Ethanol Blended Petrol: ಜಿಯೋ-ಬಿಪಿ, ಇದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬ್ರಿಟನ್‌ನ ಬಿಪಿ ನಡುವಿನ ಒಂದು ಜಂಟಿ ಉದ್ಯಮವಾಗಿದ್ದು, ಶೇ.20 ರಷ್ಟು ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು ಪರಿಚಯಿಸಿದೆ. ಇದು ಕಚ್ಚಾ ತೈಲ ಆಮದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಸರ್ಕಾರದ ಕಾರ್ಯಕ್ರಮ ಒಂದು ಭಾಗವಾಗಿದೆ. ಇದರೊಂದಿಗೆ, ಜಿಯೋ-ಬಿಪಿ ಇ-20 ಇಂಧನವನ್ನು ಒದಗಿಸುವ ಮೊದಲ ಚಿಲ್ಲರೆ ವ್ಯಾಪಾರಿಗಳೊಂದಿಗೆ ಶಾಮೀಲಾಗಿದೆ ಎಂದು ಕಂಪನಿಯು ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. E-20 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳ ಮಾಲೀಕರು ಆಯ್ದ Jio-BP ಪೆಟ್ರೋಲ್ ಪಂಪ್‌ಗಳಿಂದ ಈ ಇಂಧನವನ್ನು ಖರೀದಿಸಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಶೀಘ್ರದಲ್ಲೇ ಇದನ್ನು ಇಡೀ ನೆಟ್‌ವರ್ಕ್‌ಗೆ ವಿಸ್ತರಿಸಲಾಗುವುದು ಎಂಬ ಮಾಹಿತಿ ಇದೆ. E-20 ಇಂಧನವು ಶೇ.20 ರಷ್ಟು ಎಥೆನಾಲ್ ಮತ್ತು ಶೇ.80 ರಷ್ಟು ಗ್ಯಾಸೋಲಿನ್ ಅನ್ನು ಹೊಂದಿರುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Cheapest Electric Scooter: ಎರಡು ಅಗ್ಗದ ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ, ಬೆಲೆ ಕೇವಲ ಸ್ಪ್ಲೆಂಡರ್ ನಷ್ಟು ಮಾತ್ರ


ರೈತರ ಆದಾಯ ಹೆಚ್ಚಾಗಲಿದೆ
ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಾರ್ಯಕ್ರಮವು ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲಿದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಇದು ಕಡಿಮೆ ಮಾಡುತ್ತದೆ. ಈ ಕಾರ್ಯಕ್ರಮ ದೇಶದ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ 'ಭಾರತದ ಇಂಧನ ಮತ್ತು ಸಾರಿಗೆ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ' ಎಂದಿದೆ. ಇದೆ ವಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್-2023 ಕಾರ್ಯಕ್ರಮದಲ್ಲಿ ಶೇ.20 ಎಥೆನಾಲ್ ಮಿಶ್ರಣ ಪೆಟ್ರೋಲ್ ಅನ್ನು ಪರಿಚಯಿಸಿದ್ದರು, ಇದರ ಮಾರಾಟವು ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ ಸೋಮವಾರ ಆರಂಭಗೊಂಡಿದೆ.


ಇದನ್ನೂ ಓದಿ-Good News: ಕೇವಲ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಕೋಬೇಡಿ!


ತಮ್ಮ ಗುರಿ ಬಹಿರಂಗಪಡಿಸಿದ ಪ್ರಧಾನಿ
2014ರಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇ. 1.5 ರಿಂದ ಶೇ. 10 ಕ್ಕೆ ಹೆಚ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ನಾವು ಶೇ 20 ಗುರಿಯತ್ತ ಸಾಗುತ್ತಿದ್ದೇವೆ. ಮೊದಲ ಹಂತದಲ್ಲಿ, ಶೇ. 20 ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು 15 ನಗರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದರು. ಇನ್ನೆರಡು ವರ್ಷಗಳಲ್ಲಿ ಇದನ್ನು ದೇಶಾದ್ಯಂತ ಪರಿಚಯಿಸಲಾಗುವುದು. ಶೇ. 10 ರಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಬೆರೆಸುವ ಮೂಲಕ ದೇಶವು 53,894 ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಲಿದೆ. ರೈತರಿಗೂ ಇದರ ಲಾಭ ಸಿಗಲಿದೆ. E-20 (20% ಎಥೆನಾಲ್ ಹೊಂದಿರುವ ಪೆಟ್ರೋಲ್) 11 ರಾಜ್ಯಗಳು/UTಗಳಲ್ಲಿ ಮೂರು PSUಗಳ ಪೆಟ್ರೋಲ್ ಪಂಪ್‌ಗಳಲ್ಲಿ ಪ್ರಸ್ತುತ ಲಭ್ಯವಿದೆ.


ಇದನ್ನೂ ಓದಿ-PMK Update: ಫೆಬ್ರುವರಿ 10 ನೋಟ್ ಮಾಡಿಟ್ಟುಕೊಳ್ಳಿ, ಕಾರಣ ಇಲ್ಲಿದೆ!


ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಜೂನ್ 2022 ರಲ್ಲಿ ಐದು ತಿಂಗಳ ಮುಂಚಿತವಾಗಿ ಪೆಟ್ರೋಲ್‌ನಲ್ಲಿ ಶೇ. 10 ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ ಗುರಿಯನ್ನು ಭಾರತ ಸಾಧಿಸಿದೆ ಎಂದು ಹೇಳಿದ್ದಾರೆ. ಇದಲ್ಲದೇ, ಇ20 ಪೆಟ್ರೋಲ್ ಒದಗಿಸಲು ನಾವು ಈ ಹಿಂದೆಯೇ (2025 ವರ್ಷ) ಗಡುವು ನೀಡಿದ್ದೇವೆ ಎಂದು ಅವರು ಹೇಳಿದ್ದರು. ಮೊದಲು ಈ ಗಡುವು 2030 ಆಗಿತ್ತು. ಈಗ E20 ಅನ್ನು ಪ್ರಾಯೋಗಿಕ ಆಧಾರದ ಮೇಲೆ ಸಮಯಕ್ಕಿಂತ ಮುಂಚಿತವಾಗಿ ಪರಿಚಯಿಸಲಾಗಿದೆ ಎಂದು ಅವರು ಹೇಳಿದ್ದರು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್