ಬೆಂಗಳೂರು : ಮಾರುತಿ ಸುಜುಕಿ ಶೀಘ್ರದಲ್ಲೇ ಕಾಂಪ್ಯಾಕ್ಟ್ ಕ್ರಾಸ್ಒವರ್ ಅನ್ನು ಪ್ರಾರಂಭಿಸಲಿದೆ.  ಇದನ್ನು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇದು ಇತರ SUV ಗಳಿಗೆ ಟಕ್ಕರ್ ನೀಡಲಿದೆ. ಮಾರುತಿ ತನ್ನ ಪೋರ್ಟ್‌ಫೋಲಿಯೊದಲ್ಲಿ ಈ ಕಾರನ್ನು ಬಲೆನೊ ಮತ್ತು ಬ್ರೆಝಾ ನಡುವೆ ಇರಿಸುತ್ತದೆ. ಈಗಾಗಲೇ 15,500 ಕ್ಕೂ ಹೆಚ್ಚು ಕಾರುಗಳನ್ನು ಬುಕ್ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಎರಡು ಎಂಜಿನ್ ಆಯ್ಕೆಗಳು :
ಇದು ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. 1.0 ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಬೂಸ್ಟರ್‌ಜೆಟ್ ಮತ್ತು 1.2 ಲೀಟರ್, 4-ಸಿಲಿಂಡರ್ NA ಪೆಟ್ರೋಲ್ ಎಂಜಿನ್. ಇದರೊಂದಿಗೆ ಮೂರು ಗೇರ್ ಬಾಕ್ಸ್ ಆಯ್ಕೆಗಳನ್ನು ಕೂಡಾ ನೀಡಲಾಗುವುದು. ಇದರ ಬೆಲೆಗಳನ್ನು ಏಪ್ರಿಲ್‌ನಲ್ಲಿ ಪ್ರಕಟಿಸಬಹುದು ಎನ್ನಲಾಗಿದೆ. ಇದರ ಎಂಟ್ರಿ ಲೆವೆಲ್ ರೂಪಾಂತರದ ಬೆಲೆಯು ಸುಮಾರು 8 ಲಕ್ಷ ರೂಪಾಯಿಗಳಾಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಟಾಪ್ ವೆರಿಯೇಂಟ್ ಬೆಲೆಯು ಸುಮಾರು 11 ಲಕ್ಷದವರೆಗೆ ಏರಿಕೆಯಾಗಬಹುದು. 


ಇದನ್ನೂ ಓದಿ : ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ 5G Smartphone!Galaxy F14 5G ಎಲ್ಲಕ್ಕಿಂತ ಅಗ್ಗದ ಫೋನ್


ಟ್ರಿಮ್‌ ಮತ್ತು ವೈಶಿಷ್ಟ್ಯಗಳು :
ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಹೀಗೆ  ಐದು ಟ್ರಿಮ್‌ಗಳಲ್ಲಿ  ಈ ಕಾರು ಬರಲಿದೆ.  ಇದರ ರೇಂಜ್-ಟಾಪ್ ಟ್ರಿಮ್ ಆಲ್ಫಾ ಆಗಿದ್ದು, ಇದು 360 ಡಿಗ್ರಿ ಕ್ಯಾಮೆರಾ, ಹೆಡ್-ಅಪ್ ಡಿಸ್ಪ್ಲೇ (HUD), ಕ್ರೂಸ್ ಕಂಟ್ರೋಲ್, ಲೆದರ್ ರ್ಯಾಪ್ದ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ. ಇದು 16-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಡ್ಯುಯಲ್-ಟೋನ್ ಕಲರ್ ಸ್ಕೀಮ್ ಆಯ್ಕೆಯೊಂದಿಗೆ ಪಡೆಯುತ್ತದೆ.


ಇತರ ವೈಶಿಷ್ಟ್ಯಗಳು :
ಡ್ಯುಯಲ್ ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ರಿಯರ್ ಡಿಫಾಗರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟಿಲ್ಟ್ ಅಡ್ಜಸ್ಟ್‌ಮೆಂಟ್ ಸ್ಟೀರಿಂಗ್,  ಪವರ್ಡ್ ವಿಂಡೋ, ಮತ್ತು 60:40 ರಿಯರ್ ಸೀಟ್ ಸ್ಪ್ಲಿಟ್‌ನಂತಹ ವೈಶಿಷ್ಟ್ಯಗಳನ್ನು ಈ ಕಾರು ಪಡೆಯುತ್ತದೆ. ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ಗೋ, ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಡ್ಯುಯಲ್-ಟೋನ್ ಇಂಟೀರಿಯರ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.


ಇದನ್ನೂ ಓದಿ : ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಿರುವುದು ಮಾರುತಿಯ ಈ ಕಾರನ್ನೇ !


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.