ನವದೆಹಲಿ: Isro's Bhuvan Vs Google Maps - ರಸ್ತೆ ಮೇಲೆ ವಾಹನ ನಡೆಸುವಾಗ ದಾರಿಗಾಗಿ ಜನರು ನ್ಯಾವಿಗೇಶನ್ ಆಪ್ ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇಂತಹ ಜನರಿಗಾಗಿ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಇದಕ್ಕಾಗಿ ಶೀಘ್ರದಲ್ಲಿಯೇ ನಿಮಗೆ Made In India Bhuvan App ಸಿಗಲಿದೆ.  ದೇಶ ಹಾಗೂ ಜಾಗತಿಕಮಟ್ಟದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ  ಸಂಶೋಧನಾ ಸಂಸ್ತೆ (Indian Space Research Organization) ಈ ಆಪ್ ಅಭಿವೃದ್ದಿ ಕೆಲಸ ಆರಂಭಿಸಿದೆ. ಇದಕ್ಕಾಗಿ ಸಂಸ್ಥೆ MapmyIndia ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳು ಸೇರಿ ಸ್ವದೇಶಿ ಮ್ಯಾಪಿಂಗ್ ಸೊಲುಶನ್ ಗಳಾಗಿರುವ  VEDAS, MOSDAC ಹಾಗೂ Bhuvanಗೆ ಬಲ ತುಂಬಲಿವೆ.


COMMERCIAL BREAK
SCROLL TO CONTINUE READING

Isro's Bhuvan Vs Google Maps - ಈ ಕುರಿತು ಹೇಳಿಕೆ ನೀಡಿರುವ  MapmyIndia CEO ರೋಹನ್ ವರ್ಮಾ, ಎರಡು ಸಂಸ್ಥೆಗಳು ಜತೆಗೂಡಿ ಇಂಡಿಯಾ ಮೇಡ್ ಪೋರ್ಟಲ್ ಹಾಗೂ geospatial services ಆರಂಭಿಸಲಿವೆ. Aatmanirbhar Bharat ಅಭಿಯಾನದ ಅಡಿ ಈ ಹೆಜ್ಜೆ ಇಡಲಾಗುತ್ತಿದೆ. ಇದರರ್ಥ Google Maps ಮಾದರಿಯಲ್ಲೇ ನಿಮಗೆ ಭಾರತದಲ್ಲಿ ತಯಾರಾದ ಆಪ್ ಸಿಗಲಿದೆ.


Isro's Bhuvan Vs Google Maps - PTI ಸುದ್ದಿಸಂಸ್ಥೆ ನೀಡಿರುವ ವರದಿಯ ಪ್ರಕಾರ ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ ಅಡಿ ಬರುವ ISRO, CE Info Systems Pvt Ltd ಜೊತೆಗೆ ಒಡಂಬಡಿಕೆಗೆ ಸಹಿ ಹಾಕಿದೆ. CE Info Systems Pvt Ltd ಕಂಪನಿ MapmyIndiaವನ್ನು ನಿಯಂತ್ರಿಸುತ್ತದೆ.


Koo App ಕೂಡ ನೀಡಲಿದೆ ತೀವ್ರ ಪೈಪೋಟಿ
Isro's Bhuvan Vs Google Maps -
Twitter ಗೆ ತೀವ್ರ ಪೈಪೋಟಿ ನೀಡಲು  ಇದೇ ರೀತಿಯ ಪ್ರಯೋಗ ನಡೆಯುತ್ತಿದೆ. ಸ್ವದೇಶಿ Koo App ಪ್ರಧಾನಿ ಮೋದಿ  (PM Modi) ಅವರ ಸ್ವಾವಲಂಬಿ ಆಪ್ ಇನ್ನೋವೇಶನ್ ಚಾಲೆಂಜ್ (Aatmanirbhar App Invotaion Challenge) ಗೆದ್ದಿದೆ. ಇದರ ಜನಪ್ರಿಯತೆಯು ತುಂಬಾ ಬೆಳೆದಿದ್ದು, ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿಯೂ ಕೂಡ ಖುದ್ದು  ಪ್ರಧಾನಿಗಳೇ  ಇದನ್ನು ಶ್ಲಾಘಿಸಿದ್ದಾರೆ. ಇದರ ನಂತರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್(Union Minister Prakash Javadekar), ಕೇಂದ್ರ ಸಚಿವ ಪಿಯೂಷ್ ಗೋಯಲ್ (Union Minister Piyush Goel) ಸೇರಿದಂತೆ ದೇಶದ ಅನೇಕ ಸಚಿವರು ಮತ್ತು ಗಣ್ಯರು ' ಕೂ ಆಪ್' ಅನ್ನು ಬಳಸಲಾರಂಭಿಸಿದ್ದಾರೆ.


ಇದನ್ನು ಓದಿ- Covid-19 Vaccination Updates: Aarogya Setu App ಸೇರಿದ Co-WIN App


Koo App ವಿಶೇಷತೆ ಏನು?
Isro's Bhuvan Vs Google Maps -
Koo ಒಂದು ಮೈಕ್ರೋ ಬ್ಲಾಗಿಂಗ್ ತಾಣವಾಗಿದ್ದು, ಟ್ವಿಟರ್‌ನಂತಹ ಎಲ್ಲಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಇದು ಹಿಂದಿ, ಇಂಗ್ಲಿಷ್ ಸೇರಿದಂತೆ 8 ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಕೂ ಅಪ್ಲಿಕೇಶನ್‌ನಿಂದ ಸಂದೇಶಗಳನ್ನು ಪೋಸ್ಟ್ ಮಾಡುವುದರ ಜೊತೆಗೆ ಬಳಕೆದಾರರು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು. ಇತರರ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುವುದರ ಹೊರತಾಗಿ, ನೀವು ಸಹ ಅವುಗಳನ್ನು ಅನುಸರಿಸಬಹುದು. ಕೂ ಪದದ ಮಿತಿಯನ್ನು 350 ಹೊಂದಿದೆ ಮತ್ತು ಅದರ ಇಂಟರ್ಫೇಸ್ ಬಹುತೇಕ  ಟ್ವಿಟರ್‌ಗೆ ಹೋಲುತ್ತದೆ. ಕೂ ಅನ್ನು ನೀವು  ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡೂ ರೀತಿಯಲ್ಲಿ ಬಳಸಬಹುದು.


ಇದನ್ನು ಓದಿ- ಹೀಗೆ ಮಾಡಿದರೆ WhatsApp ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಓದಬಹುದು..!


Twitterಗೆ ಭಾರಿ ಪೈಪೋಟಿ 
Isro's Bhuvan Vs Google Maps -
ಭಾರತದಲ್ಲಿ ಕು ಪ್ರಚಲಿತವಾಗುವುದರ  ಹಿಂದಿನ ಒಂದು ಪ್ರಮುಖ ಕಾರಣವೆಂದರೆ ಭಾರತೀಯ ಭಾಷೆಗಳಲ್ಲಿ ಮಾತನಾಡುವ ಸ್ವಾತಂತ್ರ್ಯ. ಇದಲ್ಲದೆ, ಸಾಮಾಜಿಕ ಮಾಧ್ಯಮ ತಜ್ಞರು ಟ್ವಿಟರ್ ಮತ್ತು ಸರ್ಕಾರದ ನಡುವಿನ ಮುಖಾಮುಖಿಯನ್ನು ಇದಕ್ಕೆ ದೊಡ್ಡ ಕಾರಣವೆಂದು ಪರಿಗಣಿಸುತ್ತಿದ್ದಾರೆ.


ಇದನ್ನು ಓದಿ- ಶೀಘ್ರದಲ್ಲೇ ಬದಲಾಗಲಿದೆ Google ಸರ್ಚ್ ಮಾಡುವ ವಿಧಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.