ನವದೆಹಲಿ: ಪ್ರಸ್ತುತ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಜೀವನಾಡಿ. ಒಂದು ಕ್ಷಣ ಮೊಬೈಲ್ ಕೈಯಲ್ಲಿ ಇಲ್ಲದಿದ್ದರೆ ಏನನ್ನೋ ಕಳೆದುಕೊಂಡಂತೆ ಆಗುತ್ತದೆ. ಅಂತಹ ಫೋನ್ ಕಳೆದು ಹೋದರೆ.... ಅಬ್ಬಬ್ಬಾ! ಅದನ್ನು ನೆನೆಸಿಕೊಂಡರೂ ಕೂಡ ಒಂದು ರೀತಿಯ ವೇತನೆ ಆಗುತ್ತದೆ. ಆದರೆ, ಇನ್ನು ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ. 


COMMERCIAL BREAK
SCROLL TO CONTINUE READING

ಹೌದು, ಕಳೆದು ಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಲು  ಸಹಾಯಕವಾಗುವ ಉದ್ದೇಶದಿಂದ ಹಾಗೂ ಮೊಬೈಲ್ ಫೋನ್‌ಗಳ ದುರುಪಯೋಗವು ಗುರುತಿನ ಕಳ್ಳತನ, ನಕಲಿ ಕೆವೈಸಿ, ಬ್ಯಾಂಕಿಂಗ್ ವಂಚನೆಗಳಂತಹ ವಿವಿಧ ವಂಚನೆಗಳನ್ನು ತಪ್ಪಿಸಲು ಐಟಿ ಸಚಿವಾಲಯವು ಸಂಚಾರ ಸಥಿ ಪೋರ್ಟಲ್ (www sancharsathi.gov.in)  ಪೋರ್ಟಲ್ ಅನ್ನು ಸ್ಥಾಪಿಸಿದೆ ಎಂದು ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 


ಐಟಿ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಸಂಚಾರ ಸಥಿ ಪೋರ್ಟಲ್ (www sancharsathi.gov.in) ಪೋರ್ಟಲ್‌ನ ಸಹಾಯದಿಂದ, ಬಳಕೆದಾರರು ತಮ್ಮ ಸಿಮ್ ಕಾರ್ಡ್ ಸಂಖ್ಯೆಯನ್ನು ಪ್ರವೇಶಿಸಬಹುದು ಮತ್ತು ಮಾಲೀಕರ ಐಡಿ ಮೂಲಕ ಸಿಮ್ ಅನ್ನು ಬಳಸುವ ಯಾರನ್ನಾದರೂ ನಿರ್ಬಂಧಿಸಬಹುದು ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಈ ಖಾತೆಗಳನ್ನು ಡಿಲೀಟ್ ಮಾಡಲಿದೆ ಗೂಗಲ್ ! ನಿಮ್ಮ ಅಕೌಂಟ್ ಅದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ


ಸಂಚಾರ ಸಥಿ ಪೋರ್ಟಲ್ (www sancharsathi.gov.in) ಬಿಡುಗಡೆ ಮಾಡಿದ ಸಂದರ್ಭದಲ್ಲಿ  ಐಟಿ ಸಚಿವ ಅಶ್ವಿನಿ ವೈಷ್ಣವ್,  CEIR (ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್), ನಿಮ್ಮ ಮೊಬೈಲ್ ಸಂಪರ್ಕವನ್ನು ತಿಳಿಯಿರಿ ಮತ್ತು ASTR (ಟೆಲಿಕಾಂ ಸಿಮ್ ಚಂದಾದಾರರ ಪರಿಶೀಲನೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಮುಖದ ಗುರುತಿಸುವಿಕೆ ಚಾಲಿತ ಪರಿಹಾರ) ವನ್ನು ಸಹ ಪರಿಚಯಿಸಿದರು. 


ಇದನ್ನೂ ಓದಿ- ಎಲೆಕ್ಟ್ರಿಕ್ ಮೀಟರ್‌ನೊಂದಿಗೆ ಈ ಸಾಧನ ಅಳವಡಿಸಿದರೆ ಎಸಿ-ಕೂಲರ್ ಬಳಸಿದರೂ ಕಡಿಮೆ ಬರುತ್ತೆ ವಿದ್ಯುತ್ ಬಿಲ್!


CEIR ಕದ್ದ/ಕಳೆದುಹೋದ ಮೊಬೈಲ್‌ಗಳನ್ನು ನಿರ್ಬಂಧಿಸಲು ಉದ್ದೇಶಿಸಲಾಗಿದೆ. ಆದರೆ ನಿಮ್ಮ ಮೊಬೈಲ್ ಸಂಪರ್ಕವನ್ನು ತಿಳಿದುಕೊಳ್ಳುವುದು ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳನ್ನು ತಿಳಿದುಕೊಳ್ಳಲು 
ಮತ್ತು ಮೋಸದ ಗ್ರಾಹಕರನ್ನು ಗುರುತಿಸಲು  ASTR ಸಹಾಯ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.