jio recharge plan : ಕೇವಲ 299 ರೂಪಾಯಿಗೆ ಅನ್ಲಿಮಿಟೆಡ್ ಕಾಲ್, 56 GB ಹೈ-ಸ್ಪೀಡ್ ಇಂಟರ್ನೆಟ್‌

Unlimited Calling Plan jio :ಕೇವಲ  299 ರೂಪಾಯಿ ವೆಚ್ಚದ ರಿಚಾರ್ಜ್ ಪ್ಲಾನ್ ನಲ್ಲಿ ಇಂಟರ್ನೆಟ್, ಅನ್ಲಿಮಿಟೆಡ್ ಕಾಲಿಂಗ್ ಸೇರಿದಂತೆ ಭಾರೀ ಪ್ರಯೋಜನಗಳನ್ನು ನೀಡುತ್ತಿದೆ. 

Written by - Ranjitha R K | Last Updated : Nov 10, 2022, 01:53 PM IST
  • ಜಿಯೋ ಅಗ್ಗದ ರಿಚಾರ್ಜ್ ಪ್ಲಾನ್
  • 299 ರೂಪಾಯಿಗೆ ಭಾರೀ ಪ್ರಯೋಜನ
  • ಈ ಯೋಜನೆಯಲ್ಲಿ ದಿನಕ್ಕೆ 2GB ಇಂಟರ್ನೆಟ್ ಪಡೆಯಬಹುದು.
jio recharge plan : ಕೇವಲ 299 ರೂಪಾಯಿಗೆ   ಅನ್ಲಿಮಿಟೆಡ್ ಕಾಲ್, 56 GB ಹೈ-ಸ್ಪೀಡ್ ಇಂಟರ್ನೆಟ್‌   title=
jio recharge plan (file photo)

Unlimited Calling Plan jio : ಜಿಯೋ ತನ್ನ ಗ್ರಾಹಕರಿಗೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು  ನೀಡುತ್ತಾ ಬಂದಿದೆ. ನಿಮ್ಮ ಬಜೆಟ್ ಗೆ ಅನುಗುಣವಾಗಿ, ಉತ್ತಮ ಪ್ರಮಾಣದ ಇಂಟರ್ನೆಟ್,  ಅನಿಯಮಿತ ಕರೆಯ ರಿಚಾರ್ಜ್ ಪ್ಲಾನ್ ಅನ್ನು ಕೂಡಾ ಗ್ರಾಹಕರಿಗೆ ನೀಡುತ್ತಿದೆ. ಇದೀಗ ಕೇವಲ  299 ರೂಪಾಯಿ ವೆಚ್ಚದ ರಿಚಾರ್ಜ್ ಪ್ಲಾನ್ ನಲ್ಲಿ ಇಂಟರ್ನೆಟ್, ಅನ್ಲಿಮಿಟೆಡ್ ಕಾಲಿಂಗ್ ಸೇರಿದಂತೆ ಭಾರೀ ಪ್ರಯೋಜನಗಳನ್ನು ನೀಡುತ್ತಿದೆ. 

299 ರೂಪಾಯಿ ರಿಚಾರ್ಜ್ ಪ್ಲಾನ್ : 
ಕೇವಲ 299 ರೂಪಾಯಿಯ  ಜಿಯೋ ರೀಚಾರ್ಜ್ ಪ್ಲಾನ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ.  ಈ ವ್ಯಾಲಿಡಿಟಿಯ ಜೊತೆಗೆ,  ಈ ಯೋಜನೆಯಲ್ಲಿ 56 GB ಹೈ ಸ್ಪೀಡ್ ಇಂಟರ್ನೆಟ್ ಅನ್ನು ಕೂಡಾ ಪಡೆಯುತ್ತಾರೆ. ಇದು ವೀಡಿಯೊಗಳನ್ನು ಪ್ಲೇ ಮಾಡಲು ಮತ್ತು ಇಂಟರ್ನೆಟ್  ಸರ್ಫಿಂಗ್ ಗೆ ಉಪಯುಕ್ತವಾಗಿದೆ.

ಇದನ್ನೂ ಓದಿ : ದಿನವಿಡೀ ಗೀಸರ್, ಹೀಟರ್ ಬಳಸಿದರೂ ಒಂದು ರೂಪಾಯಿಯಷ್ಟೂ ಹೆಚ್ಚುವುದಿಲ್ಲ ವಿದ್ಯುತ್ ಬಿಲ್ .!

ಈ ಯೋಜನೆಯಲ್ಲಿ ದಿನಕ್ಕೆ 2GB ಇಂಟರ್ನೆಟ್  ಪಡೆಯಬಹುದು. ಅನಿಯಮಿತ ಧ್ವನಿ ಕರೆಯನ್ನು ಬಳಸಿ ದೇಶದಾದ್ಯಂತ ಎಲ್ಲಿ ಬೇಕಾದರೂ ಕರೆ ಮಾಡಬಹುದಾಗಿದೆ. ಪ್ರತಿದಿನ 100 SMS ಹ ನೀಡಲಾಗುತ್ತದೆ. ಕಂಪನಿಯು ಗ್ರಾಹಕರ ಮನರಂಜನೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದ್ದು, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೇರಿದಂತೆ ತನ್ನ ಹಲವು ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಕೂಡಾ ನೀಡುತ್ತದೆ. 

ಇದನ್ನೂ ಓದಿ : ಸ್ಯಾಮ್‌ಸಂಗ್‌ ಹೊರತಂದಿದೆ 5G ಸ್ಮಾರ್ಟ್‌ಫೋನ್.! ವಿನ್ಯಾಸ, ವೈಶಿಷ್ಟ್ಯಗಳನ್ನು ತಿಳಿಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News