ಸ್ಯಾಮ್‌ಸಂಗ್‌ ಹೊರತಂದಿದೆ 5G ಸ್ಮಾರ್ಟ್‌ಫೋನ್.! ವಿನ್ಯಾಸ, ವೈಶಿಷ್ಟ್ಯಗಳನ್ನು ತಿಳಿಯಿರಿ

Samsung Galaxy A54 5G ಶೀಘ್ರದಲ್ಲೇ ಚೀನಾ ದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 3Cಯಲ್ಲಿ ಕಾಣಿಸಿಕೊಂಡಿರುವ ಮಾದರಿ ಸಂಖ್ಯೆ SM-A5460 ಸ್ಯಾಮ್‌ಸಂಗ್ ಸಾಧನವು ಮುಂಬರುವ Galaxy A54 5G ಆಗಿದೆ. 

Written by - Ranjitha R K | Last Updated : Nov 9, 2022, 04:49 PM IST
  • Samsung Galaxy A54 5G ಶೀಘ್ರದಲ್ಲೇ ಬಿಡುಗಡೆ
  • Samsung Galaxy A54 5G ವಿಶೇಷಣಗಳು ಏನಿವೆ ಗೊತ್ತಾ ?
  • Samsung Galaxy A54 5Gನಲ್ಲಿರಲಿದೆ ಅದ್ಬುತ ಕ್ಯಾಮೆರಾ
ಸ್ಯಾಮ್‌ಸಂಗ್‌ ಹೊರತಂದಿದೆ 5G ಸ್ಮಾರ್ಟ್‌ಫೋನ್.!  ವಿನ್ಯಾಸ, ವೈಶಿಷ್ಟ್ಯಗಳನ್ನು ತಿಳಿಯಿರಿ title=
Samsung Budget 5G Phone

ಬೆಂಗಳೂರು : Samsung Galaxy A54 5G ಶೀಘ್ರದಲ್ಲೇ ಚೀನಾ ದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 3Cಯಲ್ಲಿ ಕಾಣಿಸಿಕೊಂಡಿರುವ ಮಾದರಿ ಸಂಖ್ಯೆ SM-A5460 ಸ್ಯಾಮ್‌ಸಂಗ್ ಸಾಧನವು ಮುಂಬರುವ Galaxy A54 5G ಆಗಿದೆ. ಇದು 5G-ಸಕ್ರಿಯಗೊಳಿಸಿದ ಸಾಧನ ಎಂದು  ಹೇಳಲಾಗುತ್ತದೆ. ಇನ್-ಬಾಕ್ಸ್ ಚಾರ್ಜರ್ ಇಲ್ಲದೆಯೇ A54 ಶಿಪಿಂಗ್ ಆಗುವ ಸಾಧ್ಯತೆಯಿದೆ.

Samsung Galaxy A54 5G ಶೀಘ್ರದಲ್ಲೇ ಬಿಡುಗಡೆ :
ಹಿಂದಿನ Galaxy A5x-ಸರಣಿ ಫೋನ್ ಅನ್ನು 3C ಯ ಡೇಟಾಬೇಸ್‌ನಲ್ಲಿ ಮೊದಲು ಕಾಣಿಸಿಕೊಂಡ ಎರಡು ತಿಂಗಳ ನಂತರ ಬಿಡುಗಡೆ ಮಾಡಲಾಯಿತು.  A52 ಜನವರಿ 2021ರಲ್ಲಿ 3Cಯಲ್ಲಿ  ಹೊರಬಂದಿತ್ತು. ಅದೇ ವರ್ಷದ ಮಾರ್ಚ್‌ನಲ್ಲಿ ಫೋನ್ ಬಿಡುಗಡೆ ಮಾಡಲಾಗಿತ್ತು. 2022  ಜನವರಿಯಲ್ಲಿ Galaxy A53ಯನ್ನು   3C ಯಲ್ಲಿ ಅನಾವರಣ ಮಾಡಲಾಗಿತ್ತು. ಮಾರ್ಚ್‌ನಲ್ಲಿ ಈ ಫೋನ್ ಬಿಡುಗಡೆಯಾಗಿತ್ತು. ಈಗ Galaxy A54 5G ನವೆಂಬರ್‌ನಲ್ಲಿ 3C ಸರ್ಟಿಫಿಕೇಶನ್ ಆಗಿತ್ತು. ಜನವರಿ 2023ರ ವೇಳೆಗೆ ಈ ಫೋನ್ ಅನ್ನು ಅಧಿಕೃತವಾಗಿ ಬಿಡುಗಡ ಮಾಡಬಹುದು ಎಂದು ಹೇಳಲಾಗಿತ್ತು. 

ಇದನ್ನೂ ಓದಿ : Internet Speed: ಇಂಟರ್ನೆಟ್ ನಿಧಾನವಿದೆಯೇ? ಹಾಗಾದ್ರೆ ಈ ಚಿಕ್ಕ ಉಪಾಯವನ್ನು ಅನುಸರಿಸಿ 5ಜಿ ಸ್ಪೀಡ್ ಪಡೆಯಿರಿ

Samsung Galaxy A54 5G ವಿಶೇಷಣಗಳು :
Galaxy A54 5G 5,100mAh ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. Galaxy A54 5G 50-ಮೆಗಾಪಿಕ್ಸೆಲ್ ನೊಂದಿಗೆ ಟ್ರಿಪಲ್ ಕ್ಯಾಮೆರಾವನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

Samsung Galaxy A54 5G ಕ್ಯಾಮೆರಾ :
ಇದು 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಸ್ನ್ಯಾಪರ್‌ನೊಂದಿಗೆ  ಬರುವ ಸಾಧ್ಯತೆಯಿದೆ. ಇದರಲ್ಲಿ ಡೆಪ್ತ್ ಸೆನ್ಸಾರ್ ಹೊಂದಿರುವ ಸಂಭವ ಕಡಿಮೆ ಎಂದು ಹೇಳಲಾಗಿದೆ. A54 5G ನಾಲ್ಕು ವರ್ಷಗಳವರೆಗೆ OS ಅಪ್‌ಗ್ರೇಡ್ ಅನ್ನು ಪಡೆಯಬಹುದು. ಇದು Android 13 OS ನೊಂದಿಗೆ ಬರುವುದರಿಂದ, ಕೆಲವು ವರ್ಷಗಳ ನಂತರ ಇದು Android 17 OS ಅನ್ನು ಅಪ್‌ಗ್ರೇಡ್ ಮಾಡಬಹುದು.

ಇದನ್ನೂ ಓದಿ : ಬಲವಾದ ಬ್ಯಾಟರಿ, ಉತ್ತಮ ಕ್ಯಾಮರಾ ಜೊತೆಗೆ ಲಭ್ಯವಾಗಲಿದೆ ನೋಕಿಯಾದ 5ಜಿ ಸ್ಮಾರ್ಟ್‌ಫೋನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News