ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏಟಿಎಮ್!
ವ್ಯಕ್ತಿ ಏಟಿಎಮ್ ಗೆ ಹಣ ವಿತ್ ಡ್ರಾ ಮಾಡಲು ಹೋದಾಗ ಏಟಿಎಮ್ ನಲ್ಲಿ ಲೋಪವಿದ್ಧ ಸಂಗತಿ ಬೆಳಕಿಗೆ ಬಂದಿದೆ. ವಾಸ್ತವದಲ್ಲಿ ವ್ಯಕ್ತಿಯ ಖಾತೆಯಲ್ಲಿ 10 ಸಾವಿರ ರೂ.ಗಳು ಇರಲಿಲ್ಲ, ಆದರೂ ವ್ಯಕ್ತಿ ನಡೆಸಿದ ಕಾಂಡಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಕಾರಣ ಎಂದರೆ ಏಟಿಎಮ್ ನಿಂದ ಹಣವೇನು ಬಂತು ಆದರೆ, ವ್ಯಕ್ತಿಯ ಖಾತೆಯಿಂದ ನಯ್ಯಾ ಪೈಸೆ ಕೂಡ ಕಡಿತಗೊಂಡಿಲ್ಲ.
Viral News In Kannada: ಎಟಿಎಂ ಅಥವಾ ಬ್ಯಾಂಕ್‌ನಲ್ಲಿನ ತಾಂತ್ರಿಕ ದೋಷಗಳಿಂದಾಗಿ, ಗ್ರಾಹಕರು ಅನೇಕ ಬಾರಿ ಲಾಭ ಅಥವಾ ನಷ್ಟವನ್ನು ಅನುಭವಿಸುತ್ತಾರೆ. ಆದರೆ, ಬ್ಯಾಂಕಿಗೆ ನಷ್ಟ ಉಂಟಾದಾಗ ನಂತರ ಪರಿಹಾರ ನೀಡಬೇಕು. ಎಷ್ಟೋ ಸಲ ಗ್ರಾಹಕರಿಗೂ ಸುಧಾರಿಸಿಕೊಳ್ಳುವ ಅವಕಾಶ ಸಿಗುತ್ತದೆ, ಆದರೆ ಇಂದು ಒಬ್ಬ ವ್ಯಕ್ತಿ ಎಟಿಎಂ ಮಾಡಿದ ತಪ್ಪಿಗೆ ಸಿಕ್ಕಿಬಿದ್ದು ಯಾರಿಗೂ ಹೇಳದೆ ಸುಮಾರು ಒಂಬತ್ತು ಕೋಟಿ ರೂಪಾಯಿ ತೆಗೆದ ಒಂದು ಪ್ರಕರಣದ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದು ಅತ್ಯಂತ ಚರ್ಚೆಗೆ ಒಳಗಾದ ಪ್ರಕರಣವಾಗಿತ್ತು, ಅದರ ನಂತರ ವ್ಯಕ್ತಿಯನ್ನು ಬಂಧಿಸಿ ಆತನಿಗೆ ಶಿಕ್ಷೆ ವಿಧಿಸಲಾಯಿತು.
ಖಾತೆಯಿಂದ ಹಣ ಕಡಿತಗೊಂಡಿಲ್ಲ
ವಾಸ್ತವವಾಗಿ, ಮಾಧ್ಯಮ ವರದಿಗಳ ಪ್ರಕಾರ, ಈ ವಿಷಯವು ಆಸ್ಟ್ರೇಲಿಯಾದಿಂದ ಹೊರಹೊಮ್ಮಿದೆ, ಈ ವ್ಯಕ್ತಿಯ ಹೆಸರು ಡಾನ್ ಸೌಂಡರ್ಸ್. ಈ ವ್ಯಕ್ತಿ ಹಲವು ವರ್ಷಗಳ ಹಿಂದೆ 2011ರಲ್ಲಿ ಈ ಕೃತ್ಯ ಎಸಗಿದ್ದ. ಏನಾಯಿತೆಂದರೆ ಹಣ ತೆಗೆಯಲು ಹೋದಾಗ ರಾತ್ರಿ 12 ಗಂಟೆಯಾಗಿತ್ತು. ಆ ವೇಳೆ ಕಾರಣಾಂತರಗಳಿಂದ ಎಟಿಎಂನ ಇಂಟರ್ ನೆಟ್ ಕೆಲಸ ಮಾಡದೇ ಅದರಲ್ಲಿ ಹಣ ಡ್ರಾ ಮಾಡಿದರೂ ಆ ವ್ಯಕ್ತಿಯ ಖಾತೆಯಿಂದ ಹಣ ಕಡಿತವಾಗಿರಲಿಲ್ಲ. ಈ ವಿಷಯ ತಿಳಿದ ಅವರು ಮತ್ತೆ ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ. ಅದರಿಂದ ಮತ್ತೆ ಹಣ ಬಂತು. ಬಳಿಕ ಆತ ಹಣ ತೆಗೆಯುತ್ತಲೇ ಹೋಗಿದ್ದಾನೆ.
ಬೇಕಾಬಿಟ್ಟಿ ಹಣ ಉಡಾಯಿಸಿ ಮೋಜು
ಹಲವು ದಿನಗಳಿಂದ ಈ ರೀತಿ ಮಾಡಿದ್ದು, ಖಾತೆಯಿಂದ ಹಣ ಕಡಿತಗೊಂಡಿಲ್ಲವೇ ಎಂದು ಮಧ್ಯೆ ಮಧ್ಯೆ ಆತ ಪರಿಶೀಲಿಸುತ್ತಿದ್ದ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಸುಮಾರು 9 ಕೋಟಿ ರೂಪಾಯಿ ಹಣ ತೆಗೆದುಕೊಂಡು ಯಾರಿಗೂ ತಿಳಿಸದೆ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಆ ಹಣದಿಂದ ಆತ ಬೇಕಾಬಿಟ್ಟಿ ಮೋಜು ಮಾಡಿದ ಆತ ತನ್ನ ಸ್ನೇಹಿತರಿಗೂ ಮಜಾ ಮಾಡಿಸಿದ್ದಾನೆ. ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಅವರು ಪಬ್ ಗಳಲ್ಲಿ ಮದ್ಯಪಾನ ಮಾಡುತ್ತಿದ್ದರು.
ಇದನ್ನೂ ಓದಿ-ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ 'ಆಟಾ-ಸಾಟಾ' ವಿವಾಹದ ಬಗ್ಗೆ ನಿಮಗೆ ತಿಳಿದಿದೆಯಾ?
ತಾಂತ್ರಿಕ ದೋಷ ಕೇವಲ ಏಟಿಎಮ್ ನಲ್ಲಿತ್ತು
ಕೆಲವು ತಿಂಗಳಗಳ ನಂತರ ಆ ವ್ಯಕ್ತಿ ಈ ವಿಷಯವನ್ನು ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ. ಇದನ್ನು ಯಾರೋ ಹೋಗಿ ಬ್ಯಾಂಕ್ ಹಾಗೂ ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯು 2016 ರ ವರೆಗೆ ಈ ಅಪರಾಧದ ಅಡಿ ಬಂಧನದಲ್ಲಿದ್ದ ಮತ್ತು ನಂತರ ಆತ ಜೈಲಿನಿಂದ ಹೊರಬಂದ ಬಳಿಕ ಖಾಸಗಿ ಉದ್ಯೋಗವನ್ನು ಪ್ರಾರಂಭಿಸಿದ್ದಾನೆ. ಎಟಿಎಂನಲ್ಲಿನ ದೋಷದಿಂದ ಈ ಸಮಸ್ಯೆ ಸಂಭವಿಸಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ವ್ಯಕ್ತಿ ಯಾರೊಬ್ಬರಿಗೂ ಹೇಳದೆ ಹಣ ಡ್ರಾ ಮಾಡುತ್ತಲೇ ಇದ್ದ ಎನ್ನಲಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.