ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ 'ಆಟಾ-ಸಾಟಾ' ವಿವಾಹದ ಬಗ್ಗೆ ನಿಮಗೆ ತಿಳಿದಿದೆಯಾ?

Shocking Marriage Culture: ಆಟಾ-ಸಾಟಾ ವಿವಾಹ ಪದ್ಧತಿಯಲ್ಲಿ ಎರಡು ಕುಟುಂಬಗಳು ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ.   

Written by - Nitin Tabib | Last Updated : Jul 17, 2023, 09:08 PM IST
  • ಆಟಾಸಾಟಾ ಅಪಚಾರದಿಂದ ಕಂಗೆಟ್ಟ ಹೆಣ್ಣುಮಕ್ಕಳಿಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡಲಾಗಿಲ್ಲ.
  • ಆಟಾ-ಸಾಟಾ ದುರಾಚಾರ ಹೆಣ್ಣುಮಕ್ಕಳಿಗೆ ಜೀವಂತ ಸಾವಿಗೆ ಸಮ, ಏಕೆಂದರೆ ಹುಡುಗಿಯರಿಗೆ ನೀವು ಈ ಮದುವೆಯನ್ನು ಒಪ್ಪುತ್ತೀರಾ ಅಥವಾ ಇಲ್ಲವೇ ಎಂಬುದನ್ನೂ ಕೇಳಲಾಗುವುದಿಲ್ಲ.
  • ಇದರಲ್ಲಿ 20 ವರ್ಷ ವಯಸ್ಸಿನ ಹುಡುಗಿಯೂ ಕೂಡ ತನಗಿಂತ ದುಪ್ಪಟ್ಟು ಅಂದರೆ 40 ವರ್ಷ ವಯಸ್ಸಿನ ಪುರುಷನನ್ನು ವರಿಸಬೇಕಾಗುತ್ತದೆ.
ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ 'ಆಟಾ-ಸಾಟಾ' ವಿವಾಹದ ಬಗ್ಗೆ ನಿಮಗೆ ತಿಳಿದಿದೆಯಾ? title=

ಭಾರತವು ತನ್ನ ಸಂಸ್ಕೃತಿ ಮತ್ತು ನಾಗರಿಕತೆಗೆ ಹೆಸರುವಾಸಿಯಾಗಿದೆ. ಇಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅವುಗಳಲ್ಲಿ ಕೆಲ ಪದ್ಧತಿಗಳು ಮತ್ತು ಆಚರಣೆಗಳು ಸ್ವಲ್ಪ ವಿಚಿತ್ರವಾಗಿವೆ, ಸರ್ಕಾರವು ಅವುಗಳನ್ನು ಮೂಯದಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದೆ. ರಾಜಸ್ಥಾನದಲ್ಲಿ, ಅಟಾ-ಸಾಟಾ ಎಂಬ ಆಚರಣೆ ಇಂದಿಗೂ ಕೂಡ ಚಾಲ್ತಿಯಲ್ಲಿದೆ ಎಂಬುದನ್ನು ನಾವು ಆಗಾಗ್ಗೆ ಕೇಳುತ್ತೇವೆ. ರಾಜ್ಯದ ಯುವಕರು ಅದನ್ನು ಒಂದು ಕೆಟ್ಟ ಅಭ್ಯಾಸವೆಂದು ಪರಿಗಣಿಸಿದ್ದಾರೆ. ಈ ಪದ್ಧತಿಯಿಂದ ಇಲ್ಲಿಯವರೆಗೂ ಅದೆಷ್ಟೋ ಹೆಣ್ಣುಮಕ್ಕಳು ಸಾವಿನ ಕೂಪಕ್ಕೆ ತಳ್ಳಪಟ್ಟಿದ್ದಾರೆ. ಹಾಗಾದರೆ ಬನ್ನಿ ಈ ಪದ್ಧತಿ ಎಂದು ಎಂಬುದನ್ನು ತಿಳಿದುಕೊಳ್ಳೋಣ,

ಆಟಾ-ಸಾಟಾ ಪದ್ಧತಿ ಎಂದರೇನು?
ಆಟಾ-ಸಾಟಾ ಸಂಪ್ರದಾಯದಲ್ಲಿ ಎರಡು ಕುಟುಂಬದ ಹೆಣ್ಣುಮಕ್ಕಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, ಆಟಾ ಸಾಟಾ ಪದ್ಧತಿಯಂತೆ ಯಾವುದೇ ಒಂದು ಹುಡುಗನ ಮದುವೆ ಹುಡುಗಿಯೊಂದಿಗೆ ನಿಶ್ಚಯವಾದಾಗ, ವಧುವಿನ ಕಡೆಯ ಓರ್ವ ಯುವಕನ ಜೊತೆಗೆ ವರನ ಸಹೋದರಿಯ ಮದುವೆ ಕೂಡ ನಿಶ್ಚಯವಾಗುತ್ತದೆ. ಈ ಪ್ರಕ್ರಿಯೆಯನ್ನು ಆಟಾ-ಸಾಟಾ ಪದ್ಧತಿ ಎಂದು ಕರೆಯಲಾಗುತ್ತದೆ. ಇದರಲ್ಲಿ, ಮತ್ತೊರ್ವ ಹುಡುಗಿಯ ಇಷ್ಟ ಗಣನೆಗೆ ಬರುವುದಿಲ್ಲ ಮತ್ತು ಇಂತಹ ಪರಿಸ್ಥಿತಿಯಲ್ಲಿ ಎರಡೂ ಕುಟುಂಬಗಳು ತಮ್ಮ ಸಮರ್ಥ ಮತ್ತು ವಿದ್ಯಾವಂತ ಹುಡುಗಿಯರನ್ನು ಅನಕ್ಷರಸ್ಥ, ನಿರುದ್ಯೋಗಿ ಮತ್ತು ಕೆಲವೊಮ್ಮೆ ಅನಾರೋಗ್ಯ ಪೀಡಿತ ಹುಡುಗರೊಂದಿಗೆ ನೆರವೇರಿಸಲಾಗುತ್ತದೆ.

ಬಾಲ್ಯದಲ್ಲಿಯೇ ಇಂತಹ ನಿಶ್ಚಿತಾರ್ಥ ಮಾಡಲಾಗುತ್ತದೆ
ಅಂದಹಾಗೆ, ಇದರಲ್ಲಿ ಮದುವೆಯ ನಿರ್ಧಾರಗಳನ್ನು ಹೆಚ್ಚಾಗಿ ಹಿರಿಯರ ಮೇಲೆ ಬಿಡಲಾಗುತ್ತದೆ, ಆದರೆ ಈ ಅಭ್ಯಾಸದಲ್ಲಿ, ಕೆಲವೊಮ್ಮೆ ಈ ವಿನಿಮಯವು ಬಾಲ್ಯದಲ್ಲಿನ ಒಪ್ಪಂದವಾಗುತ್ತದೆ ಮತ್ತು ಅವಳು ವಯಸ್ಸಾದಾಗ, ಅವಳಿಗೆ ಅದರ ಬಗ್ಗೆ ಹೇಳಲಾಗುತ್ತದೆ ಮತ್ತು ಅವಳು ಈ ಆಘಾತವನ್ನು ಸಹಿಸುವುದಿಲ್ಲ. ಇದರಿಂದ ಹುಡುಗಿಯರು ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸಂಬಂಧಿಕರೊಂದಿಗೆ ಮದುವೆಯೂ ನಡೆಯುತ್ತದೆ.
ಈ ಪದ್ಧತಿಯಡಿಯಲ್ಲಿ ಅನೇಕ ಬಾರಿ ಹೆಣ್ಣುಮಕ್ಕಳ ಮದುವೆಯನ್ನು ಬಾಲ್ಯದಲ್ಲಿಯೇ ನಿಶ್ಚಯಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಅವರು ದೊಡ್ಡವರಾಗುವವರೆಗೆ ಕಾಯದೆ ಮದುವೆಯಾಗುತ್ತಾರೆ. ಸಂಪ್ರದಾಯದ ಪ್ರಕಾರ ಮನೆಯವರು ಹೆಣ್ಣಿನ ಬದಲಿಗೆ ಹೆಣ್ಣು ಕೊಡಬೇಕು, ಇದರಿಂದ ಮಗಳ ಮದುವೆಗೆ ಸಂಬಂಧಿಕರ ಮದುವೆಯನ್ನೂ ಮಾಡಿಸಿ, ಹುಡುಗಿಯ ವಯಸ್ಸು ಎಷ್ಟು, ಏನು ಎಂದು ನೋಡುವುದೇ ಇಲ್ಲ. ಸಂಬಂಧಿಕರ ವಯಸ್ಸು. ಉದಾಹರಣೆಗೆ, ಹುಡುಗಿಯ ವಯಸ್ಸು 21 ವರ್ಷಗಳು ಮತ್ತು ಹುಡುಗನ ವಯಸ್ಸು 40 ವರ್ಷಗಳು. ಹೆಚ್ಚಿನ ಸಂದರ್ಭಗಳಲ್ಲಿ, ಅಂತಹ ಮದುವೆಗಳನ್ನು ಬಲವಂತವಾಗಿ ಮಾಡಿಸಲಾಗುತ್ತದೆ.

ಇದನ್ನೂ ಓದಿ-ದೇಶದ ಅತ್ಯಂತ ವಿಚಿತ್ರ ಪ್ರದೇಶ, ವಿವಾಹಕ್ಕೂ ಮುನ್ನ ಅಲ್ಲಿ ಲೀವ್ ಇನ್ ನಲ್ಲಿರುವ ನಿಯಮ ಚಾಲ್ತಿಯಲ್ಲಿದೆ!

ಆಟಾಸಾಟಾ ಪದ್ಧತಿಗೆ ಏಕೆ ಇಷ್ಟೊಂದು ವಿರೋಧ?
ಆಟಾಸಾಟಾ ಅಪಚಾರದಿಂದ ಕಂಗೆಟ್ಟ ಹೆಣ್ಣುಮಕ್ಕಳಿಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡಲಾಗಿಲ್ಲ. ಆಟಾ-ಸಾಟಾ ದುರಾಚಾರ ಹೆಣ್ಣುಮಕ್ಕಳಿಗೆ ಜೀವಂತ ಸಾವಿಗೆ ಸಮ, ಏಕೆಂದರೆ ಹುಡುಗಿಯರಿಗೆ ನೀವು ಈ ಮದುವೆಯನ್ನು ಒಪ್ಪುತ್ತೀರಾ ಅಥವಾ ಇಲ್ಲವೇ ಎಂಬುದನ್ನೂ ಕೇಳಲಾಗುವುದಿಲ್ಲ. ಇದರಲ್ಲಿ 20 ವರ್ಷ ವಯಸ್ಸಿನ ಹುಡುಗಿಯೂ ಕೂಡ ತನಗಿಂತ ದುಪ್ಪಟ್ಟು ಅಂದರೆ 40 ವರ್ಷ ವಯಸ್ಸಿನ ಪುರುಷನನ್ನು ವರಿಸಬೇಕಾಗುತ್ತದೆ. ವಿದ್ಯಾವಂತ ಯುವಕ-ಯುವತಿಯರು ಈ ಅನಿಷ್ಟ ಪದ್ಧತಿಯ ಭಾಗವಾಗಲು ಬಯಸುವುದಿಲ್ಲ, ಇದರಿಂದ ಅಲ್ಲಿ ಹಳ್ಳಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದನ್ನೂ ಓದಿ-ಚಿನ್ನಾಭರಣಗಳಿಗಿಂತಲೂ ದುಬಾರಿಯಾಯ್ತು ಟೋಮ್ಯಾಟೊ! ಕಾವಲಿಗೆ ಬಂದು ನಿಂತ ನಾಗರಾಜ... ವಿಡಿಯೋ ನೋಡಿ

ರೂಢಿ  ಹೇಗೆ ಆರಂಭಗೊಂಡಿದೆ?
ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಹುಡುಗರಿಗೆ ಹುಡುಗಿಯರು ಸಿಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಜನರು ಹುಡುಗಿಗೆ ಬದಲು ಹುಡುಗಿ ವಿನಿಮಯ ಮಾಡಿಕೊಳ್ಳುವ ಮೂಲಕ ಆಟಾ-ಸಾಟಾವನ್ನು ಪ್ರೋತ್ಸಾಹಿಸತೊಡಗಿದರು. ಹುಡುಗ ಅರ್ಹನೋ ಇಲ್ಲವೋ ಎಂಬುದು ಈ ಪದ್ಧತಿಯಲ್ಲಿ ಮುಖ್ಯವಾಗುವುದಿಲ್ಲ. ಈ ಹಿಂದೆ ಈ ಅನಿಷ್ಟ ಪದ್ಧತಿ ತುಂಬಾ ಹೆಚ್ಚಾಗಿತ್ತು, ಆದರೆ ಶಿಕ್ಷಣದ ಪ್ರಚಾರದಿಂದಾಗಿ, ಬಹಳಷ್ಟು ಕಡಿಮೆಯಾಗಿದೆ, ಇನ್ನೂ ಕೆಲವೊಮ್ಮೆ ಅಂತಹ ಪ್ರಕರಣಗಳು ಆಗಾಗ್ಗ ಕೇಳಿಬರುವುದು ಮಾತ್ರ ವಿಷಾಧನೀಯ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News