ಆರು - ಏಳು ಸೀಟರ್ ಅಲ್ಲ, ಇದು 9-Seater SUV!ಇದರ ಬೆಲೆ ಕೂಡಾ ಅಗ್ಗ
Mahindra Bolero Neo Plus Launch Soon:ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಮಾರುಕಟ್ಟೆ ಕದ ತಟ್ಟಲು ಸಿದ್ಧವಾಗಿದೆ. ಆದರೆ ಈ ಕಾರು ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.
Mahindra Bolero Neo Plus Launch Soon : ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಟೆಸ್ಟಿಂಗ್ ಹಂತವು ಪೂರ್ಣಗೊಂಡಿದೆ. ಇದೀಗ ಈ ಕಾರು ಮಾರುಕಟ್ಟೆ ಕದ ತಟ್ಟಲು ಸಿದ್ಧವಾಗಿದೆ. ಆದರೆ ಈ ಕಾರು ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಕಾರು ತಯಾರಕರು ಇನ್ನೂ ಘೋಷಿಸಿಲ್ಲ. ಆದರೆ SUV ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬೆಲೆ ಸುಮಾರು 10 ಲಕ್ಷ ರೂ.ಗಳಿಂದ ಆರಂಭವಾಗಬಹುದು. ಹೊಸ ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಅನ್ನು 7 ರೂಪಾಂತರಗಳಲ್ಲಿ ಬಿಡುಗಡೆ ಮಾಡಬಹುದು. ಆಂಬ್ಯುಲೆನ್ಸ್ ಮಾದರಿಯನ್ನು ಕೂಡಾ ಇದು ಒಳಗೊಂಡಿರುತ್ತದೆ.
ಇದರಲ್ಲಿ, ಖರೀದಿದಾರರು 7-ಆಸನಗಳು ಮತ್ತು 9-ಆಸನಗಳ ಆಯ್ಕೆಯನ್ನು ಹೊಂದಿರುತ್ತಾರೆ. ಬೊಲೆರೊ ನಿಯೊಗೆ ಹೋಲಿಸಿದರೆ, ನಿಯೋ ಪ್ಲಸ್ ಉದ್ದ ಹೆಚ್ಚಿದೆ. ಇದು 4,400 ಎಂಎಂ ಉದ್ದವಿರಬಹುದು. SUV ಯ ಒಟ್ಟಾರೆ ಅಗಲ ಮತ್ತು ಎತ್ತರವು ಕ್ರಮವಾಗಿ 1,795 mm ಮತ್ತು 1,812 mm ಆಗಿರಬಹುದು.
ಇದನ್ನೂ ಓದಿ : ಈ Electric SUVನಲ್ಲಿ ಎಕ್ಸಲೇಟರ್ ಇಲ್ಲ ! ಹಾಗಿದ್ದರೆ ಸ್ಪೀಡ್ ಕಂಟ್ರೋಲ್ ಹೇಗೆ? ಮಾರುಕಟ್ಟೆಯಲ್ಲಿ ಹೊಸ ಸಂಚಲನ
ಹೊಸ ಮಹೀಂದ್ರ ಬೊಲೆರೊ ನಿಯೋ ಪ್ಲಸ್‌ನಲ್ಲಿ 2.2ಲೀ ಡೀಸೆಲ್ ಎಂಜಿನ್ ಅನ್ನು ನೀಡಬಹುದಾಗಿದೆ. ಇದು ಸ್ಕಾರ್ಪಿಯೊ-ಎನ್‌ಗೆ ಶಕ್ತಿ ನೀಡುವ ಎಂಜಿನ್ ಆಗಿರುತ್ತದೆ. ಆದರೆ ಮರು-ಟ್ಯೂನ್ ಮಾಡಲಾಗುವುದು, ಇದು ಸುಮಾರು 120bhp ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಬರುವ ಸಾಧ್ಯತೆ ಇದೆ.
ಮಹೀಂದ್ರಾ ಬೊಲೆರೊ ನಿಯೋ ಪ್ಲಸ್‌ನಲ್ಲಿರುವ ಹೆಚ್ಚಿನ ವೈಶಿಷ್ಟ್ಯಗಳು ಬೊಲೆರೊ ನಿಯೋದಲ್ಲಿ ಇರುವಂತೆಯೇ ಇರಲಿದೆ. ಇದು 2-ಡಿಐಎನ್ ಆಡಿಯೊ ಸಿಸ್ಟಮ್, ಬ್ಲೂಟೂತ್ ಕನೆಕ್ಟ್, ವಾಯ್ಸ್ ಮೆಸೇಜ್ ಸಿಸ್ಟಮ್, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹೈಟ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್, ವಿದ್ಯುತ್ ಚಾಲಿತ ORVMಗಳು, ಚಾಲಕ ಮತ್ತು ಸಹ-ಚಾಲಕರಿಗೆ ಆರ್ಮ್‌ರೆಸ್ಟ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒಳಗೊಂಡಿದೆ.
ಇದನ್ನೂ ಓದಿ : ಮೊಬೈಲ್’ನಲ್ಲಿ ಅನಗತ್ಯ ಸ್ಟೋರೇಜ್ ತುಂಬಿದೆಯೇ? ಕ್ಷಣದಲ್ಲೇ ಸಿಂಪಲ್ ಪರಿಹಾರ ನೀಡಲಿದೆ ಈ ‘ಸ್ಮಾರ್ಟ್ ಲಾಕ್’
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.