Jio Bharat B2 Launch Update: ಜಿಯೋ ಕಂಪನಿಯು ಶೀಘ್ರದಲ್ಲೇ ತನ್ನ ಫೀಚರ್ ಫೋನ್ ಪೋರ್ಟ್‌ಫೋಲಿಯೊದಲ್ಲಿ ಹೊಸ ಫೋನ್ ಸೇರಿಸುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಇತ್ತೀಚೆಗೆ ಬಹಿರಂಗದೊಂದ ಒಂದು ಸೋರಿಕೆಯಲ್ಲಿ ಈ ಫೀಚರ್ ಫೋನ್‌ಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಸೋರಿಕೆಯನ್ನು ನಂಬುವುದಾದರೆ, ಇದು ಜಿಯೋ ಭಾರತ್ ಬಿ1 ಫೋನಿನ ಮುಂದುವರೆದ ಆವೃತ್ತಿವ್ಯಾಗಿರುವ ಜಿಯೋ ಭಾರತ್ ಬಿ2 ಆಗಿರುವ ಸಾಧ್ಯತೆ ಇದೆ.  ಕಂಪನಿಯು ಕಳೆದ ವರ್ಷ ತನ್ನ 4G ಫೀಚರ್ ಫೋನ್ ಜಿಯೋ ಭಾರತ್ ಬಿ 1 ಅನ್ನು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮುಂಬರುವ ಫೋನ್ ಇದರ ಅಪ್‌ಗ್ರೇಡ್ ಆವೃತ್ತಿಯಾಗಿರಬಹುದು. ಸೋರಿಕೆಯಾದ ವರದಿ ಪ್ರಕಾರ ಕಂಪನಿಯು 4G ಸಂಪರ್ಕದೊಂದಿಗೆ ಹೊಸ ಫೋನ್ ಅನ್ನು ಪರಿಚಯಿಸಲಿದೆ ಎನ್ನಲಾಗಿದ್ದು, ಅದರ ಬೆಲೆ ರೂ 1000 ಕ್ಕಿಂತ ಕಡಿಮೆ ಇರಲಿದೆ. ಈ ಫೋನ್‌ಗೆ ಸಂಬಂಧಿಸಿದ ಇತರ ಯಾವ ವಿವರಗಳು ಬಹಿರಂಗಗೊಂಡಿವೆ ತಿಳಿದುಕೊಳ್ಳೋಣ, (Technology News In Kannada)


COMMERCIAL BREAK
SCROLL TO CONTINUE READING

ಜಿಯೋ ಭಾರತ್ ಬಿ2 ಫೋನ್ ಅನ್ನು ಬಿಐಎಸ್ ನಲ್ಲಿ ಗುರುತಿಸಲಾಗಿದೆ. !
91ಮೊಬೈಲ್ಸ್ ಹಿಂದಿ ಸೋರಿಕೆಯಾದ ವರದಿಯೊಂದರ ಪ್ರಕಾರ ಜಿಯೋ ಭಾರತ್ ಬಿ2 ಈ ಫೋನ್ ಕಳೆದ ವರ್ಷ ಬಿಡುಗಡೆಯಾದ ಜಿಯೋ ಭಾರತ್ ಬಿ1 ಫೋನಿನ ಮುಂದುವರೆದ ಆವೃತ್ತಿಯಾಗಿದೆ, ಇದು 4G ಸಂಪರ್ಕದೊಂದಿಗೆ ಬಿಡುಗಡೆಯಾಗಿತ್ತು. ಸೋರಿಕೆಯನ್ನು ನಂಬುವುದಾದರೆ, ಈ ಫೋನ್ ಅನ್ನು ಬಿಐಎಸ್ ವೆಬ್‌ಸೈಟ್‌ನಲ್ಲಿ ಮಾಡೆಲ್ ಸಂಖ್ಯೆ ಜೇಬಿಬಿ121 ನೊಂದಿಗೆ ಗುರುತಿಸಲಾಗಿದೆ. ಈ ಪಟ್ಟಿಯು ಫೋನ್‌ನ ಭಾರತದಲ್ಲಿನ ಬಿಡುಗಡೆಯ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ಆದಾಗ್ಯೂ, ಈ ಪಟ್ಟಿಯ ಮೂಲಕ ಫೋನ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಕಂಪನಿಯು ಈ ಫೋನ್ ಅನ್ನು ಜಿಯೋ ಭಾರತ್ ಬಿ2 ಎಂಬ ಹೆಸರಿನೊಂದಿಗೆ ಪರಿಚಯಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. .


ಯುಪಿಐ ವೈಶಿಷ್ಟ್ಯ
ಜಿಯೋ ಭಾರತ್ ಬಿ2 ಫೀಚರ್ ಫೋನ್‌ನಲ್ಲಿ ಅಂತರ್ನಿರ್ಮಿತ ಯುಪಿಐ ಪೆಮೆಂಟ್ ವೈಶಿಷ್ಟ್ಯವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ, ಅದರ ಮೂಲಕ ಬಳಕೆದಾರರು ಫೀಚರ್ ಫೋನ್‌ನಿಂದ ಆನ್‌ಲೈನ್ ವಹಿವಾಟುಗಳನ್ನು ಮಾಡಲು ಸಾಧ್ಯವಾಗಲಿದೆ. ಅನೇಕ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಬೆಂಬಲ ಕೂಡ ಇದಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತಿದೆ


ಇದನ್ನೂ ಓದಿ-ಒಂದೇ ವರ್ಷದ ಸ್ಥಿರ ಠೇವಣಿ ಮೇಲೆ ಜಬರ್ದಸ್ತ್ ಲಾಭ ಗಳಿಸಬೇಕೆ? ಈ ಸರ್ಕಾರಿ ಬ್ಯಾಂಕ್!


ಜಿಯೋ ಭಾರತ್ ಬಿ1 ನ ವೈಶಿಷ್ಟ್ಯಗಳು
ಜಿಯೋ ಭಾರತ್ ಬಿ1 ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ  ಫೋನ್ 2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇ ಹೊಂದಿದೆ. ಫೋನ್ 50 ಎಂಬಿ ಆಂತರಿಕ ಶೇಖರಣಾ ಸೌಲಭ್ಯವನ್ನು ಹೊಂದಿದೆ. ಫೋನ್‌ನ ಬ್ಯಾಟರಿ  ಸಾಮರ್ಥ್ಯ2000ಎಂಎಹೆಚ್ ಆಗಿದೆ. ಈ ಫೋನ್ ಒಂದೇ ಚಾರ್ಜ್‌ನಲ್ಲಿ ಸ್ಟ್ಯಾಂಡ್‌ಬೈನಲ್ಲಿ 343 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ.


ಇದನ್ನೂ ಓದಿ-DA Hike: ಈ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ, ಹಳೆ ಪಿಂಚಣಿ ಯೋಜನೆಯ ಜೊತೆಗೆ ಎಲ್ಟಿಸಿ ಕುರಿತೂ ಕೂಡ ಮಹತ್ವದ ಘೋಷಣೆ!


ಮನರಂಜನೆಗಾಗಿ ಜಿಯೋ ಸಿನೆಮಾ ಮತ್ತು ಜಿಯೋಸಾವನ್ ನಂತಹ ಅನೇಕ ಜಿಯೋ ಅಪ್ಲಿಕೇಶನ್‌ಗಳನ್ನು ಈ ಫೋನ್‌ನಲ್ಲಿ ಮೊದಲೇ ಇನ್ಸ್ಟಾಲ್ ಮಾಡಲಾಗಿದೆ. ಆನ್‌ಲೈನ್ ಯುಪಿಐ ವಹಿವಾಟುಗಳಿಗಾಗಿ ಜಿಯೋಪೇ ಇತ್ಯಾದಿ ನೀಡಲಾಗಿದೆ. ಈ ಫೋನ್‌ನಲ್ಲಿ ಅನೇಕ ಭಾರತೀಯ ಪ್ರಾದೇಶಿಕ ಭಾಷೆಗಳ ಬೆಂಬಲ ಒದಗಿಸಲಾಗಿದೆ. ಫೋನ್‌ನ ಆಯಾಮಗಳು 125mm x 52mm x 17mm ಮತ್ತು ತೂಕ 110 ಗ್ರಾಂ. ಕಂಪನಿಯು ಈ ಫೋನ್ ಅನ್ನು 1,299 ರೂ.ಗಳಿಗೆ ಮಾರುಕಟ್ಟೆಗೆ ಪರಿಚಯಿಸಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.