WhatsApp: ಗ್ರೂಪ್ ಚಾಟ್‌ಗಳಿಗಾಗಿ ಹೊಸ ಈವೆಂಟ್‌ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸಾಪ್

WhatsApp: ಜಗತ್ತಿನ ಅತಿದೊಡ್ಡ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಇತ್ತೀಚೆಗೆ ತನ್ನ ಗ್ರೂಪ್ ಚಾಟ್‌ಗಳಿಗಾಗಿ ಈವೆಂಟ್‌ಗಳ ವೈಶಿಷ್ಟ್ಯವನ್ನು ಪರಿಚಯಿಸಿದೆ. 

Written by - Yashaswini V | Last Updated : Jul 2, 2024, 09:03 AM IST
  • ವಾಟ್ಸಾಪ್ ನ ಹೊಸ ವೈಶಿಷ್ಟ್ಯವು ಗುಂಪಿನ ಸದಸ್ಯರೊಂದಿಗೆ ಈವೆಂಟ್‌ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
  • ಈ ವೈಶಿಷ್ಟ್ಯದ ಸಹಾಯದಿಂದ ಗ್ರೂಪ್ ಚಾಟ್‌ಗಳಲ್ಲಿ ಈವೆಂಟ್‌ಗಳನ್ನು ರಚಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ.
  • ವಾಟ್ಸಾಪ್ ಈವೆಂಟ್ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಿರಿ...
WhatsApp: ಗ್ರೂಪ್ ಚಾಟ್‌ಗಳಿಗಾಗಿ ಹೊಸ ಈವೆಂಟ್‌ ವೈಶಿಷ್ಟ್ಯವನ್ನು ಪರಿಚಯಿಸಿದ ವಾಟ್ಸಾಪ್ title=

WhatsApp Event Feature: ಮೆಟಾ ಒಡೆತನದ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗಾಗಿ ಹೊಸ ಈವೆಂಟ್ ವೈಶಿಷ್ಟ್ಯವನ್ನು (Event Feature)  ಪರಿಚಯಿಸಿದೆ. ವಾಟ್ಸಾಪ್ ಈವೆಂಟ್ ವೈಶಿಷ್ಟ್ಯ (WhatsApp Event Feature)ವನ್ನು ವಿಶೇಷವಾಗಿ ಗ್ರೂಪ್ ಚಾಟ್‌ಗಳಿಗಾಗಿ ಪರಿಚಯಿಸಲಾಗಿದೆ. ಇದರ ಸಹಾಯದಿಂದ ಗ್ರೂಪ್ ಸದಸ್ಯರು ತಮ್ಮ ಗ್ರೂಪ್ ಚಾಟ್‌ನಲ್ಲಿ ನೇರವಾಗಿ ಸಭೆಗಳು, ಕೂಟಗಳು ಮತ್ತು ಇತರ ಈವೆಂಟ್‌ಗಳನ್ನು ಆಯೋಜಿಸುವುದು ತುಂಬಾ ಸುಲಭವಾಗುತ್ತದೆ. 

ವಾಟ್ಸಾಪ್ ಅಪ್ಡೇಟ್ ಬಗ್ಗೆ ವರದಿ ಮಾಡುವ WABetaInfo ಪ್ರಕಾರ , Android 2.24.9.20 ಅಪ್‌ಡೇಟ್‌ಗಾಗಿ ವಾಟ್ಸಾಪ್ ಬೀಟಾದೊಂದಿಗೆ ವೈಶಿಷ್ಟ್ಯವನ್ನು ಹೊರತರಲು ಪ್ರಾರಂಭಿಸಿದೆ. ಶೀಘ್ರದಲ್ಲೇ ವಾಟ್ಸಾಪ್ ತನ್ನ ಎಲ್ಲಾ ಬಳಕೆದಾರರಿಗೂ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. 

ಗಮನಾರ್ಹವಾಗಿ, ವಾಟ್ಸಾಪ್ ಈವೆಂಟ್‌ಗಳ ವೈಶಿಷ್ಟ್ಯವು ಮೊದಲು ಸಮುದಾಯ ಗುಂಪು ಚಾಟ್‌ಗಳಿಗೆ (Community Group Chats) ಮಾತ್ರ ಸೀಮಿತವಾಗಿತ್ತು. ಆದರೆ ವಾಟ್ಸಾಪ್ ಇತ್ತೀಚಿನ ನವೀಕರಣದೊಂದಿಗೆ ಈ ವೈಶಿಷ್ಟ್ಯವನ್ನು ಸಾಮಾನ್ಯ ಗ್ರೂಪ್ ಚಾಟ್‌ಗಳಿಗೂ ಪರಿಚಯಿಸಲು ಮುಂದಾಗಿದೆ. 

ಇದನ್ನೂ ಓದಿ- Whatsapp: ಈ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ ವಾಟ್ಸಾಪ್! Motorla, Samsungನಂತಹ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆ

ವಾಟ್ಸಾಪ್ ನ ಹೊಸ ಈವೆಂಟ್ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ? 
ವಾಟ್ಸಾಪ್ ನ ಹೊಸ ಈವೆಂಟ್‌ಗಳ ವೈಶಿಷ್ಟ್ಯವು (WhatsApp Event Feature) ಹೆಸರು, ವಿವರಣೆ, ದಿನಾಂಕ, ಸ್ಥಳ, ಧ್ವನಿ ಅಥವಾ ವೀಡಿಯೊ ಕರೆ ಮತ್ತು ಹೆಚ್ಚಿನ ವಿವರಗಳಂತಹ ಈವೆಂಟ್ ವಿವರಗಳನ್ನು ನಮೂದಿಸುವ ಮೂಲಕ ಗ್ರೂಪ್ ಚಾಟ್‌ಗಳಲ್ಲಿ ಈವೆಂಟ್‌ಗಳನ್ನು ರಚಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಈವೆಂಟ್ ರಚನೆಯ ನಂತರ, ಗುಂಪಿನ ಸದಸ್ಯರು ಆಹ್ವಾನವನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಸಾಧ್ಯವಾಗುತ್ತದೆ. ಮೂಲ ರಚನೆಕಾರರು ಈವೆಂಟ್ ವಿವರಗಳನ್ನು ಅಗತ್ಯವಿರುವಂತೆ ನವೀಕರಿಸಬಹುದು ಎಂಬುದು ಇದರ ಮತ್ತೊಂದು ವಿಶೇಷತೆಯಾಗಿದೆ. 

ವಾಟ್ಸಾಪ್ ಗ್ರೂಪ್ ಚಾಟ್‌ಗಳಲ್ಲಿನ ಈವೆಂಟ್‌ಗಳು ಖಾಸಗಿಯಾಗಿರುತ್ತವೆ ಮತ್ತು ಸಂಭಾಷಣೆಯಲ್ಲಿ ಭಾಗವಹಿಸುವವರು ಮಾತ್ರ ಈವೆಂಟ್ ವಿವರಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ- ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ

ಲಭ್ಯವಿರುವ ಮಾಹಿತಿಯ ಪ್ರಕಾರ, ವಾಟ್ಸಾಪ್ ಈವೆಂಟ್ ವೈಶಿಷ್ಟ್ಯದಲ್ಲಿ ಹೆಚ್ಚುವರಿಯಾಗಿ ಭವಿಷ್ಯದಲ್ಲಿ ಜ್ಞಾಪನೆಗಳನ್ನು ಸೇರಿಸುವ ಮತ್ತು ಕವರ್ ಫೋಟೋಗಳನ್ನು ಹೊಂದಿಸುವ ಸಾಮರ್ಥ್ಯ ಸೇರಿದಂತೆ ಇನ್ನೂ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News