ಮದ್ಯಕ್ಕಿಂತಲೂ ಹೆಚ್ಚು ಕಿಕ್ಕ್ ಕೊಡುತ್ತೇ ಈ ಕೆಂಪು ಜೇನು, ವಿಶ್ವಾದ್ಯಂತ ಇದಕ್ಕಿದೆ ಭಾರಿ ಡಿಮ್ಯಾಂಡ್, ಕೇವಲ ಇಲ್ಲಿ ಮಾತ್ರ ಸಿಗುತ್ತೆ!

ಜೇನುತುಪ್ಪದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ, ಆದರೆ ನೀವು ಎಂದಾದರೂ ಕೆಂಪು ಜೇನುತುಪ್ಪದ ಬಗ್ಗೆ ಕೇಳಿದ್ದೀರಾ? ಹಿಮಾಲಯದ ಕ್ಲಿಫ್ ಜೇನುನೊಣಗಳು ಕೆಂಪು ಜೇನುತುಪ್ಪವನ್ನು ತಯಾರಿಸಲು ವಿಷಕಾರಿ ಹಣ್ಣುಗಳಿಂದ ಮಕರಂದವನ್ನು ಸಂಗ್ರಹಿಸುತ್ತವೆ. ಬನ್ನಿ ಏನಿದು ಕೆಂಪು ಜೇನುತುಪ್ಪ ತಿಳಿದುಕೊಳ್ಳೋಣ  

Written by - Nitin Tabib | Last Updated : Jul 18, 2023, 04:28 PM IST
  • ಕೆಂಪು ಜೇನುತುಪ್ಪವು ನೇಪಾಳದ ಬೆಟ್ಟಗಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ.
  • ಈ ಜೇನುತುಪ್ಪದ ಒಂದು ವಿಶೇಷತೆ ಎಂದರೇ ಅದನ್ನು ಹೊರತೆಗೆಯುವುದು ಅಪಾಯಕ್ಕಿಂತ ಕಡಿಮೆಯಿಲ್ಲ.
  • ಯಾವುದೇ ಸಾಮಾನ್ಯ ಜೇನುತುಪ್ಪವನ್ನು ಹೊರತೆಗೆಯುವುದಕ್ಕಿಂತ ಕೆಂಪು ಜೇನುತುಪ್ಪದ ಹೊರತೆಗೆಯುವಿಕೆ ಹೆಚ್ಚು ಅಪಾಯಕಾರಿ.
ಮದ್ಯಕ್ಕಿಂತಲೂ ಹೆಚ್ಚು ಕಿಕ್ಕ್ ಕೊಡುತ್ತೇ ಈ ಕೆಂಪು ಜೇನು, ವಿಶ್ವಾದ್ಯಂತ ಇದಕ್ಕಿದೆ ಭಾರಿ ಡಿಮ್ಯಾಂಡ್, ಕೇವಲ ಇಲ್ಲಿ ಮಾತ್ರ ಸಿಗುತ್ತೆ! title=

ನವದೆಹಲಿ: ಜೇನುತುಪ್ಪದ ಬಗ್ಗೆ ಬಹುತೇಕ ಜನರಿಗೆ ತಿಳಿದೇ ಇರುತ್ತದೆ. ಜೇನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಬಾಲ್ಯದಿಂದಲೂ ಕೇಳಿದ್ದೇವೆ. ಜೇನು ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಲೇ ಇರುತ್ತಾರೆ. ಆದರೆ, ನೀವು ಎಂದಾದರೂ ಕೆಂಪು ಜೇನುತುಪ್ಪದ ಬಗ್ಗೆ ಕೇಳಿದ್ದೀರಾ? ಏಕೆಂದರೆ ಇದು ಅಮಲು ಪದಾರ್ಥಕ್ಕಿಂತ ಕಡಿಮೆಯಿಲ್ಲದ ಒಂದು ರೀತಿಯ ಜೇನುತುಪ್ಪವಾಗಿದೆ. ಇದನ್ನು ವಿಶ್ವದ ಅತಿದೊಡ್ಡ ಜೇನುನೊಣಗಳು ತಯಾರಿಸುತ್ತವೆ. ಅವುಗಳ ಹೆಸರು ಹಿಮಾಲಯನ್ ಕ್ಲಿಫ್ ಜೇನುನೊಣಗಳು. ಈ ಜೇನಿನ ವಿಶೇಷತೆ ಏನು ತಿಳಿದುಕೊಳ್ಳೋಣ ಬನ್ನಿ, 

ವಿಷಕಾರಿ ಹಣ್ಣುಗಳಿಂದ ರಸವನ್ನು ಸಂಗ್ರಹಿಸುತ್ತವೆ ಈ ನೊಣಗಳು
ಹಿಮಾಲಯದ ಕ್ಲಿಫ್  ಜೇನುನೊಣಗಳು ಕೆಂಪು ಜೇನುತುಪ್ಪವನ್ನು ತಯಾರಿಸಲು ವಿಷಕಾರಿ ಹಣ್ಣುಗಳಿಂದ ಮಕರಂದವನ್ನು ಸಂಗ್ರಹಿಸುತ್ತವೆ. ಈ ಜೇನುತುಪ್ಪವು ತುಂಬಾ ಮತ್ತೇರಿಸುತ್ತದೆ. ಇದರೊಂದಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ವಿಶ್ವಾದ್ಯಂತ ಕೆಂಪು ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇರುವುದು ಇದೇ ಕಾರಣಕ್ಕಾಗಿ. ಈ ಜೇನುತುಪ್ಪವು ಅನೇಕ ಪ್ರಯೋಜನಗಳನ್ನು ಹೊಂದಿದೆ; ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೂ ಕೆಂಪು ಜೇನುತುಪ್ಪವು ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಅಮಲೇರಿಸುವ ಇದರ ಗುಣಧರ್ಮದ ಕಾರಣ ಕೆಂಪು ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ. 

ಇದನ್ನೂ ಓದಿ-ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ 'ಆಟಾ-ಸಾಟಾ' ವಿವಾಹದ ಬಗ್ಗೆ ನಿಮಗೆ ತಿಳಿದಿದೆಯಾ?

ಕೆಂಪು ಜೇನು ಎಲ್ಲಿ ಸಿಗುತ್ತದೆ?
ಕೆಂಪು ಜೇನುತುಪ್ಪವು ನೇಪಾಳದ ಬೆಟ್ಟಗಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಜೇನುತುಪ್ಪದ ಒಂದು ವಿಶೇಷತೆ ಎಂದರೇ  ಅದನ್ನು ಹೊರತೆಗೆಯುವುದು ಅಪಾಯಕ್ಕಿಂತ ಕಡಿಮೆಯಿಲ್ಲ. ಯಾವುದೇ ಸಾಮಾನ್ಯ ಜೇನುತುಪ್ಪವನ್ನು ಹೊರತೆಗೆಯುವುದಕ್ಕಿಂತ ಕೆಂಪು ಜೇನುತುಪ್ಪದ ಹೊರತೆಗೆಯುವಿಕೆ ಹೆಚ್ಚು ಅಪಾಯಕಾರಿ. ಗುರುಂಗ್ ಬುಡಕಟ್ಟಿನ ಜನರು ಅದನ್ನು ಬಹಳ ಪ್ರಯತ್ನದಿಂದ ಹೊರತೆಗೆಯುತ್ತಾರೆ. ಕೆಂಪು ಜೇನುತುಪ್ಪವನ್ನು ಹೊರತೆಗೆಯಲು, ಮೊದಲು ಅದನ್ನು ಹಗ್ಗದ ಸಹಾಯದಿಂದ ಹಲವಾರು ಅಡಿ ಎತ್ತರಕ್ಕೆ ಏರಲಾಗುತ್ತದೆ, ನಂತರ ಹೊಗೆ ಬಿಟ್ಟು ಜೇನುನೊಣಗಳನ್ನು ಓಡಿಸಲಾಗುತ್ತದೆ. ಅಷ್ಟೇ ಅಲ್ಲ ಸಿಟ್ಟಿಗೆದ್ದ ಜೇನುನೊಣಗಳ ಕಾಟವನ್ನೂ ಸಹಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ-ದೇಶದ ಅತ್ಯಂತ ವಿಚಿತ್ರ ಪ್ರದೇಶ, ವಿವಾಹಕ್ಕೂ ಮುನ್ನ ಅಲ್ಲಿ ಲೀವ್ ಇನ್ ನಲ್ಲಿರುವ ನಿಯಮ ಚಾಲ್ತಿಯಲ್ಲಿದೆ!

ಅಬ್ಸಿಂಥೆಯಂತಿರುತ್ತದೆ ಕೇಪು ಜೇನಿನ ಅಮಲು
ಕೆಂಪು ಜೇನುತುಪ್ಪದ ಅಮಲು ಅಬ್ಸಿಂಥೆಯಂತೆ ಇರುತ್ತದೆ. ಅಬ್ಸಿಂಥೆ ಅನೇಕ ದೇಶಗಳಲ್ಲಿ ನಿಷೇಧಿಸಲ್ಪಟ್ಟಿರುವ ಒಂದು ಮಾದಕ ಪಾನೀಯ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಯಾರಾದರೂ ಕೆಂಪು ಜೇನುತುಪ್ಪವನ್ನು ಅತಿಯಾಗಿ ಸೇವಿಸಿದರೆ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಬರಬಹುದು ಎಂಬುದು ತಿಳಿದುಕೊಳ್ಳುವುದು ಇಲ್ಲಿ ತುಂಬಾ ಮುಖ್ಯವಾದ ವಿಷಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News