WhatsApp New Feature - ವಿಶ್ವದ ಅತಿ ಪ್ರಚಲಿತ ತ್ವರಿತ ಸಂದೇಶ ರವಾನಿಸುವ ಆಪ್ WhatsApp ಮತ್ತೊಂದು ನೂತನ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದು, ಇದರ ಸಹಾಯದಿಂದ ಬಳಕೆದಾರರು ಆಡಿಯೋ ಫೈಲ್ ಗಳನ್ನೂ ಕೇಳುವಾಗ ಹಲವು ಪ್ಲೇ ಬ್ಯಾಕ್ ಸ್ಪೀಡ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಹೊಸ ವೈಶಿಷ್ಟ್ಯವನ್ನು ಬಳಸಿ ನೀವು ದೊಡ್ಡದಾಗಿರುವ ಆಡಿಯೋ ಫೈಲ್ ಗಳನ್ನು ಸುಲಭವಾಗಿ ಕೇಳಬಹುದಾಗಿದೆ. ಇದಲ್ಲದೆ, ಹೊಸ ವೈಶಿಷ್ಟ್ಯವನ್ನು ದೊಡ್ಡ ಸಂದೇಶದಲ್ಲಿ ಮುಖ್ಯ ಹಂತಕ್ಕೆ ಬರಲು ಸಹ ಬಳಸಬಹುದು.
WhatsApp New Features Update - WhatsAppನ ಈ ನೂತನ ವೈಶಿಷ್ಟ್ಯದಿಂದ ದೀರ್ಘ ಸಂದೇಶಗಳನ್ನು ನಿರ್ವಹಿಸುವುದನ್ನು ತುಂಬಾ ಸುಲಭವಾಗಲಿದೆ. ಹಲವು ಬಾರಿ ಸಂಪೂರ್ಣ ಸಂದೇಶ ಕೇಳಲು ಸಮಯ ಬೇಕಾಗುತ್ತದೆ ಎಂಬ ಕಾರಣಕ್ಕೆ ನಾವು ಹಲವು ವಿವರಗಳನ್ನು ಸ್ಕಿಪ್ ಮಾಡುತ್ತವೆ. ಅಂಡ್ರಾಯಿಡ್ ಹಾಗೂ ಐಓಎಸ್ ಗಳಿಗಾಗಿ ವಾಟ್ಸ್ ಆಪ್ ನ ಲೇಟೆಸ್ಟ್ ಅಪ್ಡೇಟ್ ನಲ್ಲಿ ಫಾಸ್ಟ್ ಪ್ಲೇಬ್ಯಾಕ್ ಸ್ಪೀಡ್ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ವೈಶಿಷ್ಟ್ಯದಲ್ಲಿ ಎರಡು ಸ್ಪೀಡ್ ಆಯ್ಕೆಗಳನ್ನು ನೀಡಲಾಗಿದೆ. ಇದರಿಂದ ಒಟ್ಟು ಸ್ಪೀಡ್ ಗಳ ಸಂಖ್ಯೆ ಮೂರಕ್ಕೆ ಏರಿಕೆಯಾದಂತಾಗಿದೆ. ಈಗಾಗಲೇ ಪ್ಲೇಬ್ಯಾಕ್ ಸ್ಪೀಡ್ ಆಯ್ಕೆಯಲ್ಲಿ 1X ಲಭ್ಯವಿದ್ದು, ಇದು ಡಿಫಾಲ್ಟ್ ಮತ್ತು ಒರಿಜಿನಲ್ ಸ್ಪೀಡ್ ಆಯ್ಕೆಯಾಗಿದೆ. ಇದರ ಜೊತೆಗೆ 1.5X ಹಾಗೂ 2X ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇವುಗಳ ಸಹಾಯದಿಂದ ನೀವು ಫೈಲ್ ಗಳನ್ನು ಶೇ.5 ರಿಂದ ಶೇ.100 ವೇಗದಲ್ಲಿ ಚಲಾಯಿಸಬಹುದು. ಹಾಗಾದರೆ ಈ ಎರಡು ಸ್ಪೀಡ್ ಗಳನ್ನು ಸುಲಭವಾಗಿ ಹೇಗೆ ಬಳಸಬೇಕು ತಿಳಿಯೋಣ ಬನ್ನಿ.
ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?
ಈ ವೈಶಿಷ್ಟ್ಯ ಹೇಗೆ ಬಳಸಬೇಕು? (WhatsApp Latest Update)
WhatsApp Fast Playback ಅಂಡ್ರಾಯಿಡ್ ಹಾಗೂ iOS ಎರಡು ಪ್ಲಾಟ್ ಫಾರ್ಮ್ ಗಳ ಲೇಟೆಸ್ಟ್ ವರ್ಶನ್ ನಲ್ಲಿ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಬಳಸುವ ಮುನ್ನ ವಾಟ್ಸ್ ಆಪ್ ನ ಹೊಸ ವರ್ಶನ್ ಗೆ ಅಪ್ಡೇಟ್ ಆಗಲು ಮರೆಯದಿರಿ. WhatsAppನ ಲೇಟೆಸ್ಟ್ ವರ್ಶನ್ 2.21.101 ಆಗಿರಲಿದೆ. ಈ ವೈಶಿಷ್ಟ್ಯವನ್ನು ನೀವು WhatsApp Web ನಲ್ಲಿಯೂ ಕೂಡ ಬಳಕೆ ಮಾಡಬಹುದು.
ಇದನ್ನೂ ಓದಿ- Cheapest Recharge Plan: ಕೇವಲ 11 ರೂ.ಗಳಿಗೆ ಅನಿಯಮಿತ ಕಾಲಿಂಗ್, ನಿತ್ಯ 4 ಜಿಬಿ ಡೇಟಾ!
WhatsApp New Features Today - ಆಡಿಯೋ ಫೈಲ್ ಗಳ ಸ್ಪೀಡ್ ಹೆಚ್ಚಿಸಲು ಬಳಕೆದಾರರು ಮೊದಲು ವಾಟ್ಸ್ ಆಪ್ ಅನ್ನು ತೆರೆದು, ಯಾವ ವೈಸ್ ಮೆಸೇಜ್ ಕೇಳಬೇಕು ಅದರ ಮೇಲೆ ಕ್ಲಿಕ್ಕಿಸಬೇಕು. ವೈಸ್ ಮೆಸೇಜ್ ಕೇಳಲು ಆರಂಭಿಸಿ, 1.5x ಸ್ಪೀಡ್ ಗೆ ಬದಲಾಯಿಸಲು ವೈಸ್ ಮೆಸೇಜ್ ನ 1x ಮೇಲೆ ಟ್ಯಾಪ್ ಮಾಡಿ. 1.5X ನಿಂದ 2x ಗೆ ಹೋಗಲು ಎರಡನೇ ಬಾರಿಗೆ ಟ್ಯಾಪ್ ಮಾಡಿ. ಈಗಾಗಲೇ ನೀವು 2x ಸ್ಪೀಡ್ ನಲ್ಲಿದ್ದರೆ, 2x ಮೇಲೆ ಟ್ಯಾಪ್ ಮಾಡಿ ನೀವು ಮತ್ತೆ 1x ಸ್ಪೀಡ್ ಗೆ ಬರಬಹುದು.
ಇದನ್ನೂ ಓದಿ-SBI Alert! ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ಎರಡು ಪ್ರಮುಖ ಸುದ್ದಿಗಳನ್ನು ಓದಲು ಮರೆಯಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ