Jio true 5G in Bengaluru : ಬೆಂಗಳೂರು :  ದೇಶದ ಆರು ನಗರಗಳಲ್ಲಿ ಜಿಯೋ ಟ್ರೂ- 5G ಸೇವೆಗಳ ಯಶಸ್ವಿ ಬೀಟಾ-ಅನಾವರಣದ ನಂತರ ಇದೀಗ  ಇನ್ನಷ್ಟು ನಗರಗಳಲ್ಲಿ ಜಿಯೋ ಟ್ರೂ- 5G ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ ನಲ್ಲಿಯೂ ಈಗ ಜಿಯೋ ಟ್ರೂ 5G ಸೇವೆ ಲಭ್ಯವಾಗುತ್ತಿದೆ. ನಿನ್ನೆಯಿಂದ ಅಂದರೆ ನವೆಂಬರ್ 10 ರಿಂದ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಸೇವೆ ಸಿಗುತ್ತಿದೆ.  ಇದಕ್ಕೂ ಮೊದಲು ದೇಶದ ಆರು ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರಗಳಲ್ಲಿ ಜಿಯೋ ಟ್ರೂ- 5G ಸೇವೆ ಸಿಗುತ್ತಿತ್ತು. ಜಿಯೋ ಟ್ರೂ 5Gಯು ಈ ಎರಡೂ ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ 


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ಜಿಯೋ ಇದೀಗ, ಸುಧಾರಿತ ಟ್ರೂ 5G ಸೇವೆಗಳನ್ನು ಹಂತ-ಹಂತವಾಗಿ ಹೊರತರುತ್ತಿದೆ. ಈಗಾಗಲೇ ಆರು ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಜಿಯೋ ಟ್ರೂ 5G ಅನುಭವವನ್ನ ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಕೂಡಾ ಅತ್ಯಂತ ಧನಾತ್ಮಕವಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ : Mobile Charging Tips : ಈ 5 ಸೆಟ್ಟಿಂಗ್‌ ಬದಲಾಯಿಸಿದರೆ, ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತೆ 


ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್‌ ನಿಂದ 1 ಜಿಬಿಪಿಎಸ್ ವರೆಗೆ ವೇಗದ ಅನುಭವವನ್ನು ಪಡೆಯುತ್ತಿದ್ದು, ಅತಿ ಹೆಚ್ಚು ಪ್ರಮಾಣದಲ್ಲಿ ಡೇಟಾ ಬಳಕೆಯಾಗುತ್ತಿದೆ. ಜಿಯೋ ಟ್ರೂ- 5G ಮೂರು ಪಟ್ಟು ಅನುಕೂಲಗಳನ್ನು ಗ್ರಾಹಕರಿಗೆ ನೀಡುತ್ತಿದೆ. 


1. 4G ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5G ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5G ಆರ್ಕಿಟೆಕ್ಚರ್.


2. 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5G ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.


3. ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5G ಫ್ರೀಕ್ವೆನ್ಸಿಗಳನ್ನು ಏಕರೂಪದ "ಡೇಟಾ ಹೈವೇ" ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜನೆ .


ಇದನ್ನೂ ಓದಿ :  jio recharge plan : ಕೇವಲ 299 ರೂಪಾಯಿಗೆ ಅನ್ಲಿಮಿಟೆಡ್ ಕಾಲ್, 56 GB ಹೈ-ಸ್ಪೀಡ್ ಇಂಟರ್ನೆಟ್‌


ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ. ಈ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ.



 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.