Omicron Latest Update: ಕೊರೊನಾ ಸೋಂಕಿತ ರೋಗಿಗೆ Omicron ನಿಂದ ಎಷ್ಟು ಅಪಾಯ? ಇಲ್ಲಿದೆ ಉತ್ತರ

Corona Latest Updates - ಕರೋನವೈರಸ್ (Coronavirus) ಸೋಂಕಿಗೆ ಒಳಗಾದವರಿಗೆ ಓಮಿಕ್ರಾನ್ ರೂಪಾಂತರವು ಎಷ್ಟು ಅಪಾಯಕಾರಿಯಾಗಿದೆ? ತಜ್ಞರು ಈ ಬಗ್ಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.

Written by - Nitin Tabib | Last Updated : Dec 4, 2021, 08:29 PM IST
  • ಈ ಮೊದಲು ಕೊರೊನಾ ಸೋಂಕಿಗೆ ಒಳಗಾದ ಜನರು ಹೆಚ್ಚಿನ ಅಪಾಯದಲ್ಲಿರುತ್ತಾರೆ
  • ಕೋವಿಡ್ ಪ್ರೋಟೋಕಾಲ್ ಅನ್ನು ಬಿಡಬೇಡಿ.
  • ಆಫ್ರಿಕಾದಲ್ಲಿ 35 ಸಾವಿರ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ
Omicron Latest Update: ಕೊರೊನಾ ಸೋಂಕಿತ ರೋಗಿಗೆ Omicron ನಿಂದ ಎಷ್ಟು ಅಪಾಯ? ಇಲ್ಲಿದೆ ಉತ್ತರ title=
Corona Latest Updates (File Photo)

ಕೇಪ್ ಟೌನ್: ಒಮಿಕ್ರಾನ್ (Omicron) ರೂಪಾಂತರವು ಮತ್ತೆ ಕೊರೊನಾವೈರಸ್ (Covid-19) ಸೋಂಕಿಗೆ ಒಳಗಾದ ಜನರಿಗೆ ಅಪಾಯಕಾರಿಯಾಗಿದೆಯೇ? ಈ ಅಧ್ಯಯನದಲ್ಲಿ ತಜ್ಞರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. 

ಮೊದಲು ಕೊರೊನಾ  ಸೋಂಕಿಗೆ ಒಳಗಾದ ಜನರು ಹೆಚ್ಚಿನ ಅಪಾಯದಲ್ಲಿರುತ್ತಾರೆ
ಸಿಎನ್ಎನ್ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾದ ಸಂಶೋಧಕರು ಈ ಹಿಂದೆ ಕೊರೊನಾವೈರಸ್ (Corona)ಸೋಂಕಿಗೆ ಒಳಗಾದ ಜನರು ಓಮಿಕ್ರಾನ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. ತಮ್ಮ ಸಂಶೋಧನೆಯಲ್ಲಿ ಅವರು ಈ  ಬಗ್ಗೆ ಪುರಾವೆಗಳನ್ನು ಸಹ  ಕಂಡುಕೊಂಡಿದ್ದಾರೆ ಮತ್ತು ಓಮಿಕ್ರಾನ್ ಬೀಟಾ ಅಥವಾ ಡೆಲ್ಟಾ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಿದ್ದಾರೆ. 

ಕೋವಿಡ್ ಪ್ರೋಟೋಕಾಲ್ ಬಿಡಬೇಡಿ
ವರದಿಯ ಪ್ರಕಾರ, ಓಮಿಕ್ರಾನ್ (OMicron Updates) ಸೋಂಕಿನ ಬಗ್ಗೆ ಅಂತಿಮ ಅಧ್ಯಯನವನ್ನು ಇನ್ನೂ ಮಾಡಲಾಗಿಲ್ಲ. ಆದರೆ, ಈಗಾಗಲೇ ಕೊರೊನಾವೈರಸ್ ಸೋಂಕಿಗೆ ಒಳಗಾದ ಜನರ ಮೇಲೆ ಇದು ತನ್ನ ಕಂಟ್ರೋಲ್ ಅನ್ನು ತೆಗೆದುಕೊಳ್ಳಬಹುದು ಎಂದು ಪ್ರಾಥಮಿಕ ಫಲಿತಾಂಶಗಳು ತೋರಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಮೊದಲೇ ಸೋಂಕಿಗೆ ಒಳಗಾದ ಜನರು ಜಾಗರೂಕರಾಗಿರಬೇಕು ಮತ್ತು ಅವರು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಹಿಂಜರಿಯಬಾರದು.

ಇದನ್ನೂ ಓದಿ-Omicron Variant Updates:'Omicron ಕೊರೊನಾದ ಇತರ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಸಾಕ್ಷಾಧಾರ ಸಿಕ್ಕಿಲ್ಲ'

ಇತರ ರೂಪಾಂತರಗಳಿಗಿಂತ ಹೆಚ್ಚು ಅಪಾಯಕಾರಿ
WHO ಕರೋನಾದ ಓಮಿಕ್ರಾನ್ ರೂಪಾಂತರವನ್ನು 'ಚಿಂತಾಜನಕ ಶ್ರೇಣಿ' ಎಂದು ವಿವರಿಸಿದೆ. ಇದು ಇತರ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಲಸಿಕೆಯ ಡೋಸ್ ಕೂಡ ಅದರ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಅನೇಕ ತಜ್ಞರು ಇದನ್ನು ನಂಬುತ್ತಿಲ್ಲ. ಲಸಿಕೆ ಖಂಡಿತವಾಗಿಯೂ ಯಾವುದೇ ರೂಪಾಂತರಿಯಿಂದ ಸ್ವಲ್ಪ ರಕ್ಷಣೆ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ-Omicron Update: ಟೆನ್ಶನ್ ಬಿಟ್ಹಾಕಿ, Omicron ಮೇಲೆ ಪರಿಣಾಮಕಾರಿಯಾಗಿದೆ ನಮ್ಮ ಔಷಧಿ ಎಂದ ಕಂಪನಿ!

ಆಫ್ರಿಕಾದಲ್ಲಿ 35 ಸಾವಿರ ಒಮಿಕ್ರಾನ್ ಪ್ರಕರಣಗಳು
ಕಳೆದ ತಿಂಗಳು ಆಫ್ರಿಕಾದಲ್ಲಿ ಓಮಿಕ್ರಾನ್ ಅನ್ನು ಗುರುತಿಸಲಾಗಿದೆ. ಇದುವರೆಗೆ, ಓಮಿಕ್ರಾನ್ ರೂಪಾಂತರಗಳ 35 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಅಲ್ಲಿ ವರದಿಯಾಗಿವೆ. ಈ ಮುಂಚೆಯೇ ಕೊರೊನಾ ವೈರಸ್‌ ಸೋಂಕಿಗೆ ಒಳಗಾದ ಅನೇಕರು ಇವರಲ್ಲಿ ಶಾಮೀಲಾಗಿದ್ದಾರೆ. ಈ ರೂಪಾಂತರವು ಕಾಣಿಸಿಕೊಂಡಾಗಿನಿಂದ, ಪ್ರಪಂಚದ ಎಲ್ಲಾ ದೇಶಗಳು ಮತ್ತೊಮ್ಮೆ ನಿರ್ಬಂಧಗಳಿಗೆ ಮರಳುತ್ತಿವೆ ಮತ್ತು ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ನಿರ್ಬಂಧಿಸಲಾಗುತ್ತಿದೆ. 

ಇದನ್ನೂ ಓದಿ-Omicron variant: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳಿಂದ ಹೊಸ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News