WhatsApp ಚ್ಯಾಟ್ ಹಿಸ್ಟರಿಯನ್ನು Telegramಗೆ ವರ್ಗಾಯಿಸುವುದು ಬಲು ಸುಲಭ , ಇಲ್ಲಿದೆ ಮಾಹಿತಿ

ಟೆಲಿಗ್ರಾಂ (Telegram) ಇದೀಗ ಹೊಸ ಫೀಚರ್ಸ್ ಅನ್ನು ಆರಂಭಿಸಿದೆ. ಈ ಫೀಚರ್ಸ್ನ ಸಹಾಯದಿಂದ ಎಲ್ಲಾ ಚಾಟ್ ಹಿಸ್ಟರಿಯನ್ನು  ಸುಲಭವಾಗಿ ಟೆಲಿಗ್ರಾಂಗೆ ವರ್ಗಾಯಿಸಿಕೊಳ್ಳಬಹುದು. 

Written by - Ranjitha R K | Last Updated : Jan 29, 2021, 06:27 PM IST
  • ಟೆಲಿಗ್ರಾಂನತ್ತ ಮುಖ ಮಾಡಿದ ವ್ಯಾಟ್ಸ್ ಆಪ್ ಬಳಕೆದಾರರು
  • ಜನವರಿ ಒಂದು ತಿಂಗಳಲ್ಲೇ 100 ಮಿಲಿಯನ್ ಬಳಕೆದಾರರಿಂದ ಟೆಲಿಗ್ರಾಂ ಡೌನ್ ಲೋಡ್
  • ಚ್ಯಾಟ್ ಹಿಸ್ಟರಿ ಟೆಲಿಗ್ರಾಂಗೆ ವರ್ಗಾಯಿಸುವುದು ಬಲು ಸುಲಭ
WhatsApp ಚ್ಯಾಟ್ ಹಿಸ್ಟರಿಯನ್ನು Telegramಗೆ ವರ್ಗಾಯಿಸುವುದು ಬಲು ಸುಲಭ , ಇಲ್ಲಿದೆ ಮಾಹಿತಿ  title=
ಚ್ಯಾಟ್ ಹಿಸ್ಟರಿ ಟೆಲಿಗ್ರಾಂಗೆ ವರ್ಗಾಯಿಸುವುದು ಬಲು ಸುಲಭ (file photo)

ನವದೆಹಲಿ : WhatsApp ತನ್ನ ಹೊಸ ಪ್ರೈವೆಸಿ ಪಾಲಿಸಿಯನ್ನು (Privacy Policy) ಪರಿಚಯಿಸಿದಾಗಿನಿಂದ ಬಳಕೆದಾರರು ಹೊಸ ಮೆಸೆಜಿಂಗ್ ಆಪ್ ನತ್ತ ಮುಖ ಮಾಡಿದ್ದಾರೆ. ಈ ಮಧ್ಯೆ ಟೆಲಿಗ್ರಾಂ (Telegram) ಇದೀಗ ಹೊಸ ಫೀಚರ್ಸ್ ಅನ್ನು ಆರಂಭಿಸಿದೆ. ಈ ಫೀಚರ್ಸ್ನ ಸಹಾಯದಿಂದ ಎಲ್ಲಾ ಚಾಟ್ ಹಿಸ್ಟರಿಯನ್ನು (Chat History) ಸುಲಭವಾಗಿ ಟೆಲಿಗ್ರಾಂಗೆ ವರ್ಗಾಯಿಸಿಕೊಳ್ಳಬಹುದು. 

WhatsAppನ ಹೊಸ ನೀತಿಯಿಂದಾಗಿ ಜನ ಬೇಸತ್ತಿದ್ದು, ಅದರ ಲಾಭ ಟೆಲಿಗ್ರಾಂಗೆ ಆಗಿದೆ ಎಂದು ಇತ್ತೀಚೆಗೆ ಕಂಪನಿ ತನ್ನ ಬ್ಲಾಗ್ ನಲ್ಲಿ ಹೇಳಿತ್ತು. ಜನವರಿ ಒಂದು ತಿಂಗಳಲ್ಲೇ ಸುಮಾರು 100 ಮಿಲಿಯನ್ ಬಳಕೆದಾರರು ಟೆಲಿಗ್ರಾಂ (Telegram) ಅನ್ನು ಡೌನ್ ಲೋಡ್ ಮಾಡಿಕೊಂಡಿರುವುದಾಗಿ ಕಂಪನಿ ಹೇಳಿತ್ತು. ಅಲ್ಲದೆ ಬಳಕೆದಾರರು ಬೇರೆ ಆಪ್ ನ ಚಾಟ್ ಹಿಸ್ಟರಿ, ವಿಡಿಯೋ, ಡಾಕ್ಯುಮೆಂಟ್ ಗಳನ್ನು ಟೆಲಿಗ್ರಾಂಗೆ ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು ಎಂದೂ ಹೇಳಿದೆ. 

ಇದನ್ನೂ ಓದಿ : ಶೀಘ್ರವೇ ಬರಲಿದೆ 1TB Internal Storage Smartphone, ವೈಶಿಷ್ಟ್ಯಗಳು ಇಲ್ಲಿವೆ

 ಮೆಸೇಜ್ ಟ್ರಾನ್ಸ್ ಫರ್ ಮಾಡುವುದು ಹೇಗೆ?:
-ಆಂಡ್ರಾಯ್ಡ್ ಫೋನ್ ಬಳಕೆದಾರರು ಮೊದಲು WhatsAppಗೆ ಹೋಗಿ
-ಅಲ್ಲಿ ಯಾವ ಚಾಟ್ ಹಿಸ್ಟರಿ ಅಥವಾ ಗ್ರೂಪನ್ನು ಟ್ರಾನ್ಸ್ ಫರ್ (Transfer) ಮಾಡಲು ಬಯಸುತ್ತೀರಿ ಅದರ ಮೇಲೆ ಟ್ಯಾಪ್ ಮಾಡಿ
- ಚ್ಯಾಟ್ ಸಿಲೆಕ್ಟ್ ಆಗುತ್ತಿದ್ದಂತೆ More ಅನ್ನುವ ಆಯ್ಕೆ ಬರುತ್ತದೆ.
- ಇಲ್ಲಿ Export Chat ಅನ್ನು ಆಯ್ಕೆ ಮಾಡಿಕೊಳ್ಳಿ. 
- ಈಗ ನಿಮಗೆ ಕಾಣುವ ಆಯ್ಕೆಯಲ್ಲಿ Telegram ಅನ್ನು ಆರಿಸಿ ಶೇರ್ ಬಟನ್ ಒತ್ತಿ

 ಇನ್ನು ನೀವು iPhone ಬಳಸುತ್ತಿದ್ದರೂ ಸಹಾ  ಚ್ಯಾಟ್ ಹಿಸ್ಟರಿ ವರ್ಗಾಯಿಸಬಹುದು. ಚ್ಯಾಟನ್ನು ಎಡಬದಿಗೆ ಸ್ವೈಪ್ ಮಾಡಿ ಮತ್ತು Export ಮೇಲೆ ಟ್ಯಾಪ್ ಮಾಡಿದರೆ ಚ್ಯಾಟ್ ಟ್ರಾನ್ಸ್ ಫರ್ ಆಗುತ್ತದೆ.

ಇದನ್ನೂ ಓದಿ : Good News..! ಮಾರುಕಟ್ಟೆಗೆ ಬರಲಿದೆ ಅಗ್ಗದ iPhone, ಬೆಲೆ ಎಷ್ಟಿರಲಿದೆ ಗೊತ್ತಾ?

ಜನವರಿ 5ರಿಂದ WhatsApp ತನ್ನ ಎಲ್ಲಾ ಬಳಕೆದಾರರಿಗೆ ಪ್ರೈವೆಸಿ ಪಾಲಿಸಿ ಕಳುಹಿಸಲು ಶುರು ಮಾಡಿತ್ತು. ಇದರಲ್ಲಿ ಡೇಟಾವನ್ನು(data)  ಫೇಸ್ ಬುಕ್ ಜೊತೆ ಹಂಚಿಕೊಳ್ಳುವುದಾಗಿ ಹೇಳಿತ್ತು. ಇದಾದ ನಂತರ ಬಳಕೆದಾರರು ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ ಮೆಸೇಜ್ (message) ಮಾಡಲು ಮತ್ತು ಚ್ಯಾಟ್ ಮಾಡಲು Signal ಮತ್ತು Telegramನತ್ತ ಮುಖ ಮಾಡಿದ್ದರು. ಇದಾದ ನಂತರ WhatsApp ತನ್ನ ಹೊಸ ನೀತಿಯ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News