ಇನ್ನೊಂದು ತಿಂಗಳಲ್ಲಿ ಮಾರುತಿ ಹೊರ ತರುತ್ತಿದೆ 7 ಸೀಟರ್ ಕಾರು ! ಮಾರುತಿ ಸುಜುಕಿಯ ದುಬಾರಿ ಕಾರು ಇದಾಗಿರಲಿದೆ
ಮೂರು ಹೊಸ ಎಸ್‌ಯುವಿಗಳನ್ನು ಪರಿಚಯಿಸಿದ ನಂತರ, ಈಗ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ ಪ್ರೀಮಿಯಂ ಎಂಪಿವಿಯನ್ನು ಬಿಡುಗಡೆ ಮಾಡಲು ಮಾರುತಿ ಸುಜುಕಿ ಹೊರಟಿದೆ. ಮಾರುತಿ ಸುಜುಕಿ ಎಂಗೇಜ್ ಅನ್ನು ಜುಲೈ 5 ರಂದು ಪ್ರಸ್ತುತಪಡಿಸಲಾಗುತ್ತದೆ.
ಬೆಂಗಳೂರು : ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಈಗ ಪ್ರೀಮಿಯಂ ಕಾರುಗಳತ್ತ ಗಮನ ಹರಿಸುತ್ತಿದೆ. ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್ ಮತ್ತು ಜಿಮ್ನಿ ರೂಪದಲ್ಲಿ ಒಂದು ವರ್ಷದೊಳಗೆ ಮೂರು ಹೊಸ ಎಸ್‌ಯುವಿಗಳನ್ನು ಪರಿಚಯಿಸಿದ ನಂತರ, ಈಗ ಕಂಪನಿಯು ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ ಪ್ರೀಮಿಯಂ ಎಂಪಿವಿಯನ್ನು ಬಿಡುಗಡೆ ಮಾಡಲು ಹೊರಟಿದೆ. ಅದಕ್ಕೆ ಎಂಗೇಜ್ ಎಂದು ಹೆಸರಿಡಲಾಗುವುದು. ಮಾರುತಿ ಸುಜುಕಿ ಎಂಗೇಜ್ ಅನ್ನು ಜುಲೈ 5 ರಂದು ಪ್ರಸ್ತುತಪಡಿಸಲಾಗುತ್ತದೆ. ಇದು ಭಾರತದಲ್ಲಿ ಮಾರುತಿ ಸುಜುಕಿಯ ಅತ್ಯಂತ ದುಬಾರಿ ಕಾರು.
ಮಾರುತಿ ಸುಜುಕಿ ಎಂಗೇಜ್ ಸಂಪೂರ್ಣವಾಗಿ ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಆದರೆ ವಿಭಿನ್ನವಾದ ಆಕರ್ಷಣೆಯನ್ನು ನೀಡುವ ಸಲುವಾಗಿ ಅದರ ವಿನ್ಯಾಸವನ್ನು ಬದಲಾಯಿಸಲಾಗುತ್ತದೆ. ಇತ್ತೀಚೆಗೆ ಲೀಕ್ ಆದ ಫೋಟೋದಲ್ಲಿ MPVಯ ಮುಂಭಾಗದ ಗ್ರಿಲ್ ಗ್ರ್ಯಾಂಡ್ ವಿಟಾರಾ SUVಯಂತೆಯೇ ಇರಲಿದ್ದು, ಕ್ರೋಮ್ನೊಂದಿಗೆ ಬ್ಲಾಕ್ ಫಿನಿಶ್ದ್ ಆಗಿರಲಿದೆ. ಹೆಕ್ಸಗೊನಲ್ ಮೆಶ್ ಮಾದರಿಯ ಗ್ರಿಲ್ ಎಂಗೇಜ್‌ನ ಮುಂಭಾಗವನ್ನು ಹೆಚ್ಚು ಆಕರ್ಷಕವಾಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಅಗ್ನಿ ಪ್ರೈಮ್ ಪಿ: ಚೀನಾದ ಮಿಲಿಟರಿ ವೃದ್ಧಿಗೆ ಭಾರತದ ಉತ್ತರ
ಇದು 6/7 ಆಸನಗಳ ವಿನ್ಯಾಸವನ್ನು ಪಡೆಯುತ್ತದೆ. ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಲಭ್ಯವಿರುವ ಮಾರುತಿಯ ಮೊದಲ ಕಾರು ಇದಾಗಿರಲಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ಅಲರ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಹೈ ಬೀಮ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.
ಇದು ಇನ್ನೋವಾ ಹೈಕ್ರಾಸ್‌ನಂತೆಯೇ ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ. ಇದರ 2.0-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 171 Bhp ಮತ್ತು 205 Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ. ಇದನ್ನು CVT ಗೆ ಜೋಡಿಸಲಾಗಿದೆ. ಇನ್ನು 2.0-ಲೀಟರ್ ಅಟ್ಕಿನ್ಸನ್ ಸೈಕಲ್ ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್ (184bhp) e-CVT ಗೆ ಕನೆಕ್ಟ್ ಆಗಿರಲಿದೆ.
ಇದನ್ನೂ ಓದಿ : Whatsapp ನಲ್ಲಿ ಖಾಸಗಿ ಬ್ರಾಡ್ ಕಾಸ್ಟ್ ಸಂದೇಶ ಇನ್ನೂ ಮತ್ತಷ್ಟು ಸುಲಭ, ವಿಶಿಷ್ಟ ಟೂಲ್ಸ್ ಚಾನೆಲ್ ಪ್ರಸ್ತುತ ಪಡಿಸಿದ ಮೇಟಾ
ಹೊಸ ಎಂಗೇಜ್‌ಗಾಗಿ ಬುಕಿಂಗ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಹಬ್ಬದ ಋತುವಿನಲ್ಲಿ ಈ ಕಾರಿನ ಅಧಿಕೃತ ಬಿಡುಗಡೆಯನ್ನು ಸುಮಾರು ನಿರೀಕ್ಷಿಸಲಾಗಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆ 18.55 ಲಕ್ಷದಿಂದ 29.99 ಲಕ್ಷ ದವರೆಗೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೋಲಿಕೆ ಮಾಡಿ ನೋಡುವುದಾದರೆ ಮಾರುತಿ ಸುಜುಕಿ ಎಂಗೇಜ್ ಅದೇ ಬೆಲೆಯ ಶ್ರೇಣಿಯಲ್ಲಿ ಬರಬಹುದು ಎಂದು ಅಂದಾಜಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.