ನವದೆಹಲಿ:  Whatsapp Malware 2021 - ಖತರ್ನಾಕ್ WhatsApp ಸಂದೇಶವೊಂದು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವೈರಸ್ ವೊಂದನ್ನು ಸ್ಥಾಪಿಸುವ ಸಾಧ್ಯತೆ ಇದೆ. ಈ ವೈರಸ್ ಎಷ್ಟೊಂದು ಖತರ್ನಾಕ್ ಆಗಿದೆ ಎಂದರೆ, ನಿಮ್ಮ ಫೋನ್ ಗೆ ಈ ಸಂದೇಶ ಕಳುಹಿಸುವವರ ಫೋನ್ ನಲ್ಲಿಯೂ ಕೂಡ ಇದು ಸ್ಥಾಪಿಸಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಈ ಮಾಲ್ವೇಯರ್ ನಿಮ್ಮ ಫೋನ್ ನಲ್ಲಿ ಸ್ಥಾಪಿತಗೊಂಡರೆ, ನಿಮಗೆ ವಾಟ್ಸ್ ಆಪ್ ಸಂದೇಶ ಕಳುಹಿಸುವವರ ಫೋನ್ ಗೂ ಕೂಡ ಇದು ಸ್ವಯಂಚಾಲಿತವಾಗಿ ವರ್ಗಾವಣೆಗೊಳ್ಳುತ್ತದೆ. ಖ್ಯಾತ ಸಿಕ್ಯೋರಿಟಿ ರಿಸರ್ಚ್ ಸಂಸ್ಥೆ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಈ ವೈರಸ್ ಅನ್ನು ಬಹಿರಂಗಪಡಿಸಿದೆ.


COMMERCIAL BREAK
SCROLL TO CONTINUE READING

ಟೆಕ್ ಸಿಕ್ಯೂರಿಟಿ ಸಂಸ್ಥೆಯಾಗಿರುವ ESET ಸಂಶೋಧಕLukas Stefanko ಈ ಕುರಿತು ತನ್ನ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದು, 'ಈ ಮಾಲ್ವೇಯರ್ (Malware) ನಿಮ್ಮ ವಾಟ್ಸ್ ಆಪ್ ಮೂಲಕ ಹರಡುತ್ತದೆ. ವಾಟ್ಸ್ ಆಪ್ ಮೇಲೆ ಬರುವ ನೋಟಿಫಿಕೇಶನ್ ಗೆ ಸ್ವಯಂಚಾಲಿತವಾಗಿ ರಿಪ್ಲೈ ಹೋಗುತ್ತದೆ. ವಾಟ್ಸ್ ಆಪ್ ಮೇಲೆ ಬರುವ ಸಂದೇಶಗಳಿಗೆ ಹಾಳಾದ Huawei Mobile ಆಪ್ ನ ಲಿಂಕ್ ಕಳುಹಿಸಲಾಗುತ್ತದೆ. ಪ್ರತಿ ಗಂಟೆಗೆ ಒಂದು ಕಾಂಟ್ಯಾಕ್ಟ್  ಮಾದರಿಯಲ್ಲಿ ಈ ಲಿಂಕ್ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ. ಇದೊಂದು ಆಡ್ ವೆಯರ್ ಅಥವಾ ಸಬ್ಸ್ಕ್ರಿಪ್ಶನ್ ಸ್ಕ್ಯಾಮ್ ಆಗಿರುವ ಸಾಧ್ಯತೆ ಇದೆ' ಎಂದು ಅವರು ಹೇಳಿದ್ದಾರೆ.


ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ?
ವರದಿಗಳ ಪ್ರಕಾರ ಈ ಮಾಲ್ವೆಯರ್ ಒಂದು ಪ್ರಕಾರದ 'ಅಂಡ್ರಾಯಿಡ್' ವರ್ಮ್ (Android Worm) ಆಗಿದೆ. ಇದು ನಿಮ್ಮ ಫೋನ್ ಗಳಲ್ಲಿ ಆಡ್ ವೆಯರ್ ಅಪ್ಲೋಡ್ ಮಾಡುತ್ತದೆ ಹಾಗೂ ವಾಟ್ಸ್ ಆಪ್ ಮೇಲೆ ಸ್ವಯಂಚಾಲಿತ ಸಂದೇಶಗಳ ಮೂಲಕ ಹರಡುತ್ತದೆ. ಅಂದರೆ, ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಗೆ ಈ ಮಾಲ್ವೇಯರ್ ಬಂದಿದೆ ಎಂದಾದರೆ ಮತ್ತು ನೀವು ಅದನ್ನು ಕ್ಲಿಕ್ಕಿಸಿದ್ದೀರಿ ಎಂದಾದಲ್ಲಿ, ಮೊದಲು ಇದು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಆಗುತ್ತದೆ. ಬಳಿಕ ನಿಮ್ಮ ವಾಟ್ಸ್ ಆಪ್ ಗೆ ಸಂದೇಶ ಕಳುಹಿಸುವ ಎಲ್ಲರ ಮೊಬೈಲ್ ಗೂ ಕೂಡ ಇದು ಸ್ವಯಂಚಾಲಿತ ರಿಪ್ಲೈ ಸಂದೇಶದ ರೂಪದಲ್ಲಿ  ಹೋಗಿ ಸ್ಥಾಪನೆಗೊಂಡು ಹರಡುತ್ತದೆ. 


ಇದನ್ನು ಓದಿ-WhatsApp ಚ್ಯಾಟ್ ಹಿಸ್ಟರಿಯನ್ನು Telegramಗೆ ವರ್ಗಾಯಿಸುವುದು ಬಲು ಸುಲಭ , ಇಲ್ಲಿದೆ ಮಾಹಿತಿ


ಈ ಸಂದೇಶವನ್ನು ಜನ ಯಾಕೆ ಕ್ಲಿಕ್ಕಿಸುವ ಸಾಧ್ಯತೆ ಇದೆ
ಜನರ ವಾಟ್ಸ್ ಆಪ್ (WhatsApp) ಖಾತೆಗೆ ಹೋಗುವ ಲಿಂಕ್ ಗೆ  Huawei App ಹೆಸರನ್ನಿಡಲಾಗಿದೆ. ಅಷ್ಟೇ ಅಲ್ಲ ಈ ಆಪ್ ಡೌನ್ಲೋಡ್ ಆದ ಬಳಿಕ ಬಳಕೆದಾರರಿಗೆ ಮೊಬೈಲ್ ಫೋನ್ ಗೆದ್ದಿರುವ ಆಮೀಷ ಕೂಡ ನೀಡಲಾಗುತ್ತದೆ. ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ಕಿಸಿದಾಗ, ಇದು ನಿಮ್ಮನ್ನು ನಕಲಿ ಗೂಗಲ್ ಪ್ಲೇ ಸ್ಟೋರ್ (Google Play Store) ಪುಟಕ್ಕೆ ಕರೆದೊಯ್ಯುತ್ತದೆ. ಒಂದು ವೇಳೆ ಬಳಕೆದಾರರು ಇನ್ಸ್ಟಾಲ್ ಮೇಲೆ ಕ್ಲಿಕ್ಕಿಸಿದಾಗ ಈ ಮಾಲ್ವೇಯರ್ ನಿಮ್ಮ ಫೋನ್ ನಾಲ್ಲಿ ಸ್ಥಾಪಿತಗೊಳ್ಳುತ್ತದೆ.


ಇದನ್ನು ಓದಿ-ಏನಿದು Signal? ಜನರೇಕೆ WhatsApp ತೊರೆಯುತ್ತಿದ್ದಾರೆ ?


ಹ್ಯಾಕರ್ಸ್ ಗಳಿಗೇನು ಲಾಭ?
ಇದೊಂದು ಫೇಕ್ ಹುವೈ ಆಪ್ ಆಗಿದೆ. ತನ್ಮೂಲಕ ಹ್ಯಾಕರ್ಸ್ ಗಳು ನಿಮ್ಮ ಡಿವೈಸ್ ಮೇಲೆ ನಕಲಿ ಜಾಹೀರಾತುಗಳನ್ನೂ ಬಿತ್ತರಿಸುತ್ತಾರೆ ಹಾಗೂ ಇದರಿಂದ ಹಣಗಳಿಸುತ್ತಾರೆ (Hacking). ಸಾಮಾನ್ಯ ಬಳಕೆದಾರರಿಗೆ ತಮಗೆ ಈ ಜಾಹೀರಾತುಗಳನ್ನು ಏಕೆ ತೋರಿಸಲಾಗುತ್ತಿದೆ ಎಂಬುದು ತಿಳಿಯುವದೇ ಇಲ್ಲ.


ಇದನ್ನು ಓದಿ-WhatsApp Feature: ವಾಟ್ಸ್ ಆಪ್ ನಲ್ಲಿ ಫಿಂಗರ್ ಪ್ರಿಂಟ್ ಲಾಕ್ ಅಳವಡಿಸುವುದು ಹೇಗೆ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.