ನವದೆಹಲಿ: ಭಾರತೀಯ ಕಾರು ಉದ್ಯಮದಲ್ಲಿ ಮೊದಲಿನಿಂದಲೂ ಖ್ಯಾತಿ ಹೊಂದಿರುವ ಮಾರುತಿ ಇದೀಗ ಮತ್ತೆ ಹೆಚ್ಚು ಮೈಲೇಜ್ ನೀಡಬಲ್ಲ ಅತ್ಯುತ್ತಮ  ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ಪರಿಚಯಿಸಲು ಸಜ್ಜಾಗಿದೆ. ಈಗಾಗಲೇ ಟೊಯೋಟಾ ಸಹಯೋಗದೊಂದಿಗೆ ತನ್ನ ಮೊದಲ ಬಲವಾದ ಹೈಬ್ರಿಡ್ ವಾಹನ ಮಾರುತಿ ಗ್ರಾಂಡ್ ವಿಟಾರಾವನ್ನು ಪರಿಚಯಿಸಿರುವ ಮಾರುತಿ,  ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಇನ್ನೂ ನಾಲ್ಕು ಹೊಸ ಮಾದರಿಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.


COMMERCIAL BREAK
SCROLL TO CONTINUE READING

ಹೌದು, ತಂತ್ರಜ್ಞಾನ ಬದಲಾದಂತೆ ತನ್ನ ಕಾರು ಉತ್ಪಾದನೆಯಲ್ಲಿಯೂ ಹೊಸ ತಂತ್ರಜ್ಞಾನಗಳು ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸಿರುವ ಮಾರುತಿ ಕಂಪನಿ ಶೀಘ್ರದಲ್ಲೇ ನಾಲ್ಕು ಸ್ಟ್ರಾಂಗ್ ಹೈಬ್ರಿಡ್ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಆ ಕಾರುಗಳು ಯಾವುವು, ಅವುಗಳ ವಿಶೇಷತೆ ಏನು ಎಂದು ತಿಳಿಯೋಣ...


ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಮತ್ತು ಡಿಜೈರ್:
ಮಾರುತಿ ಸುಜುಕಿಯ ಮುಂಬರುವ ಪ್ರಬಲ ಹೈಬ್ರಿಡ್ ಕಾರುಗಳಲ್ಲಿ ಮಾರುತಿಯ ಅತ್ಯಂತ ಜನಪ್ರಿಯ ಕಾರುಗಳಾದ  ಮಾರುತಿ ಸ್ವಿಫ್ಟ್ ಮತ್ತು ಡಿಜೈರ್ ಕೂಡ ಸೇರಿವೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಮಾರುತಿಯ ಈ ಎರಡೂ ಮಾದರಿಗಳು ಹೊಸ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ ಎಂದು ಹೇಳಲಾಗುತ್ತಿದೆ. ಈ ಕಾರುಗಳು ಟೊಯೊಟಾದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿದ್ದು ಇವೆರಡೂ ಸಹ ಒಂದು ಲೀಟರ್ ಪೆಟ್ರೋಲ್ನಲ್ಲಿ 35 ರಿಂದ 40 ಕಿ.ಮೀ. ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.


ಇದನ್ನೂ ಓದಿ- Indian Railways Update:ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ!


ಹೊಸ ಮಾರುತಿ 7-ಸೀಟರ್ MPV:
ಮಾರುತಿಯ ಮುಂಬರುವ 7-ಸೀಟರ್ MPV ಟೊಯೋಟಾ ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಎರಡೂ ಮಾದರಿಗಳಲ್ಲಿ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಆದರೆ, ಪ್ಲಾಟ್‌ಫಾರ್ಮ್, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ಒಂದೇ ಆಗಿರುತ್ತದೆ. ಇದರ ಬೆಲೆ 20 ರಿಂದ 30 ಲಕ್ಷ ರೂ. ಇರಬಹುದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- 7 ಮತ್ತು 9 ಸೀಟರ್ ಆಯ್ಕೆಗಳೊಂದಿಗೆ ಮಹೀಂದ್ರ ಹೊರ ತರುತ್ತಿದೆ ಮತ್ತೊಂದು ಸ್ಕಾರ್ಪಿಯೋ!


ಹೊಸ ಮಾರುತಿ 7-ಸೀಟರ್ ಎಸ್‌ಯುವಿ
ಮಾರುತಿ ಸುಜುಕಿ ಈ ವರ್ಷದ ಅಂತ್ಯದ ವೇಳೆಗೆ ಗ್ರ್ಯಾಂಡ್ ವಿಟಾರಾ ಆಧಾರಿತ 7 ಆಸನಗಳ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಬಹುದು. ಇದರ ಉದ್ದ ಮೊದಲಿಗಿಂತ ಹೆಚ್ಚಿರಲಿದೆ. ಹೊಸ ಮಾರುತಿ 7-ಸೀಟರ್ ಎಸ್‌ಯುವಿ ಅನ್ನು 1.5L K15C ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಮತ್ತು 1.5L ಅಟ್ಕಿನ್ಸನ್ ಸೈಕಲ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಾಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕಾರ್ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 27.97km ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.