ಕೇವಲ 7 ಸಾವಿರ ರೂಪಾಯಿಗೆ ಲಾಂಚ್ ಆಯಿತು Moto E13!

Moto E13 launch : ಕಂಪನಿಯು ಪ್ರೀಮಿಯಂ ವಿನ್ಯಾಸದೊಂದಿಗೆ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದು HD+ IPS LCD ಡಿಸ್ಪ್ಲೇಯನ್ನು  ಹೊಂದಿದೆ.  ಇದರ ಬೆಲೆ ಕೂಡಾ ಅತ್ಯಂತ ಕಡಿಮೆಯಾಗಿದೆ. 

Written by - Ranjitha R K | Last Updated : Feb 8, 2023, 01:19 PM IST
  • Moto E13 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.
  • ಫೋನ್ 4GB RAM ಅನ್ನು ಹೊಂದಿದೆ.
  • ಇದು ಅಗ್ಗದ ಬೆಲೆ ಸೂಪರ್ ಸ್ಮಾರ್ಟ್ ಫೋನ್
ಕೇವಲ 7 ಸಾವಿರ ರೂಪಾಯಿಗೆ ಲಾಂಚ್ ಆಯಿತು Moto E13! title=

ಬೆಂಗಳೂರು : Moto E13 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಶಕ್ತಿಯುತ ಪ್ರೊಸೆಸರ್ ನೊಂದಿಗೆ ದೀರ್ಘಕಾಲೀನ ಬ್ಯಾಟರಿಯೊಂದಿಗೆ ಈ ಫೋನ್ ಬರುತ್ತಿದೆ. ಫೋನ್ 4GB RAM ಅನ್ನು ಹೊಂದಿದೆ. ಮೈಕ್ರೋ SD ಕಾರ್ಡ್ ಸಹಾಯದಿಂದ  ಸ್ಟೋರೇಜ್ ಅನ್ನು ಹೆಚ್ಚಿಸುವ ಆಯ್ಕೆಯನ್ನು ಕೂಡಾ ನೀಡಲಾಗಿದೆ. ಕಂಪನಿಯು ಪ್ರೀಮಿಯಂ ವಿನ್ಯಾಸದೊಂದಿಗೆ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದು HD+ IPS LCD ಡಿಸ್ಪ್ಲೇಯನ್ನು  ಹೊಂದಿದೆ. 

Moto E13 ವೈಶಿಷ್ಟ್ಯ : 
1.5000mAh ಬ್ಯಾಟರಿ
2. ಆಂಡ್ರಾಯ್ಡ್ 12 ಓಎಸ್
3. 10W ಚಾರ್ಜಿಂಗ್ ಬೆಂಬಲ
4. UNISOC T606 ಪ್ರೊಸೆಸರ್
5. 6.5 ಇಂಚಿನ ಡಿಸ್ಪ್ಲೇ

ಮೊಟೊರೊಲಾ ಸ್ಮಾರ್ಟ್‌ಫೋನ್ 6.5 ಇಂಚಿನ HD+IPS LCD ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಸೊಗಸಾದ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ. ಇದು Android13 ಆಧಾರಿತ Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : ಅದ್ಭುತ ವೈಶಿಷ್ಟ್ಯಗಳೊಂದಿಗೆ ಇಂದು ಸಂಜೆ ಮಾರುಕಟ್ಟೆಗೆ ಕಾಲಿಡುತ್ತಿದೆ OnePlus Cloud 11

ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ, UNISOC T606 ಪ್ರೊಸೆಸರ್ ಅನ್ನು ನೀಡಲಾಗಿದೆ. ಈ Motorola ಫೋನ್ 64GB  ಸ್ಟೋರೇಜ್ ಅನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಸಹಾಯದಿಂದ 1TBಗೆ ಹೆಚ್ಚಿಸಬಹುದು. 

10W ಚಾರ್ಜಿಂಗ್ ಸಪೋರ್ಟ್ ನೊಂದಿಗೆ  ಬರುವ ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಮಾಡಲು ಫೋನ್‌ನಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ನೀಡಲಾಗಿದೆ. ಇದು 8.5 ಮಿಮೀ ದಪ್ಪ ಮತ್ತು 180 ಗ್ರಾಂ ತೂಕವಿದೆ. ಸಂಪರ್ಕಕ್ಕಾಗಿ, ಫೋನ್ ಡ್ಯುಯಲ್ ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ 5.0 ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. 

ಇದನ್ನೂ ಓದಿ : ಜಿಯೋ ಬಳಕೆದಾರರಿಗೆ ಬಂಪರ್: ಈ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಫುಲ್ ಫ್ರೀ

ಕ್ಯಾಮರಾ ಸೆಟಪ್ ಹೇಗಿದೆ? :
ಫೋನ್ 13MP AI  ರಿಯರ್  ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನಲ್ಲಿ ಸೆಲ್ಫಿ ಮತ್ತು ವೀಡಿಯೊ ಕಾಲ್ ಗಾಗಿ 5MP ಫ್ರಂಟ್ ಕ್ಯಾಮೆರಾವನ್ನು  ಒದಗಿಸಲಾಗಿದೆ. 

ಫೋನ್ ಬೆಲೆ : 
Moto E13 ಅನ್ನು ಅರೋರಾ ಗ್ರೀನ್, ಕಾಸ್ಮಿಕ್ ಬ್ಲಾಕ್ ಮತ್ತು ಕ್ರೀಮ್ ವೈಟ್  ಹೀಗೆ  ಮೂರು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಫೆಬ್ರವರಿ 15 ರಿಂದ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ಕಂಪನಿಯು ಇದನ್ನು  6,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಇದು ಫೋನ್‌ನ 2GB RAM ರೂಪಾಂತರದ ಬೆಲೆಯಾಗಿದೆ. 4GB RAM ಹೊಂದಿರುವ  ಫೋನ್ ಗೆ 7,999  ರೂ. ಪಾವತಿಸಬೇಕಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News