jio ಹೊರ ತಂದಿದೆ ಹೊಸ ಪ್ಲಾನ್ !ಮೂರು ತಿಂಗಳವರೆಗೆ ರೀಚಾರ್ಜ್ ಮಾಡಬೇಕಿಲ್ಲ, ಸಿಗುವುದು ಅನ್ಲಿಮಿಟೆಡ್ ಡೇಟಾ !
Jio Recharge Plan :ಜಿಯೋ ಮೊದಲಿನಿಂದಲೂ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಹೊಸ ಹೊಸ ಪ್ಲಾನ್ ಗಳನ್ನೂ ಪರಿಚಯಿಸುತ್ತಲೇ ಇದೆ.
Jio Free Netflix Plan : ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳನ್ನು ದುಬಾರಿಯಾಗಿಸಿವೆ.ರಿಲಯನ್ಸ್ ಜಿಯೋ ಕೂಡಾ ತನ್ನ ಯೋಜನೆಗಳನ್ನು ಹಿಂದಿಗಿಂತ ದುಬಾರಿಯಾಗಿಸಿದ್ದರೂ ಇತರ ಖಾಸಗಿ ಟೆಲಿಕಾಂ ಕಂಪನಿಗಳ ಪ್ಲಾನ್ ಗಿಂತ ಈ ಯೋಜನೆ ಇನ್ನೂ ಕೂಡಾ ಅಗ್ಗವಾಗಿಯೇ ಇದೆ. ಟೆಲಿಕಾಂ ಕಂಪನಿಗಳು ಶುಲ್ಕವನ್ನು ಹೆಚ್ಚು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಬಹುತೇಕ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖ ಮಾಡುತ್ತಿದ್ದಾರೆ.ಆದರೂ ಜಿಯೋ ಈಗಲೂ ನಂಬರ್ ಒನ್ ಸ್ಥಾನದಲ್ಲಿಯೇ ಇದೆ.ಇದಲ್ಲದೇ,ಹೆಚ್ಚಿನ ಪ್ರಯೋಜನಗಳನ್ನು ನೀಡುವ ಹಲವು ಯೋಜನೆಗಳನ್ನು ಜಿಯೋ ಹೊಂದಿದೆ.ಜಿಯೋದ ರಿಚಾರ್ಜ್ ಪ್ಲಾನ್ ನಲ್ಲಿ ನೆಟ್‌ಫ್ಲಿಕ್ಸ್ ಕೂಡಾ ಫ್ರೀಯಾಗಿ ಸಿಗುತ್ತಿದ್ದು, ಇದು ಸಾಕಷ್ಟು ಜನಪ್ರಿಯವಾಗಿದೆ.
ಜಿಯೋದ 1299 ರೂ.ಯೋಜನೆ :
ಜಿಯೋದ 1299 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರು ಅನ್ಲಿಮಿಟೆಡ್ 5G ಡೇಟಾದ ಆನಂದವನ್ನು ಪಡೆಯಬಹುದು.ಇದರಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಅಂದರೆ 3 ತಿಂಗಳವರೆಗೆ ರಿಚಾರ್ಜ್ ಬಗ್ಗೆ ಯೋಚಿಸಬೇಕಿಲ್ಲ. ಡೇಟಾದ ದೃಷ್ಟಿಯಿಂದಲೂ ಇದೊಂದು ಬೆಸ್ಟ್ ಪ್ಲಾನ್. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಸಿಗುತ್ತದೆ.ಅಂದರೆ ಯಾವುದೇ ಚಿಂತೆಯಿಲ್ಲದೆ ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ದೆಹಲಿ, ನೋಯ್ಡಾ ಅಲ್ಲ... ಅತಿವೇಗದ ಇಂಟರ್ನೆಟ್ ಲಭ್ಯವಿರೋದು ಭಾರತದ ಈ ನಗರದಲ್ಲಿ!
ಈ ಪ್ಲಾನ್ ನಲ್ಲಿ ನೆಟ್‌ಫ್ಲಿಕ್ಸ್ ಫ್ರೀ :
ಈ ಯೋಜನೆಯಲ್ಲಿ 84 ದಿನಗಳವರೆಗೆ ನೆಟ್‌ಫ್ಲಿಕ್ಸ್ ಮೊಬೈಲ್‌ನ ಚಂದಾದಾರಿಕೆ ಕೂಡಾ ಸಿಗುವುದು.ಇದರರ್ಥ ನೆಟ್‌ಫ್ಲಿಕ್ಸ್ ಅನ್ನು ಆರಾಮವಾಗಿ ಆನಂದಿಸಬಹುದು. ಇದಲ್ಲದೆ, JioTV, JioCinema ಮತ್ತು JioCloud ನ ಪ್ರಯೋಜನಗಳು ಕೂಡಾ ಲಭ್ಯವಿದೆ.ಆದರೆ, ಈ ಪ್ಲಾನ್ ನಲ್ಲಿ JioCinema ಪ್ರೀಮಿಯಂ ಮಾತ್ರ ಲಭ್ಯವಿರುವುದಿಲ್ಲ.JioCinema ಪ್ರೀಮಿಯಂ ಬೇಕಿದ್ದಲ್ಲಿ ಪ್ರತ್ಯೇಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಒಂದು ದಿನದಲ್ಲಿ ಎರಡು GB ಡೇಟಾ ಬೇಗನೆ ಮುಗಿದು ಹೋದರೆ ನಂತರ ಸ್ಪೀಡ್ 64Kbps ಗೆ ಕಡಿಮೆಯಾಗುತ್ತದೆ.ಇದಲ್ಲದೆ,ಈ ಯೋಜನೆಯಲ್ಲಿ ಪ್ರತಿದಿನ 100 SMS ಸೌಲಭ್ಯ ಕೂಡಾ ಇದೆ.ಈ ಯೋಜನೆಯನ್ನು ಹೊರತುಪಡಿಸಿ, 1799 ರೂಗಳ ಪ್ಲಾನ್ ಕೂಡಾ ಇದೆ. ಇದರಲ್ಲಿ ಉಳಿದೆಲ್ಲಾ ಪ್ರಯೋಜನಗಳು ಒಂದೇ ರೀತಿ ಆಗಿದ್ದು, ನಿತ್ಯ 2GB ಬದಲಿಗೆ 3GB ಡೇಟಾ ಸಿಗುತ್ತದೆ.
ಇದನ್ನೂ ಓದಿ : ರಾತ್ರಿ ಮಲಗುವಾಗ ಮೊಬೈಲ್ ಎಷ್ಟು ದೂರ ಇಟ್ಟುಕೊಳ್ಳಬೇಕು? ದಿಂಬಿನ ಬಳಿ ಇಟ್ಟರೆ ಆಗುವ ಸಮಸ್ಯೆಗಳೇನು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.