ದೆಹಲಿ, ನೋಯ್ಡಾ ಅಲ್ಲ... ಅತಿವೇಗದ ಇಂಟರ್ನೆಟ್ ಲಭ್ಯವಿರೋದು ಭಾರತದ ಈ ನಗರದಲ್ಲಿ!

Fast internet available city: ಇಂದಿನ ಕಾಲದಲ್ಲಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ, ಪ್ರತಿಯೊಬ್ಬರೂ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಯಸುತ್ತಾರೆ ಮತ್ತು ಬಳಸುತ್ತಾರೆ. ಆದರೆ ಮೊಬೈಲ್ ಇಂಟರ್‌ನೆಟ್ ವಿಷಯದಲ್ಲಿ ಭಾರತ ವಿಶ್ವದಲ್ಲಿ 12ನೇ ಸ್ಥಾನಕ್ಕೆ ಬಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

Written by - Bhavishya Shetty | Last Updated : Aug 6, 2024, 09:00 PM IST
    • ಭಾರತದ ಯಾವ ನಗರಗಳಲ್ಲಿ ಜನರು ವೇಗದ ಇಂಟರ್ನೆಟ್ ಅನ್ನು ಆನಂದಿಸುತ್ತಿದ್ದಾರೆ?
    • ಮೊಬೈಲ್ ಇಂಟರ್ನೆಟ್‌ʼನಲ್ಲಿ ಭಾರತವು ವಿಶ್ವದಲ್ಲಿ 12 ನೇ ಸ್ಥಾನದಲ್ಲಿದೆ
    • ಬ್ರಾಡ್‌ ಬ್ಯಾಂಡ್ ಇಂಟರ್ನೆಟ್ ವಿಷಯದಲ್ಲಿ ಭಾರತವು ವಿಶ್ವದಲ್ಲಿ 85 ನೇ ಸ್ಥಾನದಲ್ಲಿದೆ.
ದೆಹಲಿ, ನೋಯ್ಡಾ ಅಲ್ಲ... ಅತಿವೇಗದ ಇಂಟರ್ನೆಟ್ ಲಭ್ಯವಿರೋದು ಭಾರತದ ಈ ನಗರದಲ್ಲಿ! title=
city with fastest internet

Fast internet available city: ದೇಶವು ಡಿಜಿಟಲ್ ಯುಗದಲ್ಲಿ ಓಡುತ್ತಿದೆ. ಹೆಚ್ಚಿನ ಕೆಲಸಗಳು ಇಂಟರ್ನೆಟ್ ಅನ್ನು ಅವಲಂಬಿಸಿವೆ. ಇದರಲ್ಲಿ ಮೊಬೈಲ್ ಇಂಟರ್‌ನೆಟ್ ಜನರ ಮೂಲಭೂತ ಅಗತ್ಯವಾಗಿ ಪರಿಣಮಿಸಿದ್ದು ತಿಳಿದಿರುವ ಸಂಗತಿ. ಆದರೆ, ಇಂದಿಗೂ ಇಂಟರ್ನೆಟ್ ಕೆಲವು ಸ್ಥಳಗಳಲ್ಲಿ ಜನಪ್ರಿಯವಾಗಿಲ್ಲ.

ಇದನ್ನೂ ಓದಿ: ರಾತ್ರಿ ಮಲಗುವಾಗ ಮೊಬೈಲ್‌ ಎಷ್ಟು ದೂರ ಇಟ್ಟುಕೊಳ್ಳಬೇಕು? ದಿಂಬಿನ ಬಳಿ ಇಟ್ಟರೆ ಆಗುವ ಸಮಸ್ಯೆಗಳೇನು?

ಇಂದಿನ ಕಾಲದಲ್ಲಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ, ಪ್ರತಿಯೊಬ್ಬರೂ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಯಸುತ್ತಾರೆ ಮತ್ತು ಬಳಸುತ್ತಾರೆ. ಆದರೆ ಮೊಬೈಲ್ ಇಂಟರ್‌ನೆಟ್ ವಿಷಯದಲ್ಲಿ ಭಾರತ ವಿಶ್ವದಲ್ಲಿ 12ನೇ ಸ್ಥಾನಕ್ಕೆ ಬಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ವೇಗವು 107.03 mbps ನಲ್ಲಿ ದಾಖಲಾಗಿದೆ.

ಭಾರತದ ಯಾವ ನಗರಗಳಲ್ಲಿ ಜನರು ವೇಗದ ಇಂಟರ್ನೆಟ್ ಅನ್ನು ಆನಂದಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ದೆಹಲಿ, ಮುಂಬೈ ಅಥವಾ ನೋಯ್ಡಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಈ ಮೂರು ನಗರಗಳು ಈ ವಿಷಯದಲ್ಲಿ ಹಿಂದಿವೆ.

ಓಕ್ಲಾ ವರದಿಯ ಪ್ರಕಾರ, ಮೊಬೈಲ್ ಇಂಟರ್ನೆಟ್‌ʼನಲ್ಲಿ ಭಾರತವು ವಿಶ್ವದಲ್ಲಿ 12 ನೇ ಸ್ಥಾನದಲ್ಲಿದೆ. ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಬಗ್ಗೆ ಮಾತನಾಡುವುದಾದರೆ, ಬ್ರಾಡ್‌ ಬ್ಯಾಂಡ್ ಇಂಟರ್ನೆಟ್ ವಿಷಯದಲ್ಲಿ ಭಾರತವು ವಿಶ್ವದಲ್ಲಿ 85 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಬ್ರಾಡ್‌ಬ್ಯಾಂಡ್ ವೇಗವನ್ನು 63.99 mbps ನಲ್ಲಿ ದಾಖಲಿಸಲಾಗಿದೆ.

ಅತಿವೇಗದ ಇಂಟರ್ನೆಟ್ ಹೊಂದಿರುವ ನಗರ

ಭಾರತದ ಚೆನ್ನೈ ನಗರದಲ್ಲಿ ವಾಸಿಸುವ ಜನರು ವೇಗದ ಇಂಟರ್ನೆಟ್ ವೇಗದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, ಇಲ್ಲಿ ದಾಖಲಾಗಿರುವ ಇಂಟರ್ನೆಟ್ ವೇಗವು 51.07mbps ಆಗಿದೆ. ಎರಡನೇ ಸ್ಥಾನದಲ್ಲಿ ಬೆಂಗಳೂರು ಇದ್ದರೆ, ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ 42.50mbps ಇಂಟರ್ನೆಟ್ ವೇಗ ದಾಖಲಾಗಿದೆ. ಹೈದರಾಬಾದ್‌ʼನಲ್ಲಿ ಇಂಟರ್ನೆಟ್ ವೇಗ 41.68mbps ನಲ್ಲಿ ಇದೆ. ದೆಹಲಿಯಲ್ಲಿ ಇಂಟರ್ನೆಟ್ ವೇಗವು 32.39mbps ಇದ್ದು, ಈ ವೇಗದೊಂದಿಗೆ ಐದನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಎಲ್ಲಾ ಸ್ವರೂಪಗಳಿಗೂ 24 ವರ್ಷದ ಈ ಆಟಗಾರನೇ ಹೊಸ ಕ್ಯಾಪ್ಟನ್: ಸ್ಪಷ್ಟ ಹೇಳಿಕೆ ನೀಡಿದ ಕೋಚ್‌

ಈ ದೇಶವು ವಿಶ್ವದಲ್ಲೇ ಮುಂದು...

ಜಗತ್ತಿನಲ್ಲಿ ಯಾವ ದೇಶವು ಅತಿ ವೇಗದ ಇಂಟರ್ನೆಟ್ ವೇಗವನ್ನು ಹೊಂದಿದೆ ಎಂದು ತಿಳಿಯುವುದಾದರೆ, ಜರ್ಸಿ ದೇಶದಲ್ಲಿ ವೇಗವಾದ ಇಂಟರ್ನೆಟ್ ಲಭ್ಯವಿದೆ. ಜರ್ಸಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವಿನ ದ್ವೀಪ ರಾಷ್ಟ್ರವಾಗಿದ್ದು, ಇಂಟರ್ನೆಟ್ ವೇಗ 264.52mbps ಆಗಿದೆ. ಇನ್ನು ಲಿಚ್ಟೆನ್‌ʼಸ್ಟೈನ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಇಂಟರ್ನೆಟ್ ವೇಗ 246.76mbps ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News