Maruti Suzuki Swift: ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿಗಳು ಕೆಲವೊಮ್ಮೆ ಸಹಾಯ ಮಾಡೋದಿಲ್ಲ. ಹೀಗಿರುವಾಗ ಕಾರು ಖರೀದಿಸುವುದು ಅನೇಕ ಜನರಿಗೆ ಕೇವಲ ಕನಸಾಗಿ ಉಳಿದಿರುತ್ತದೆ. ಇನ್ನು ಭಾರತದಲ್ಲಿ ಕಾರಿನ ಹೆಸರು ಹೇಳಿದ ತಕ್ಷಣ ನೆನಪಿಗೆ ಬರುವ ಮೊದಲ ಹೆಸರು ಮಾರುತಿ ಸುಜುಕಿ. ಆದರೆ ಇಂದಿನ ಕಾಲದಲ್ಲಿ ಅನೇಕ ಕಾರುಗಳು ಮಾರುಕಟ್ಟೆ ಬರುತ್ತಿವೆ. ಇಂದು ಪ್ರಪಂಚದಾದ್ಯಂತ ಒಂದಕ್ಕಿಂತ ಹೆಚ್ಚು ಕಾರುಗಳು ವೇಗವನ್ನು ಪಡೆಯುತ್ತಿವೆ. ಆದರೆ, ಮಾರುತಿ ಸುಜುಕಿ ಭಾರತದಲ್ಲಿ ದೀರ್ಘಕಾಲದಿಂದ ಜನರ ಹೃದಯವನ್ನು ಆಳುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'Weekend with Ramesh' ಕಾರ್ಯಕ್ರಮದಲ್ಲಿ ಅತಿ ಹೆಚ್ಚು TRP ಬಂದಿದ್ದು ಯಾರ ಸಂಚಿಕೆಗೆ ಗೊತ್ತಾ?


ಮಾರುತಿಯ ಹಲವು ಕಾರುಗಳು ಭಾರೀ ಹಿಟ್ ಆಗಿವೆ. ಇವುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕೂಡ ಸೇರಿದೆ. ಸ್ವಿಫ್ಟ್‌ ನ ಜನಪ್ರಿಯತೆಯು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿದೆ. ಇಂದಿಗೂ ಮಾರುತಿಯ ಹ್ಯಾಚ್‌’ಬ್ಯಾಕ್ ಕಾರು ಟಾಪ್-10 ಮಾರಾಟವಾದ ಕಾರುಗಳ ಪಟ್ಟಿಯಲ್ಲಿದೆ. ಇದುವೇ ಮಾರ್ಚ್‌ನಲ್ಲಿ ಹೆಚ್ಚು ಮಾರಾಟವಾದ ಕಾರು. ಮಾರುತಿಯು ಮಾರ್ಚ್‌ನಲ್ಲಿ 17,559 ಯೂನಿಟ್ ಸ್ವಿಫ್ಟ್‌’ಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಸ್ವಿಫ್ಟ್‌’ನ ಎಕ್ಸ್ ಶೋ ರೂಂ ಬೆಲೆಯು ರೂ.5.99 ಲಕ್ಷದಿಂದ ಪ್ರಾರಂಭವಾಗಿ ರೂ.8.89 ಲಕ್ಷದವರೆಗೆ ಇದೆ.


ನೀವು ದೆಹಲಿಯಲ್ಲಿ ಖರೀದಿಸಿದರೆ, ಮೂಲ ಮಾದರಿಯ ಬೆಲೆ 6.71 ಲಕ್ಷ ರೂ.ವರೆಗೆ ಇದೆ. ಈಗ ಇದಕ್ಕಾಗಿ ನೀವು ಕನಿಷ್ಟ  1,00,000 ರೂ, ಡೌನ್ ಪೇಮೆಂಟ್ ಮಾಡಿ ಉಳಿದ ಮೊತ್ತಕ್ಕೆ ಸಾಲವನ್ನು ತೆಗೆದುಕೊಳ್ಳಬೇಕು. EMI 7 ವರ್ಷಗಳವರೆಗೆ 8% ಬಡ್ಡಿದರದಲ್ಲಿ ಸುಮಾರು ರೂ, 9000 ಆಗಿರುತ್ತದೆ. ಆದರೆ, ಬಡ್ಡಿ ಮತ್ತು ಸಾಲದ ಅವಧಿಯನ್ನು ಅವಲಂಬಿಸಿ EMI ಹೆಚ್ಚೂ ಆಗಬಹುದು ಅಥವಾ ಕಡಿಮೆಯಾಗಿರಲೂಬಹುದು.


ಇದನ್ನೂ ಓದಿ: ವಿರಾಟ್-ರೋಹಿತ್ ಹಿಂದಿಕ್ಕಿ ಇತಿಹಾಸ ಬರೆದ MS Dhoni: ಯಾರಿಂದಲೂ ಟಚ್ ಮಾಡೋಕಾಗಲ್ಲ ಅನ್ಸುತ್ತೆ!


ಸ್ವಿಫ್ಟ್ ಕಾರು 1.2 ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದು 90 PS ಪವರ್ ಮತ್ತು 113 Nm ಟಾರ್ಕ್ ಅನ್ನು ಹೊಂದಿದೆ. ಉತ್ತಮ ಮೈಲೇಜ್‌ ಗಾಗಿ ಇದು ಐಡಲ್ ಸ್ಟಾರ್ಟ್-ಸ್ಟಾಪ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಎಂಜಿನ್ ಜೊತೆಗೆ, ಇದು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ. ಸ್ವಿಫ್ಟ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ ನೊಂದಿಗೆ ಸಿ ಎನ್‌ ಜಿ ಕಿಟ್‌ ನ ಆಯ್ಕೆಯನ್ನು ಸಹ ಹೊಂದಿದೆ. ಇದರ ಪವರ್ ಔಟ್‌ಪುಟ್ 77.5PS ಮತ್ತು 98.5Nm ಆಗಿದೆ. CNGಯಲ್ಲಿ ಇದರ ಮೈಲೇಜ್ 30 kmpl ವರೆಗೆ ಇರುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.