iPhone) ಸಾಧನದ ಮ್ಯೂಟ್ ಬಾರ್‌ನ ಸ್ಥಳದಲ್ಲಿ ಈ ಬಟನ್ ಇರುತ್ತದೆ. ಅಂದರೆ ಮುಂಬರುವ ಹೊಸ ಮಾದರಿಯಲ್ಲಿ ನೀವು ಮ್ಯೂಟ್ ಬದಲಿಗೆ ಆಕ್ಷನ್ ಬಟನ್ ಅನ್ನು ಕಾಣಬಹುದು. ಇದಲ್ಲದೆ, ಫೋನ್‌ನಲ್ಲಿ ಕ್ಯಾಪ್ಚರ್ ಬಟನ್ ಲಭ್ಯವಾಗುವ ನಿರೀಕ್ಷೆಯಿದೆ. ಇದರ ಮೂಲಕ ಬಳಕೆದಾರರು ಲ್ಯಾಂಡ್‌ಸ್ಕೇಪ್ ಫೋಟೋಗ್ರಫಿಯ ಆನಂದವನ್ನು ಪಡೆಯಬಹುದಾಗಿದೆ. 


ಸ್ಟ್ರಾಂಗ್ ಚಿಪ್ಸೆಟ್: 
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಐಫೋನ್ 16 ಸರಣಿಯನ್ನು A18 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಪರಿಚಯಿಸಬಹುದು ಎಂದು ಊಹಿಸಲಾಗಿದೆ. ವಾಸ್ತವವಾಗಿ, A18 ಶಕ್ತಿಯುತ ಪ್ರೊಸೆಸರ್ ಆಗಿರುತ್ತದೆ ಮತ್ತು ಅದರ ಸಹಾಯದಿಂದ ಬಳಕೆದಾರರು ಗೇಮಿಂಗ್ ಮತ್ತು ಬಹುಕಾರ್ಯಕ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. 


ಇದನ್ನೂ ಓದಿ- ಅತ್ಯುತ್ತಮ ಮೈಲೇಜ್ ಜೊತೆಗೆ EV ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಅವರ ಕನಸಿನ ಕಾರು..


AI ವೈಶಿಷ್ಟ್ಯ: 
ಐಫೋನ್ 16 ಸರಣಿಯಲ್ಲಿ  ಬಳಕೆದಾರರು ಎಐ ವೈಶಿಷ್ಟ್ಯಗಳ ಬೆಂಬಲವನ್ನು ಪಡೆಯಬಹುದು. ಇದು ಬಳಕೆದಾರರ ಅನುಭವವನ್ನು ಮತ್ತಷ್ಟು ಮನಮೋಹಕವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.