ಕೇರಳ : ನಾವು ಸಾಮಾನ್ಯವಾಗಿ ಎಲ್ಲಿಗಾದರೂ ಹೋಗಬೇಕಾದರೆ ಸರಿಯಾಗಿ ದಾರಿ ಗೊತ್ತಿಲ್ಲ ಎಂದಾದಾಗ ನಮಗೆ ತಕ್ಷಣ ಹೊಳೆಯುವುದೇ ಗೂಗಲ್ ಮ್ಯಾಪ್ (Google Map).ಆದರೆ ಎಲ್ಲಾ ಸಂದರ್ಭದಲ್ಲಿಯೂ ಈ ಮ್ಯಾಪ್ ಅನ್ನು ಅನುಸರಿಸಬಹುದೇ ಎನ್ನುವ ಸಂದೇಹ ಕೂಡಾ ಮೂಡುತ್ತದೆ.ಯಾಕೆಂದರೆ ಮ್ಯಾಪ್ ಹೇಳಿದ ಹಾದಿಯಲ್ಲಿ ಹೋಗಿ ಎಲ್ಲಿಗೋ ತಲುಪಿರುವಂಥಹ ಘಟನೆ ಬಹಳಷ್ಟು ಕಡೆಗಳಲ್ಲಿ ವರದಿಯಾಗಿದೆ.ಇದೀಗ ಅಂಥದ್ದೇ ಘಟನೆ ಕೇರಳದಿಂದ ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಹೌದು ಕಾರಿನಲ್ಲಿಯೋ, ಬೈಕ್ ನಲ್ಲಿಯೂ ಕುಳಿತು ಗೂಗಲ್ ಮ್ಯಾಪ್ ಹಾಕಿ ನಿರಾತಂಕವಾಗಿ ಅದು ಹೇಳಿದ ರೀತಿಯಲ್ಲಿಯೇ ಸಾಗುವುದು ನಮ್ಮಲ್ಲಿ ಬಹುತೇಕರ ಹವ್ಯಾಸ. ಆದರೆ ಈ ಮ್ಯಾಪ್ ಅನ್ನು ಕುರುಡಾಗಿ ನಂಬುವುದು ಅಪಾಯಕಾರಿ ಎನ್ನುವುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಕೇರಳದ ಇಬ್ಬರು ವ್ಯಕ್ತಿಗಳ ಜೀವನದಲ್ಲಿ ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿ. ಕೇರಳದ ಕಾಸರಗೋಡಿನ ಇಬ್ಬರು ಕರ್ನಾಟಕದ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿದ್ದರು. ತಮಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ Google ಮ್ಯಾಪ್ ಹಾಕಿದ್ದಾರೆ. ಗೂಗಲ್ ಮ್ಯಾಪ್ ಮೂಲಕ ಸುಲಭವಾಗಿ ತಾವು ಸೇರಬೇಕಾಗಿರುವ ಸ್ಥಳಕ್ಕೆ ತಲುಪುತ್ತೇವೆ ಅಂದುಕೊಂಡಿದ್ದ ಇವರಿಗೆ ಎದುರಾದದ್ದು ಅಪಾಯಕಾರಿ ತಿರುವು.   


ಇದನ್ನೂ ಓದಿ : WhatsApp: ಗ್ರೂಪ್ ಚಾಟ್‌ಗಳಿಗಾಗಿ ಹೊಸ ಈವೆಂಟ್‌ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸಾಪ್


ನದಿ ಪಾಲು ಮಾಡಿದ ಗೂಗಲ್ ಮ್ಯಾಪ್ :
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ,ಅಬ್ದುಲ್ ರಶೀದ್ ಮತ್ತು ಅವರೊಂದಿಗಿದ್ದ ಸಹ  ಪ್ರಯಾಣಿಕ ಗೂಗಲ್ ಹೇಳಿದ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು.ಅಷ್ಟರಲ್ಲಿ ಅವರು ಕಿರಿದಾದ ರಸ್ತೆಯನ್ನು ತಲುಪಿದರು.ಅದು ರಾತ್ರಿಯ ಸಮಯವಾಗಿತ್ತು.   ಅವರ ಕಾರಿನ ಹೆಡ್‌ಲೈಟ್‌ಗಳು ಮಾತ್ರ ಉರಿಯುತ್ತಿದ್ದವು.ಹಾಗಾಗಿ ತಮ್ಮ ಕಾರಿನ ಎದುರು ಸ್ವಲ್ಪ ನೀರಿರುವುದು ಅವರ ಗಮನಕ್ಕೆ ಬಂತು.ಆದರೆ  ಅದು ಗೋಡೆಯಿಲ್ಲದ ಸೇತುವೆ ಎನ್ನುವುದು ಅವರಿಗೆ ತಿಳಿಯಲೇ ಇಲ್ಲ. 


ಬದುಕಿತು ಬಡಜೀವ : 
 ಈ ಸೇತುವೆಯಲ್ಲಿ ಮುಂದುವರಿಯುತ್ತಿದ್ದಂತೆ ವರು ಅಪಾಯಕ್ಕೆ ಸಿಲುಕಿರುವುದು ತಿಳಿಯುತ್ತದೆ. ರಭಸವಾಗಿ ಹರಿಯುತ್ತಿದ್ದ ನದಿ ನೀರು ಅವರ ಕಾರನ್ನು ಏಕಾಏಕಿ ಕೊಚ್ಚಿಕೊಂಡು ಹೋಗುತ್ತದೆ. ಆದರೆ ಪವಾಡದಂತೆ,ಅವರ ಕಾರು ನದಿಯ ದಂಡೆಯ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ನಿಂತು ಬಿಡುತ್ತದೆ. ಒಂದು ವೇಳೆ ಮರಕ್ಕೆ ಕಾರು ಡಿಕ್ಕಿಯಾಗದೇ ಇದ್ದಿದ್ದರೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಸಾಧ್ಯತೆ ಇತ್ತು. 


ಇದನ್ನೂ ಓದಿ : Flipkart ಮಹಾ ಬಚತ್ Offer ನಲ್ಲಿ iPhone 15 Plus ಮೇಲೆ 14 ಸಾವಿರಗಳ ರಿಯಾಯಿತಿ ! ಇಂದೇ ಬುಕ್ ಮಾಡಿ


ಅಗ್ನಿಶಾಮಕಕ್ಕೆ ಕರೆ : 
ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಇಬ್ಬರೂ ಬೇಗನೆ ಕಾರಿನ ಬಾಗಿಲು ತೆರೆದು ಹೊರಬರುತ್ತಾರೆ.ಅಬ್ದುಲ್ ಹೇಗೋ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಮಾತನಾಡಿ ತನ್ನ ನಿಖರವಾದ ಸ್ಥಳವನ್ನು ತಿಳಿಸುತ್ತಾನೆ. ಹೀಗೆ ಪಾರಾಗಿ ಬರುತ್ತಾರೆ. ಇದೀಗ ಈ ಮಾರಣಾಂತಿಕ ಘಟನೆಯಿಂದ ಅವರು ಪಾರಾದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ  ಹರಿದಾಡುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.