ನವದೆಹಲಿ : ಇಂದು ಗೂಗಲ್ (Google) ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಉದ್ಭವಿಸಿದರೂ ಅದಕ್ಕೆ ಗೂಗಲ್ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಬಹಳಷ್ಟು ಮಂದಿ ಮಾಡುತ್ತಾರೆ. ಮಾತ್ರವಲ್ಲ, ದೈನಂದಿನ ಕೆಲಸ, ಮನರಂಜನೆ ಹೀಗೆ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ,  Google search  ಮಾಡಲಾಗುತ್ತದೆ. ಹೀಗೆ  ಏನೆಲ್ಲಾ ಸರ್ಚ್ ಮಾಡಲಾಗುತ್ತದೆಯೋ ಅದು ಗೂಗಲ್ ಹಿಸ್ಟರಿಯಲ್ಲಿ (Google History) ಸೇವ್ ಆಗಿರುತ್ತದೆ. ನಿಮ್ಮ ಸರ್ಚ್ ಅನ್ನು   ರಹಸ್ಯವಾಗಿಡಬೇಕಾದರೆ ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಹಾಗಿದ್ದರೆ, ಗೂಗಲ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ?


1.  ಮೊದಲು ನೀವು Google ಆಕ್ಟಿವಿಟಿ ಕಂಟ್ರೋಲ್ ಪೇಜ್  (https://myactivity.google.com/) ತೆರೆಯಬೇಕು. ಈ ಪುಟವನ್ನು ತೆರೆದ ನಂತರ, ನಿಮ್ಮ Google ಖಾತೆಯೊಂದಿಗೆ ಸೈನ್-ಇನ್ ಮಾಡಬೇಕಾಗುತ್ತದೆ. ನಂತರ ಇಲ್ಲಿ ಕೆಳಭಾಗದಲ್ಲಿ ನೀಡಲಾದ ಆಟೋ ಡಿಲೀಟ್ (Auto delete) ಆಯ್ಕೆಯ  ಮೇಲೆ ಕ್ಲಿಕ್ ಮಾಡಬೇಕು.
2.  ಇಲ್ಲಿ ಆಟೋ ಡಿಲೀಟ್ ಆಕ್ಟಿವಿಟಿಸ್ ಓಲ್ಡರ್ ದಾನ್ 3 ಮಂತ್ ಅಥವಾ ಆಟೋ ಡಿಲೀಟ್ ಆಕ್ಟಿವಿಟಿಸ್ ಓಲ್ಡರ್ ದಾನ್ 18 ಮಂತ್ ಆಯ್ಕೆ ಇರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ. ಇಷ್ಟಾದ ಮೇಲೆ NEXT ಬಟನ್ ಮೇಲೆ ಟ್ಯಾಪ್ ಮಾಡಿ. 
3.  ಈಗ ಮುಂದಿನ ಪುಟದಲ್ಲಿ ಶಾಶ್ವತ ಬದಲಾವಣೆಗಾಗಿ Confirm ಬಟನ್ ಮೇಲೆ ಕ್ಲಿಕ್ ಮಾಡಬೇಕು.
4. ನಿಮ್ಮ ಚಟುವಟಿಕೆಗಳನ್ನು ಗೂಗಲ್ ಟ್ರ್ಯಾಕ್ ಮಾಡುವುದು ಅಥವಾ ರೆಕಾರ್ಡ್ ಮಾಡುವುದು ನಿಮಗೆ ಇಷ್ಟವಿಲ್ಲದಿದ್ದರೆ, ಇಲ್ಲಿ ವೆಬ್ ಎಂಡ್ ಆಕ್ಟಿವೀಟೀಸ್ ಟಾಗಲ್ ಅನ್ನು disable ಮಾಡಿ.


ಇದನ್ನೂ ಓದಿ : WhatsApp New Feature: WhatsAppನಿಂದ ಹೊಸ ವೈಶಿಷ್ಟ್ಯ ಬಿಡುಗಡೆ, ಹೇಗೆ ಬಳಸಬೇಕು?


ಅದೇ ರೀತಿ, ಸ್ಕ್ರಾಲ್ ಡೌನ್ ಮಾಡಿದ ನಂತರ, ನೀವು ಕೆಳಭಾಗದಲ್ಲಿರುವ ಲೋಕೆಶನ್ ಹಿಸ್ಟರಿ, YouTube ಹಿಸ್ಟರಿ ಟ್ಯಾಗಲ್ ಅನ್ನು disable ಮಾಡಿ. ಹೀಗೆ ಮಾಡುವುದರಿಂದ ಲೋಕೇಶನ್ ಹಿಸ್ಟರಿ, ವೆಬ್ ಆಕ್ಟಿವಿಟಿ, ಯೂಟ್ಯೂಬ್ ಸರ್ಚ್ ಗಳನ್ನು ಗೂಗಲ್ ಟ್ರ್ಯಾಕ್ ಮಾಡದಂತೆ ಮಾಡಬಹುದು. 


ನೆನಪಿರಲಿ, ಈ ಪ್ರಕ್ರಿಯೆಯ ನಂತರ, ಗೂಗಲ್‌ನಲ್ಲಿ ಪರ್ಸನಲೈಸ್ಡ್ ಎಕ್ಸ್ಪೀರಿಯನ್ಸ್ ಕಡಿಮೆಯಾಗುತ್ತದೆ. ಅಂದರೆ ಸಾಮಾನ್ಯವಾಗಿ ನಾವು ಗೂಗಲ್ ನಲ್ಲಿ ಏನೇ ಸರ್ಚ್ ಮಾಡಿದರೂ ಅದಕ್ಕೆ ಹೊಂದುವ ಅನೇಕ ಕಂಟೆಂಟ್ ಗಳನ್ನು ಗೂಗಲ್ ನೀಡುತ್ತದೆ. ಆದರೆ , ಈ ಪ್ರಕ್ರಿಯೆಯ ನಂತರ ಇದು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Cheapest Recharge Plan: ಕೇವಲ 11 ರೂ.ಗಳಿಗೆ ಅನಿಯಮಿತ ಕಾಲಿಂಗ್, ನಿತ್ಯ 4 ಜಿಬಿ ಡೇಟಾ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ