ನವದೆಹಲಿ : ವಾಟ್ಸಾಪ್ (Whatsapp) ತನ್ನ ಬಳಕೆದಾರರಿಗೆ ಅನೇಕ ವೈಶಿಷ್ಟ್ಯಗಳನ್ನು ನೀಡುತ್ತಲೇ ಇದೆ. ಆದರೆ, ನಾವು ಇವತ್ತು ಹೇಳುತ್ತಿರುವುದು ವಾಟ್ಸಾಪ್ ಫೀಚರ್ (Whatsapp features) ಬಗ್ಗೆ ಅಲ್ಲ. ಇದು ವಾಟ್ಸಾಪ್ ಬಳಕೆದಾರರಿಗೆ ತಿಳಿದಿರಬೇಕಾದ ವಿಚಾರ. ಈ ಮಾಹಿತಿಯ ಕೊರತೆಯಿಂದಾಗಿ, ಹೆಚ್ಚಿನ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಾರೆ.  ಅದೇನೆಂದರೆ,  ನಿಮ್ಮ ಯಾವುದೇ ಚಾಟ್‌ಗಳನ್ನು (Whatsapp chat) ಮಿಸ್ ಮಾಡಿಕೊಳ್ಳದೆ, ಸುಲಭವಾಗಿ ನಂಬರ್ ಬದಲಾಯಿಸಬಹುದು. ಇದರ ಮತ್ತೊಂದು ವಿಶೇಷವೆಂದರೆ  ಬಳಕೆದಾರರು ತಮ್ಮ Contactsಗೆ  ಸಂಖ್ಯೆಯ ಬದಲಾವಣೆಯ ಬಗ್ಗೆ ಆಟೋಮ್ಯಾಟಿಕ್ ಮಾಹಿತಿಯನ್ನು ನೀಡುವುದು ಕೂಡಾ ಸಾಧ್ಯವಾಗುತ್ತದೆ. ನಿಮ್ಮ ಚಾಟ್‌ಗಳನ್ನು ಮಿಸ್ ಮಾಡಿಕೊಳ್ಳದೆ, ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು (WhatsApp Number) ಸುಲಭವಾಗಿ ಹೇಗೆ ಬದಲಾಯಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಮೊದಲ ಹಂತ : 
ವಾಟ್ಸಾಪ್ ಸಂಖ್ಯೆಯನ್ನು ಬದಲಾಯಿಸುವ (Whatsapp number change) ಮೊದಲು, ಫೋನ್‌ನಲ್ಲಿ ಹೊಸ ನಂಬರಿನ ಸಿಮ್ ಕಾರ್ಡ್ ಹಾಕಿ,  ಫೋನ್ ಮತ್ತು ಎಸ್‌ಎಂಎಸ್ ಅನ್ನು ಹೊಸ ನಂಬರಿನಲ್ಲಿ ಸ್ವೀಕರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಹಳೆಯ ಫೋನ್ ನಂಬರ್ ಕೂಡಾ ವಾಟ್ಸಾಪ್‌ನಲ್ಲಿ (whatsapp) ರಿಜಿಸ್ಟರ್ಡ್ ಆಗಿದೆಯೇ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ. ವಾಟ್ಸಾಪ್ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಪ್ರೊಫೈಲ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ನೋಂದಾಯಿತ ಸಂಖ್ಯೆಯನ್ನು ವೀಕ್ಷಿಸಬಹುದು.


ಇದನ್ನೂ ಓದಿ : ಯಾರೂ ಓದಬಾರದು ಎಂದಿರುವ WhatsApp ಮೆಸೇಜನ್ನು ಡಿಲೀಟ್ ಮಾಡಲೇಬೇಕೆಂದಿಲ್ಲ, ಹೈಡ್ ಮಾಡಲೂಬಹುದು


ಹಂತ ಹಂತವಾಗಿ ಈ ರೀತಿ ಮಾಡಿ : 
1. ಈ ಹೊಸ ನಂಬರ್ ಅನ್ನು ಆರಂಭಿಸುವ ಮೊದಲು, ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ, ನೀವು ಐಫೋನ್ ಬಳಕೆದಾರರಾಗಿದ್ದರೆ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.
2. ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ಅಪ್ಲಿಕೇಶನ್‌ನಲ್ಲಿ ಮೇಲಿನ 3 ಡಾಟ್ ಗಳ ಮೇಲೆ ಕ್ಲಿಕ್ ಮಾಡಿ.
3. ಈಗ ಅಕೌಂಟ್ ಆಪ್ಶನ್ ಮೇಲೆ ಟ್ಯಾಪ್ ಮಾಡಿ Change Number ಆಯ್ಕೆಗೆ ಹೋಗಿ.
4. ಇಲ್ಲಿ ನಿಮ್ಮ ಹೊಸ ನಂಬರ್ ನಲ್ಲಿ ಪೋನ್ ಮತ್ತು SMS ಸ್ವೀಕರಿಸಲು ಸಾಧ್ಯವಾಗುತ್ತದೆ ಎನ್ನುವುದನ್ನು Confirm ಮಾಡಬೇಕಾಗುತ್ತದೆ. 
5. ನಿಮ್ಮ ಹಳೆ ಮತ್ತು ಹೊಸ ಎರಡೂ ನಂಬರ್ ಗಳನ್ನು ಎಂಟರ್ ಮಾಡಿ. ನಂತರ Next ಮೇಲೆ ಟ್ಯಾಪ್ ಮಾಡಿ. 


ಇದನ್ನೂ ಓದಿ : Tecno Spark 7T- 6,000mAh ಬ್ಯಾಟರಿ ಸಾಮರ್ಥ್ಯದ ಅಗ್ಗದ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ


6. ನಿಮ್ಮ ನಂಬರ್ ಬದಲಾಗಿರುವ ಬಗ್ಗೆ ನಿಮ್ಮ ಕಾಂಟ್ಯಾಕ್ಟ್ ಗಳಿಗೆ ತಿಳಿಸಲು ಬಯಸುತ್ತೀರಾ ಎಂದು ವಾಟ್ಸಾಪ್ ಕೇಳುತ್ತದೆ.
7.ಇಲ್ಲಿ Contacts, All Contacts, I have Chat with ಅಥವಾ Custome Numbers ಆಯ್ಕೆ ಕಾಣಿಸುತ್ತದೆ. ನಿಮ್ಮ ನಂಬರ್ ಬದಲಾಯಿಸುವ ಮಾಹಿತಿಯು Automactically  ವಾಟ್ಸಾಪ್ ಗ್ರೂಪ್ ಗಳಿಗೆ ಸಿಗುತ್ತದೆ. 
8.ಈಗ Done ಮೇಲೆ ಟ್ಯಾಪ್ ಮಾಡಿ.
9.ಕೊನೆಯದಾಗಿ, ಹೊಸ ಫೋನ್ ಸಂಖ್ಯೆಯನ್ನು ನೋಂದಾಯಿಸಲು ವಾಟ್ಸಾಪ್ ಕೇಳುತ್ತದೆ.
10. ಸಂಖ್ಯೆಯನ್ನು ನೋಂದಾಯಿಸಲು, ನಿಮ್ಮ ಬಳಿ 6 ಅಂಕೆಗಳ ಕೋಡ್ ಅಥವಾ ಫೋನ್ ಕರೆ ಬರುತ್ತದೆ. 
11. ನೋಂದಾಯಿಸಿದ ನಂತರ, ನೀವು ಮೊದಲಿನಂತೆ ನಿಮ್ಮ ಹೊಸ ಸಂಖ್ಯೆಯೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.


ವಾಟ್ಸಾಪ್‌ನಲ್ಲಿ ಬ್ಯಾಕಪ್ ಚಾಟ್‌ಗಳು :
ನೀವು ನಂಬರ ಜೊತೆ , ಫೋನ್ ಅನ್ನು ಕೂಡಾ ಬದಲಾಯಿಸುತ್ತಿದ್ದರೆ, ನೀವು Google Drive ಅಥವಾ iCloud ನಿಂದ ಚಾಟ್‌ಗಳನ್ನು ಬ್ಯಾಕಪ್ ಮಾಡಬೇಕಾಗುತ್ತದೆ. 


ಇದನ್ನೂ ಓದಿ : Mobile Hang: ಈ ಅಪ್ಲಿಕೇಶನ್‌ಗಳಿಂದಾಗಿ ನಿಮ್ಮ ಮೊಬೈಲ್ ಕೂಡ ಸ್ಲೋ ಆಗಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.