Chandrayaan 3 Update: ನಿದ್ರೆಯಿಂದ ಯಾವಾಗ ಎಚ್ಚೆತ್ತುಕೊಳ್ಳಲಿದೆ ಪ್ರಗ್ಯಾನ್, ಇಸ್ರೋ ನೀಡಿದ ಮಹತ್ವದ ಅಪ್ಡೇಟ್ ಇಲ್ಲಿದೆ!
ಚಂದ್ರಯಾನ-3 ರ ಐತಿಹಾಸಿಕ ಯಶಸ್ಸಿನ ಬಳಿಕ, ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ತನ್ನ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು. ಇದಾದ ಬಳಿಕ, ಸೆಪ್ಟೆಂಬರ್ 3 ರಂದು, ರಾತ್ರಿ ಚಂದ್ರನ ಮೇಲೆ ಅದನ್ನು ಸ್ಲೀಪ್ ಮೋಡ್ ಗೆ ಕಳುಹಿಸಲಾಗಿತ್ತು (Technology News In Kannada).
Chandrayaan-3 ರ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಪ್ರಗ್ಯಾನ್ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆಗಸ್ಟ್ 23 ರಂದು ಚಂದ್ರಯಾನ-3 ರ ಐತಿಹಾಸಿಕ ಯಶಸ್ಸಿನ ನಂತರ, ರೋವರ್ ಪ್ರಗ್ಯಾನ್ ಲ್ಯಾಂಡರ್ ವಿಕ್ರಮ್ ಒಳಗಿನಿಂದ ಹೊರಬಂದು ಚಂದ್ರನ ಮೇಲ್ಮೈಯಲ್ಲಿ ತನ್ನ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು. ಇದಾದ ಬಳಿಕ ಸೆಪ್ಟೆಂಬರ್ 3 ರಂದು ರಾತ್ರಿ ಚಂದ್ರನ ಮೇಲೆ ಸ್ಲೀಪ್ ಮೋಡ್ ಗೆ ಕಳುಹಿಸಲಾಗಿತ್ತು (Technology News In Kannada).
ಇದನ್ನೂ ಓದಿ-ಈ ಫೋನ್ ಖರೀದಿಸಿದವರಿಗೆ ನಿತ್ಯ 3ಜಿಬಿ ಡೇಟಾ ಜೊತೆಗೆ ಎಲ್ಲಾ ಸೇವೆಗಳನ್ನು ಉಚಿತ ನೀಡುತ್ತಿದೆ ಜಿಯೋ!
ಆದಾಗ್ಯೂ, ಇದೀಗ ಅದನ್ನು ಎಚ್ಚರಗೊಳಿಸುವ ಕಾಲ ಬಂದಿದೆ, ಏಕೆಂದರೆ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ಒಂದು ದಿನ (ಚಂದ್ರನ ದಿನ) ಮತ್ತು ಒಂದು ರಾತ್ರಿ (ಲೂನಾರ್ ನೈಟ್) ಕಳೆದಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಅಪ್ಡೇಟ್ ನೀಡಿದೆ. ಈ ಕುರಿತು ಇತ್ತೀಚೆಗೆ ಅಪ್ಡೇಟ್ ನೀಡಿದ್ದ ಇಸ್ರೋ ಲ್ಯಾಂಡರ್ ಮತ್ತು ರೋವರ್‌ನಿಂದ ಇನ್ನೂ ಸಿಗ್ನಲ್ ಬರುತ್ತಿಲ್ಲ ಎಂದು ಹೇಳಿದೆ.
ಇದನ್ನೂ ಓದಿ-ಇದನ್ನೂ ಓದಿ-ಜಬರ್ದಸ್ತ ವೈಶಿಷ್ಟ್ಯ ಬಿಡುಗಡೆ ಮಾಡಿದ ವಾಟ್ ಆಪ್, ಪೆಮೆಂಟ್ ವ್ಯಾಲೆಟ್ ಕಂಪನಿಗಳ ಬೆವರಿಳಿಯುವುದು ಬಹುತೇಕ ಪಕ್ಕಾ!
ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಗಳೊಂದಿಗೆ ಸಂವಹನವನ್ನು ಸ್ಥಾಪಿಸಲು ಯತ್ನಿಸಲಾಗುತ್ತಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ, ಇದರಿಂದ ಅವು ಯಾವಾಗ ಎಚ್ಚರಗೊಳ್ಳಲಿವೆ ಮತ್ತು ಅವುಗಳ ಸ್ಥಿತಿ ಹೇಗಿದೆ ಎಂಬುದನ್ನೂ ಕಂಡುಹಿಡಿಯಬಹುದು. ಸದ್ಯಕ್ಕೆ ಅವುಗಳ ಕಡೆಯಿಂದ ಯಾವುದೇ ಸಿಗ್ನಲ್ ಬರುತ್ತಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿಕೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ