ಹೀಗೆ ಮಾಡಿದರೆ WhatsApp ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಓದಬಹುದು..!

ಈಗ ವಾಟ್ಸ್ ಆಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಕೂಡಾ ತೆಗೆದು ಓದಬಹುದು. ಆದರೆ ಇದಕ್ಕೆ ಥರ್ಡ್ ಪಾರ್ಟಿ ಆಪ್ ನ ಸಹಾಯ ಬೇಕಾಗುತ್ತದೆ.

Written by - Ranjitha R K | Last Updated : Feb 12, 2021, 06:00 PM IST
  • ವಾಟ್ಸ್ ಆಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಓದಬಹುದು
  • ಆಂಡ್ರಾಯ್ಡ್ ಬಳಕೆದಾರರು ಮಾತ್ರ ಟ್ರಿಕ್ ಬಳಸಬಹುದು
  • ಥರ್ಡ್ ಪಾರ್ಟಿ ಆಪ್ ನ ಸಹಾಯ ಬೇಕಾಗುತ್ತದೆ
ಹೀಗೆ ಮಾಡಿದರೆ WhatsApp ನಲ್ಲಿ ಡಿಲೀಟ್ ಆದ ಮೆಸೇಜನ್ನು ಮತ್ತೆ ಓದಬಹುದು..! title=
ವಾಟ್ಸ್ ಆಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಓದಬಹುದು (file photo)

ನವದೆಹಲಿ: ಯಾರಾದರೂ ಪದೇ ಪದೇ ವಾಟ್ಸ್ ಆಪ್ ನಲ್ಲಿ (WhatsApp) ಮೆಸೇಜ್ ಮಾಡುತ್ತಿದ್ದು ನಂತರ ಅದನ್ನು ಡಿಲಿಟ್ ಮಾಡಿ ಕಿರಿ ಕಿರಿ ಮಾಡುತ್ತಿದ್ದಾರಾ ? ಇನ್ನು ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ವಾಟ್ಸ್ ಆಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು (Message) ಕೂಡಾ ತೆಗೆದು ಓದಬಹುದು. 

ಈ ವಿಶೇಷ ಟ್ರಿಕ್ ನ ಸಹಾಯದಿಂದ  ಡಿಲಿಟ್ ಆದ ಮೆಸೇಜನ್ನು (Message) ಮತ್ತೆ ಓದಲು ಸಾಧ್ಯವಾಗುತ್ತದೆ. ಆದರೆ ಈ ಟ್ರಿಕ್ ಆಂಡ್ರಾಯ್ಡ್ (Android) ಬಳಕೆದಾರರಿಗೆ ಮಾತ್ರ ಉಪಯುಕ್ತವಾಗಿದೆ.  ಮತ್ತೊಂದೆಡೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ ನ (App) ಸಹಾಯ ಪಡಟೆಯುವ ರಿಸ್ಕ್ ಕೂಡಾ ಇದರಲ್ಲಿದೆ.  ಹೀಗಾದರೆ ಮಾತ್ರ ಡಿಲೀಟ್ ಆದ ಮೆಸೇಜನ್ನು ಮತ್ತೆ ಓದುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ : Facebook New Feature - Facebook ನಲ್ಲೂ ಬರಲಿದೆ ಈ ಅದ್ಭುತ ವೈಶಿಷ್ಟ್ಯ

ಡಿಲೀಟ್ ಆದ ಮೆಸೇಜನ್ನು ಮತ್ತೆ ಓದುವುದು ಹೇಗೆ? :
-ಮೊದಲು Google play store ನಿಂದ WhatsRemoved+ ಆಪನ್ನುಡೌನ್ ಲೋಡ್ (download) ಮಾಡಿಕೊಳ್ಳಿ.
-ಇದಾದ ನಂತರ ಆಪ್ನ  ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಿ, ಪರ್ಮಿಷನ್ ನೀಡಿ
-ನಂತರ ಯಾವ ಆಪ್ ನ ನೋಟಿಫಿಕೇಶನ್ (Notification) ಅನ್ನು ಸೇವ್ ಮಾಡಬೇಕು ಆ ಆಪ್ ಅನ್ನು ಸೆಲೆಕ್ಟ್ ಮಾಡಿ. ಅಂದರೆ ವಾಟ್ಸ್ ಆಪ್ ನ ನೋಟಿಫಿಕೇಶನ್ ಸೇವ್ ಮಾಡಬೇಕೆಂದರೆ ವಾಟ್ಸ್ ಆಪ್ (WhatsApp) ಸೆಲೆಕ್ಟ್ ಮಾಡಿ
-ಇಷ್ಟಾದ ನಂತರ NEXT ಆಪ್ಶನ್ ಟ್ಯಾಪ್ ಮಾಡಿ
-ಇದಾದ ನಂತರ ಹೊಸ ಸ್ಕ್ರೀನ್ ಓಪನ್ ಆಗುತ್ತದೆ. ಅಲ್ಲಿ ಸೇವ್ ಮೇಲೆ ಟ್ಯಾಪ್ ಮಾಡಿ. ನಂತರ ಸೇವ್ ಫೈಲ್ ಗೆ ಪರ್ಮಿಷನ್ ಕೊಡಿ.

ಇದನ್ನೂ ಓದಿ : ಆಗಸದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ Satellite ಓಟಕ್ಕೆ ಮುನ್ನುಡಿ ಬರೆದ ISRO

ಇಷ್ಟಾದ ಮೇಲೆ ಆಪ್ ಬಳಸಲು ರೆಡಿಯಾಗುತ್ತದೆ. ಹಾಗೆಯೇ ವಾಟ್ಸ್ ಆಪ್ ನಲ್ಲಿ (WhatsApp) ಡಿಲೀಟ್ ಆದ ಮೆಸೇಜನ್ನು ನೀವು ಮತ್ತೆ ಓದುವುದು ಕೂಡಾ ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News