ನವದೆಹಲಿ: How Did Earth Gets Its Water - ಜಲವೇ (Water) ಜೀವನ ಎಂದು ಹೇಳಲಾಗುತ್ತದೆ. ಇದು ಅತ್ಯಮೂಲ್ಯವಾದ ಸಂಪನ್ಮೂಲವಾಗಿದೆ. ಭೂಮಿಯ ಮೇಲಿನ ಜೀವ ರಕ್ಷಣೆಗೆ ಇದು ಅತ್ಯಂತ ಮುಖ್ಯವಾಗಿದೆ. ಆದರೆ ಅದು ಎಲ್ಲಿಂದ ಬಂತು ಎಂಬುದಕ್ಕೆ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೆಗೆ ಉತ್ತರವೇನು ಗೊತ್ತಾ?  ಭೂಮಿಯ ಮೇಲಿನ ನೀರು (Water on Earth) ಎಲ್ಲಿಂದ ಬಂತು? ಈ ದೊಡ್ಡ ಪ್ರಶ್ನೆಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಲಾಗಿದೆ. 


COMMERCIAL BREAK
SCROLL TO CONTINUE READING

ಹೊಸ ಸಿದ್ಧಾಂತವನ್ನು ಬಹಿರಂಗಪಡಿಸಲಾಗಿದೆ
ಇದಕ್ಕೆ ಉತ್ತರವಾಗಿ ಕೆಲವೊಮ್ಮೆ ಒಂದು ಉತ್ತರ ಹೇಳಲಾದರೆ ಮತ್ತೊಮ್ಮೆ ಬೇರೆಯೇ ಒಂದು ತಥ್ಯ ಪ್ರಸ್ತುತ ಪಡಿಸಲಾಗಿದೆ. ಆದರೆ, ನಾಸಾ (NASA) ಅಥವಾ ಇತರ ಯಾವುದೇ ವಿಜ್ಞಾನ ನಿಯತಕಾಲಿಕದ ವಿಜ್ಞಾನಿಗಳು ಇಲ್ಲಿಯವರೆಗೆ, ಭೂಮಿಯ ಮೇಲೆ ನಾವು ನೋಡುತ್ತಿರುವ ನೀರು ಎಲ್ಲಿಂದ ಬಂತು ಎಂಬ ಸ್ಪಷ್ಟ ಉತ್ತರವನ್ನು ನೀಡಿಲ್ಲ?


ಏತನ್ಮಧ್ಯೆ, ಮತ್ತೊಮ್ಮೆ ವಿಜ್ಞಾನಿಗಳು ಬಾಹ್ಯಾಕಾಶ ಧೂಳಿನ (Solar Dust Analysis) ವಿಶ್ಲೇಷಣೆಯೊಂದಿಗೆ ಆ ಯುಗದ ಸೂರ್ಯ ಮತ್ತು ಸೌರ (Sun) ಮಾರುತಗಳನ್ನು ಸೂಚಿಸುವ ಹೊಸ ಸಿದ್ಧಾಂತವನ್ನು ಮುಂದಿಟ್ಟಿದ್ದಾರೆ. ಈ ಹಿಂದೆ ಭೂಮಿಯ ಮೇಲಿನ ನೀರು ಬಾಹ್ಯಾಕಾಶದಿಂದ ಬಂದ ಕ್ಷುದ್ರಗ್ರಹಗಳು ಮತ್ತು ಉಲ್ಕಾಶಿಲೆಗಳಿಂದ ಬಂದಿದೆ ಎಂದು ಹೇಳಲಾಗುತ್ತದೆ ಮತ್ತು ಕೆಲವೊಮ್ಮೆ ಭೂಮಿಯ ಮೇಲೆಯೇ ನೀರು ರೂಪುಗೊಂಡಿತು ಮತ್ತು ಮೊದಲಿನಿಂದಲೂ ಇಲ್ಲಿಯೇ ಇದೆ ಎಂದು ಹೇಳಲಾಗುತ್ತದೆ. ಇದುವರೆಗಿನ  ಹೆಚ್ಚಿನ ಸಂಶೋಧನೆಗಳು ಭೂಮಿಯ ಮೇಲೆ ಬಿದ್ದ ಉಲ್ಕೆಗಳು ಮತ್ತು ಕ್ಷುದ್ರಗ್ರಹಗಳ ತುಣುಕುಗಳ ಮೇಲೆ ನಡೆದಿವೆ.


ಈ ಸಂಗತಿಗಳು ಸಂಶೋಧನೆಯಲ್ಲಿ ಹೊರಬಂದಿವೆ
ಸೂರ್ಯನಿಂದ ಬರುವ ಸೌರ ಮಾರುತ (Solar Winds) ಎಂಬ ಚಾರ್ಜ್ಡ್ ಕಣಗಳು ಬಾಹ್ಯಾಕಾಶದಲ್ಲಿರುವ ಧೂಳಿನ ಕಣಗಳ ರಾಸಾಯನಿಕ ಸಂಯೋಜನೆಯನ್ನು ಬದಲಾಯಿಸಿದಾಗ ಧೂಳಿನ ಕಣಗಳಲ್ಲಿ ನೀರು ರೂಪುಗೊಂಡಿತು ಎಂದು ಯುಕೆ, ಆಸ್ಟ್ರೇಲಿಯಾ ಮತ್ತು ಯುಎಸ್ ಸಂಶೋಧಕರು ಈ ಅಧ್ಯಯನದಲ್ಲಿ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ. 


ಹೊಸ ಅಧ್ಯಯನವು ಜಪಾನ್‌ನ 2010 ರ ಹಯಾಬುಸಾ ಮಿಷನ್‌ನಿಂದ ಪಡೆದ ಪ್ರಾಚೀನ ಕ್ಷುದ್ರಗ್ರಹ ಮಾದರಿಯನ್ನು ವಿಶ್ಲೇಷಿಸಿದೆ. ಭೂಮಿಯ ಮೇಲಿನ ನೀರು ಗ್ರಹದಿಂದ ರೂಪುಗೊಂಡ ಬಾಹ್ಯಾಕಾಶದ ಧೂಳಿನ ಕಣಗಳಿಂದ ಬಂದಿದೆ ಎಂದು ಈ ಅಧ್ಯಯನ ತೋರಿಸಿದೆ.


ಮಹಾಸಾಗರಗಳಲ್ಲಿ ಇಷ್ಟೊಂದು ನೀರು ಎಲ್ಲಿಂದ ಬಂತು
ವಿಜ್ಞಾನಿಗಳು ಈ ಪ್ರಕ್ರಿಯೆಯನ್ನು ಬಾಹ್ಯಾಕಾಶ ಹವಾಮಾನ ಎಂದು ಕರೆಯುತ್ತಾರೆ. ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ, ಕ್ಷುದ್ರಗ್ರಹಗಳಂತಹ ಮೂಲಗಳಿಂದ ವಸ್ತುಗಳನ್ನು ಮಿಶ್ರಣ ಮಾಡುವ ಮೂಲಕ ಭೂಮಿಯ ಸಾಗರಗಳಲ್ಲಿ ನೀರು ತುಂಬುವುದು ತುಂಬಾ ಸವಾಲಿನ ಕೆಲಸ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಸೌರ ಮಾರುತಗಳು ಈ ಪ್ರಶ್ನೆಗೆ ನಿಖರ ಉತ್ತರಗಳನ್ನು ನೀಡಬಹುದು ಎಂದು ವಿಜ್ಞಾನಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.


ಬಾಹ್ಯಾಕಾಶ ಶಿಲೆಯ ಮಾದರಿಗಳ ಅಧ್ಯಯನ
ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ವೆಬ್‌ಸೈಟ್ www.gla.ac.uk ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಜ್ಞಾನಿಗಳ ನೇತೃತ್ವದ ಅಂತರರಾಷ್ಟ್ರೀಯ ತಂಡವು ಪರಮಾಣು ಪ್ರೋಬ್ ಟೊಮೊಗ್ರಫಿ ಮೂಲಕ ವಿವಿಧ ರೀತಿಯ ಬಾಹ್ಯಾಕಾಶ ಶಿಲೆಗಳ ಮಾದರಿಗಳನ್ನು ಅಧ್ಯಯನ ಮಾಡಿದ್ದಾರೆ. ಈ ಬಂಡೆಗಳನ್ನು ಎಸ್ ಟೈಪ್ ಕ್ಷುದ್ರಗ್ರಹಗಳು ಎಂದು ಕರೆಯಲಾಗುತ್ತದೆ, ಇದು ಸಿ ಟೈಪ್ ಕ್ಷುದ್ರಗ್ರಹಗಳಿಗಿಂತ ಹತ್ತಿರದಲ್ಲಿಯೇ ಸೂರ್ಯನನ್ನು ಸುತ್ತುತ್ತವೆ.


ಮಾದರಿಗಳಲ್ಲಿ ನೀರಿನ ಅಣುಗಳು
ಈ ಮಾದರಿಗಳು ಇಟೊಕಾವಾ ಕ್ಷುದ್ರಗ್ರಹದಿಂದ ಬಂದಿವೆ ಮತ್ತು ಅವುಗಳನ್ನು ವಿಶ್ಲೇಷಿಸಲಾಗಿದೆ. ವಿಜ್ಞಾನಿಗಳು ಒಂದು ಸಮಯದಲ್ಲಿ ಒಂದು ಪರಮಾಣುವಿನ ಆಣ್ವಿಕ ರಚನೆಯನ್ನು ಅಧ್ಯಯನ ಮಾಡಿದಾಗ, ಅವುಗಳು ನೀರಿನ ಅಣುಗಳ ಉಪಸ್ಥಿತಿಯನ್ನು ಹೊಂದಿವೆ ಎಂಬುದನ್ನು ಪತ್ತೆಹಚ್ಚಲಾಗಿದೆ. ಈ ಅಧ್ಯಯನದ ಪ್ರಮುಖ ಲೇಖಕ, ಡಾ. ಲ್ಯೂಕ್ ಡೇಲಿ, ಈ ನೀರಿನ ಅಣುಗಳು ಅವುಗಳಲ್ಲಿ ಹೇಗೆ ತಲುಪಿವೆ ಅಥವಾ ರೂಪುಗೊಂಡವು ಎಂಬುದನ್ನು ವಿವರಿಸಿದ್ದಾರೆ. 


ಇದನ್ನೂ ಓದಿ-ಭೂಮಿಯ ವಾತಾವರಣದಲ್ಲಿ ನಡೆಯುತ್ತಿರುವ ಈ ಘಟನೆಗೆ NASA ಕೂಡ ದಿಗ್ಭ್ರಮೆ ವ್ಯಕ್ತಪಡಿಸಿದೆ


ಸೂರ್ಯನಿಂದ ಬರುವ ಹೈಡ್ರೋಜನ್ ಅಯಾನುಗಳು ಗಾಳಿಯಿಲ್ಲದೆ ಕ್ಷುದ್ರಗ್ರಹದೊಂದಿಗೆ ಬಾಹ್ಯಾಕಾಶದಲ್ಲಿ ಇರುವ ಧೂಳಿ ಕಣಗಳೊಂದಿಗೆ ಡಿಕ್ಕಿ ಹೊಡೆದು ಪದಾರ್ಥದ ಒಳಗೆ ಹೋಗಿ ಅವುಗಳ ರಾಸಾಯನಿಕ ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಯಲ್ಲಿ ತೊಡಗಿರುವ ಡಾ.  ಡಾಲೇ ಹೇಳಿದ್ದಾರೆ. ಈ ಕಾರಣದಿಂದಾಗಿ, ಹೈಡ್ರೋಜನ್ ಅಯಾನುಗಳು ಆಮ್ಲಜನಕದ ಅಣುಗಳೊಂದಿಗೆ ನಿಧಾನವಾಗಿ ಪ್ರತಿಕ್ರಿಯಿಸಿ ಬಂಡೆ ಮತ್ತು ಧೂಳಿನೊಳಗೆ ನೀರಿನ ಅಣುಗಳನ್ನು ರೂಪಿಸುತ್ತವೆ, ಅವು ಕ್ಷುದ್ರಗ್ರಹಗಳ ಖನಿಜಗಳಲ್ಲಿ ಅಡಗಿವೆ. ಈ ಧೂಳು ಸೌರ ಮಾರುತಗಳು ಮತ್ತು ಕ್ಷುದ್ರಗ್ರಹಗಳೊಂದಿಗೆ ಭೂಮಿಗೆ ಬಂದು ತಮ್ಮ ಜೊತೆಗೆ ನೀರನ್ನು ತಂದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-World's first living robots: ವಿಶ್ವದ ಮೊದಲ "Living robots"ಈಗ ಸಂತಾನೋತ್ಪತ್ತಿ ಮಾಡಬಹುದು: ಅಚ್ಚರಿ ತಂದ ವಿಜ್ಞಾನಿಗಳ ಹೇಳಿಕೆ


ವಿಜ್ಞಾನಿಗಳ ನಿರೀಕ್ಷೆ
ಇದರೊಂದಿಗೆ ಭೂಮಿಯ ಮೇಲಿನ ನೀರು ಸೌರವ್ಯೂಹದಲ್ಲಿ ಬೇರೆಡೆ ಇರುವ ಮತ್ತೊಂದು ಸೌಮ್ಯ ಐಸೊಟೋಪಿಕ್ ಮೂಲದಿಂದ ಬಂದಿರಬೇಕು ಎಂದು ಸಂಶೋಧಕರು ನಂಬಿದ್ದಾರೆ. ಹೊಸ ತನಿಖೆಯು ಭೂಮಿಯ ಮೇಲಿನ ನೀರಿನ ಆಗಮನದ ಸುತ್ತಲಿನ ಅನೇಕ ರಹಸ್ಯಗಳನ್ನು ಮತ್ತು ಮೇಲ್ಮೈಯನ್ನು ಸುತ್ತುವರೆದಿರುವ ದೊಡ್ಡ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಈಗ ವಿಜ್ಞಾನಿಗಳು ಸಹ ಈ ಅಧ್ಯಯನದ ಫಲಿತಾಂಶಗಳು, ಗಾಳಿ-ಮುಕ್ತ ಗ್ರಹಗಳಲ್ಲಿ (Air Free Planets) ನೀರನ್ನು ಹುಡುಕಲು ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಸಹಾಯಕವಾಗಲಿವೆ ಎಂದು ಭಾವಿಸುತ್ತಾರೆ.


ಇದನ್ನೂ ಓದಿ-Astronomical Journal Report: ಈ ಗ್ರಹದ ಸಂಪೂರ್ಣ ಒಂದು ವರ್ಷದ ಅವಧಿ ಭೂಮಿಯ 16ಗಂಟೆಗೆ ಸಮ, ವಿಜ್ಞಾನಿಗಳು ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.