Valentines Day  Special : ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ ಹೊಸ ವ್ಯಾಲೆಂಟೈನ್ಸ್ ಡೇ ಕೊಡುಗೆಯನ್ನು ಪರಿಚಯಿಸಿದೆ. ಕಂಪನಿಯು ಪ್ರಿಪೇಯ್ಡ್ ಬಳಕೆದಾರರಿಗೆ 87GB ಮೊಬೈಲ್ ಡೇಟಾ, ಫ್ಲೈಟ್ ಬುಕಿಂಗ್‌ನಲ್ಲಿ ರಿಯಾಯಿತಿಗಳು, ಉಚಿತ ಬರ್ಗರ್ ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ. ಈ ಕೊಡುಗೆಯನ್ನು ಕಂಪನಿಯ ಅಧಿಕೃತ ಅಪ್ಲಿಕೇಶನ್ MyJio ನಲ್ಲಿ ನೋಡಬಹುದು. 


COMMERCIAL BREAK
SCROLL TO CONTINUE READING

ಜಿಯೋ ವ್ಯಾಲೆಂಟೈನ್ಸ್ ಡೇ ಆಫರ್ 2023 :
ಆಯ್ದ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಬಳಕೆದಾರರು 87GBವರೆಗೆ ಉಚಿತ ಮೊಬೈಲ್ ಡೇಟಾ  ಪಡೆಯಬಹುದು. ಜಿಯೋದ ಒಂದು ಪ್ಲಾನ್ ನೊಂದಿಗೆ 87GB ಉಚಿತ ಡೇಟಾವನ್ನು ನೀಡುತ್ತಿದೆ. ಇದಲ್ಲದೆ, ಇಕ್ಸಿಗೋದಲ್ಲಿ 4,500 ರೂ ಅಥವಾ ಅದಕ್ಕಿಂತ ಹೆಚ್ಚಿನ ಫ್ಲೈಟ್ ಬುಕಿಂಗ್‌ನಲ್ಲಿ  750 ರೂಪಾಯಿವರೆಗೆ  ರಿಯಾಯಿತಿ ಲಭ್ಯವಿರುತ್ತದೆ. ಫರ್ನ್ಸ್ & ಪೆಟಲ್ಸ್ ಅಪ್ಲಿಕೇಶನ್‌ನಿಂದ ಕನಿಷ್ಠ 799 ರೂಪಾಯಿವರೆಗಿನ ಆರ್ಡರ್ ಮೇಲೆ 150 ವರೆಗೆ ರಿಯಾಯಿತಿ ಸಿಗಲಿದೆ. 
 
ಇದನ್ನೂ ಓದಿ :  WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ!


ರಿಲಯನ್ಸ್ ಜಿಯೋ ಬಳಕೆದಾರರು ಮೆಕ್‌ಡೊನಾಲ್ಡ್ಸ್‌ನಲ್ಲಿ 199 ರೂ.ಗಿಂತ ಹೆಚ್ಚು ಬೆಲೆಯ ಆಹಾರ ಖರೀದಿ ಮಾಡಿದರೆ 105 ರೂ ಮೌಲ್ಯದ  ಚಿಕನ್ ಕಬಾಬ್ ಅಥವಾ ಮ್ಯಾಕ್‌ಆಲೂ ಟಿಕ್ಕಿ ಬರ್ಗರ್ ಅನ್ನು ಕಉಚಿತವಾಗಿ ಕ್ಲೈಂ   ಮಾಡಬಹುದು. ಅಪ್ಲಿಕೇಶನ್ ಬಳಸಿಕೊಂಡು ಕೂಪನ್ ಮೂಲಕ ಈ ಆಫರ್ ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ MyJio ಅಪ್ಲಿಕೇಶನ್‌ಗೆ ಹೋಗಿ ಮತ್ತು 'ಕೂಪನ್ಸ್ & ವಿನ್' ಗೆ ನ್ಯಾವಿಗೇಟ್ ಮಾಡಬೇಕು.


ಏನೆಲ್ಲಾ ಸಿಗಲಿದೆ ಈ ಪ್ಲಾನ್ ನಲ್ಲಿ :


ಜಿಯೋದ ಈ ಕೊಡುಗೆಯು 249,  349,  899 ಮತ್ತು  2,999 ರ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಲಭ್ಯವಿದೆ. 249 ರೂ ಯೋಜನೆಯಲ್ಲಿ 2GB ದೈನಂದಿನ ಡೇಟಾ ಲಭ್ಯವಿದ್ದು, 23 ದಿನಗಳ ಮಾನ್ಯತೆ ಇದೆ.  349 ರ ಯೋಜನೆಯಲ್ಲಿ, ಪ್ರತಿದಿನ 2.5GB ಡೇಟಾದೊಂದಿಗೆ 30 ದಿನಗಳ ಮಾನ್ಯತೆ ಲಭ್ಯವಿದೆ. 899 ಯೋಜನೆಯು 2.5GB ದೈನಂದಿನ ಡೇಟಾವನ್ನು ಮತ್ತು 90 ದಿನಗಳ ಮಾನ್ಯತೆಯೊಂದಿಗೆ ಪಡೆಯಬಹುದು. 2,999 ಯೋಜನೆಯು 2.5GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು 388 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ 87GB ಉಚಿತ ಡೇಟಾ ಲಭ್ಯವಿದೆ. ಎಲ್ಲಾ ಯೋಜನೆಗಳೊಂದಿಗೆ ಅನಿಯಮಿತ ಕರೆ ಮತ್ತು SMS ಲಭ್ಯವಿದೆ. 


ಇದನ್ನೂ ಓದಿ :  Nothing Phone 1 ಮೇಲೆ ಭಯಂಕರ ಡಿಸ್ಕೌಂಟ್! ನೀವು ನಿಮ್ಮ ಕನಸಲ್ಲೂ ಊಹಿಸಿರಲಿಕ್ಕಿಲ್ಲ...


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.