ITR 2 ಆಫ್‌ಲೈನ್ ಫಾರ್ಮ್ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ

ನಿಮ್ಮ ಐಟಿಆರ್ ಅನ್ನು ಸಲ್ಲಿಸುವ ಮೊದಲು ನೀವು ಸರಿಯಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. 

Written by - Ranjitha R K | Last Updated : May 16, 2023, 03:02 PM IST
  • ನಾನು ತಪ್ಪಾದ ITR ಫಾರ್ಮ್ ಅನ್ನು ಬಳಸಿದರೆ ಏನಾಗುತ್ತದೆ?
  • ಆದಾಯ ತೆರಿಗೆ ಇಲಾಖೆ ನಿಮಗೆ ತೆರಿಗೆ ನೋಟಿಸ್ ನೀಡುತ್ತದೆ.
  • ತೆರಿಗೆ ಇಲಾಖೆಯ ಸೂಕ್ತ ತೆರಿಗೆ ರಿಟರ್ನ್ ಫಾರ್ಮ್ ಅನ್ನೇ ಬಳಸಬೇಕು
ITR 2 ಆಫ್‌ಲೈನ್ ಫಾರ್ಮ್ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ title=

ಬೆಂಗಳೂರು :   2022-23  ನೇ ಸಾಲಿನ  ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ITR-2 ಆಫ್‌ಲೈನ್ ಫಾರ್ಮ್ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ತಿಂಗಳು, CBDT ITR-1 ಮತ್ತು ITR-4 ನ ಆಫ್‌ಲೈನ್ ಫಾರ್ಮ್‌ಗಳನ್ನು ನೋಟಿಫೈ ಮಾಡಿದೆ.  ತೆರಿಗೆ ಇಲಾಖೆಯು ಆನ್‌ಲೈನ್ ITR ಫಾರ್ಮ್‌ಗಳನ್ನು ಇನ್ನೂ ಎನೇಬಲ್ ಮಾಡಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಇದೀಗ ITR 1, ITR 2 ಮತ್ತು ಐಟಿಆರ್-4 ಫಾರ್ಮ್‌ಗಳಿಗೆ ಎಕ್ಸೆಲ್ ಅಪ್ಲಿಕೇಶನ್ ಅನ್ನು ಮಾತ್ರ ಬಿಡುಗಡೆ ಮಾಡಿದೆ. 

ಒಬ್ಬ ವ್ಯಕ್ತಿಯು ಈಗಿನಿಂದಲೇ ತಮ್ಮ ITR ಅನ್ನು ಸಲ್ಲಿಸಲು ಬಯಸುವುದಾದರೆ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ನಿಂದ  ಟೂಲ್ಸ್ ಅನ್ನು ಡೌನ್‌ಲೋಡ್ ಮಾಡಬೇಕು. ಒಮ್ಮೆ ಯುಟಿಲಿಟಿ ಫಾರ್ಮ್ ಅನ್ನು ಆದಾಯ ಮತ್ತು ಕಡಿತಗಳಿಗೆ ಸಂಬಂಧಿಸಿದ ಮಾಹಿತಿಯೊಂದಿಗೆ ಭರ್ತಿ ಮಾಡಿದ ನಂತರ, ಅದನ್ನು ಆದಾಯ ತೆರಿಗೆ ಇ-ಫೈಲಿಂಗ್ ಪ್ಲಾಟ್‌ಫಾರ್ಮ್‌ಗೆ ಅಪ್‌ಲೋಡ್ ಮಾಡಬೇಕು. ಆದಾಯ ತೆರಿಗೆ ರಿಟರ್ನ್ ಫಾರ್ಮ್ ನಲ್ಲಿ ಈ ವರ್ಷ ಗಮನಾರ್ಹವಾದ ಬದಲಾವಣೆಯನ್ನು ಮಾಡಲಾಗಿಲ್ಲ. ವರ್ಚುವಲ್ ಕರೆನ್ಸಿ ಮತ್ತು ಡಿಜಿಟಲ್ ಅಸೆಟ್ ಗೆ ಸಂಬಂಧಿಸಿದಂತೆ ಒಂದೇ ಒಂದು ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ : ಎಲೆಕ್ಟ್ರಿಕ್ ಮೀಟರ್‌ನೊಂದಿಗೆ ಈ ಸಾಧನ ಅಳವಡಿಸಿದರೆ ಎಸಿ-ಕೂಲರ್ ಬಳಸಿದರೂ ಕಡಿಮೆ ಬರುತ್ತೆ ವಿದ್ಯುತ್ ಬಿಲ್!

ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ITR ಫಾರ್ಮ್ ಅನ್ನು ಸಲ್ಲಿಸುವಾಗ  ಫಾರ್ಮ್ ಅನ್ನು ವೆರಿಫೈ ಮಾಡಿರಬೇಕು ಎನ್ನುವುದು ನೆನಪಿನಲ್ಲಿರಬೇಕು. ಇಲ್ಲವಾದಲ್ಲಿ ತೆರಿಗೆ ಇಲಾಖೆಯು ಈ ಫಾರ್ಮ್ ಅನ್ನು ಮುಂದಕ್ಕೆ ಕೊಂಡೊಯ್ಯುವುದಿಲ್ಲ. 

ಯಾರು ITR 2 ಅನ್ನು ಸಲ್ಲಿಸಬೇಕು ? : 
1. ಯಾವುದೇ ವ್ಯಾಪಾರ ಅಥವಾ ವೃತ್ತಿಯಿಂದ ಲಾಭ ಹೊಂದಿರದ ವ್ಯಕ್ತಿ ಹಿಂದೂ ಅವಿಭಜಿತ ಕುಟುಂಬ. 
2. ಕೆಳಗೆ  ನಮೂದಿಸಿದ ಯಾವುದೇ ಮಾನದಂಡಗಳನ್ನು ಪೂರೈಸಿರುವ ವೈಯಕ್ತಿಕ ತೆರಿಗೆದಾರರು  ಇದನ್ನೂ ಬಳಸಬಹುದು. ಆ ಮಾನದಂಡ ಗಳೆಂದರೆ 
ಎ) ನೀವು ಭಾರತದ ನಿವಾಸಿಯಾಗಿದ್ದರೆ 
ಬಿ) ಹಿಂದೂ ಅವಿಭಜಿತ ಕುಟುಂಬ (HUF)
ಸಿ) ಕಂಪನಿಯ ನಿರ್ದೇಶಕರಾಗಿದ್ದರೆ 
ಡಿ) ಪಟ್ಟಿಮಾಡದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ 
ಇ) ವೇತನ, ಒಂದಕ್ಕಿಂತ ಹೆಚ್ಚು ಮನೆ ಆಸ್ತಿ, ಬಂಡವಾಳ ಲಾಭಗಳು, ಬಡ್ಡಿ ಆದಾಯ, ಹೀಗೆ ಯಾವುದಾದರೂ ರೀತಿಯಲ್ಲಿ ಆದಾಯ ಹೊಂದಿದ್ದರೆ 
f) ವಿದೇಶಿ ಕಂಪನಿಗಳ ಷೇರುಗಳಿಂದ ಲಾಭ ಪಡೆಯುತ್ತಿದ್ದರೆ ಅಂದರೆ ಭಾರತದ ಹೊರಗಿನ ಆಸ್ತಿಗಳಿಂದ ಆದಾಯವನ್ನು ಹೊಂದಿದ್ದರೆ .
g)ಭಾರತದ ಹೊರಗೆ ಆಸ್ತಿಗಳನ್ನು ಹೊಂದಿದ್ದರೆ 
h)ಕುದುರೆ ರೇಸ್, ಲಾಟರಿ ಮತ್ತು ಜೂಜು ಇಂಥಹ ವಿಧಾನಗಳಿಂದ ಆದಾಯ ಹೊಂದಿದ್ದರೆ
j) FY 2021-22 ಸಮಯದಲ್ಲಿ ಮಾಡಿದ ಕೆಲವು ನಗದು ಪಾವತಿಗಳಿಗೆ TDSಅನ್ವಯಿಸಿದ್ದರೆ
k) ಉದ್ಯೋಗಿ ಸ್ಟಾಕ್ ಆಯ್ಕೆ ಯೋಜನೆಗಳಲ್ಲಿ ಆದಾಯ ತೆರಿಗೆಯನ್ನು ಮುಂದೂಡಿದ್ದರೆ
l) ಕೃಷಿ ಆದಾಯ 5,000 ರೂ.ಗಿಂತ ಹೆಚ್ಚಿದ್ದರೆ
m) ಡಬಲ್ ಟ್ಯಾಕ್ಸೇಶನ್ ತಪ್ಪಿಸುವ ಒಪ್ಪಂದದ ಅಡಿಯಲ್ಲಿ ನೀವು ಯಾವುದೇ ಒಪ್ಪಂದದ ಪರಿಹಾರವನ್ನು ಕ್ಲೈಮ್ ಮಾಡುತ್ತಿದ್ದರೆ.

ಇದನ್ನೂ ಓದಿ : Rummy: 'ರಮ್ಮಿ ಆಡುವುದು ಜೂಜಾಟವಲ್ಲ': ಕರ್ನಾಟಕ ಹೈಕೋರ್ಟ್

ತಪ್ಪಾದ ITR ಫಾರ್ಮ್ ಅನ್ನು ಬಳಸಿದರೆ ಏನಾಗುತ್ತದೆ?
ನಿಮ್ಮ ITR ಅನ್ನು ಸಲ್ಲಿಸುವ ಮೊದಲು ನೀವು ಸರಿಯಾದ ITR ಫಾರ್ಮ್ ಅನ್ನೇ ಆರಿಸಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಐಟಿಆರ್ ಅನ್ನು ತಪ್ಪಾದ ತೆರಿಗೆ ರಿಟರ್ನ್ ಫಾರ್ಮ್‌ನಲ್ಲಿ ಸಲ್ಲಿಸಿದರೆ ಆದಾಯ ತೆರಿಗೆ ಇಲಾಖೆ ನಿಮಗೆ ತೆರಿಗೆ ನೋಟಿಸ್ ನೀಡುತ್ತದೆ. ತೆರಿಗೆ ಇಲಾಖೆಯಿಂದ ಸೂಕ್ತವಾದ ತೆರಿಗೆ ರಿಟರ್ನ್ ಫಾರ್ಮ್ ಅನ್ನು ಬಳಸಿಕೊಂಡು ITR ಅನ್ನು ಸಲ್ಲಿಸಬೇಕಾಗುತ್ತದೆ.

ITR ಸಲ್ಲಿಸುವಾಗ ತಪ್ಪಾಗಿದೆಯೇ ಎಂದು ತಿಳಿಯುವುದು ಹೇಗೆ? :
ಆದಾಯ ತೆರಿಗೆ ವೆಬ್‌ಸೈಟ್ ಪ್ರಕಾರ, “ಆನ್‌ಲೈನ್ ಫಾರ್ಮ್‌ಗಳಿಗೆ ಅನ್ವಯವಾಗುವ ಎಲ್ಲಾ ಮೌಲ್ಯೀಕರಣ ನಿಯಮಗಳು ಫಾರ್ಮ್ ಅನ್ನು  ಪೋರ್ಟಲ್‌ನಲ್ಲಿ ಸಲ್ಲಿಸುವಾಗ ಅಥವಾ ಆಫ್‌ಲೈನ್  ನೇರವಾಗಿ ಸಲ್ಲಿಸಿದರೂ ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ತಪ್ಪುಗಳಾಗಿದ್ದರೆ ಸಿಸ್ಟಮ್ ಎರರ್ ಮೆಸೇಜ್ ನೀಡುತ್ತದೆ.   ಎಲ್ಲಿ ಎರರ್ ಇದೆ ಎನ್ನುವುದನ್ನು ಫಾರ್ಮ್‌ನಲ್ಲಿ ಹೈಲೈಟ್ ಮಾಡಲಾಗುತ್ತದೆ. ನಿಮ್ಮ JSON ಫೈಲ್ ಅನ್ನು ಎಕ್ಸ್ಪೋರ್ಟ್ ಅಥವಾ ಅಪ್‌ಲೋಡ್ ಮಾಡಿದರೆ, ಡೌನ್‌ಲೋಡ್ ಮಾಡು ವಾಗ ಎರರ್ ಇರುವ ಫೈಲ್ ಜನರೇಟ್ ಆಗುತ್ತದೆ. 

ಇದನ್ನೂ ಓದಿ : Oppo F23 5G: ಐದೇ ನಿಮಿಷದಲ್ಲಿ ಚಾರ್ಜ್ ಆಗುವ ಈ ಫೋನ್ ಅನ್ನು ನಾಲ್ಕು ಸಾವಿರ ರೂಪಾಯಿಗೆ ಖರೀದಿಸಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News