ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಿರುವುದು ಮಾರುತಿಯ ಈ ಕಾರನ್ನೇ !

Best Selling Hatchback:ಫೆಬ್ರವರಿಯಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಅಂದರೆ ಅದು ಮಾರುತಿ ಸುಜುಕಿ ಬಲೆನೊ. ಆಲ್ಟೊ, ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅನ್ನು  ಹಿಂದಿಕ್ಕಿ ಬಲೆನೊ ಈ ಸ್ಥಾನಕ್ಕೆ ಏರಿದೆ. 

Written by - Ranjitha R K | Last Updated : Mar 30, 2023, 01:41 PM IST
  • ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ
  • ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಕಾರುಗಳು ಮಾರುತಿ ಸುಜುಕಿಯದ್ದೇ
  • ಇವೆಲ್ಲವೂ ಹ್ಯಾಚ್ ಬ್ಯಾಕ್ ಕಾರುಗಳು.
ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಿರುವುದು ಮಾರುತಿಯ ಈ ಕಾರನ್ನೇ ! title=

Best Selling Hatchback : ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಫೆಬ್ರವರಿ 2023 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳು ಮಾರುತಿ ಸುಜುಕಿಯದ್ದೇ ಆಗಿದೆ. ಇವೆಲ್ಲವೂ ಹ್ಯಾಚ್ ಬ್ಯಾಕ್ ಕಾರುಗಳು. ಸಾಮಾನ್ಯವಾಗಿ  ಆಲ್ಟೊ ಅಥವಾ ವ್ಯಾಗನ್ಆರ್  ಹೆಚ್ಚು ಮಾರಾಟವಾಗುವ ಕಾರುಗಳು ಎಂದು ಅಂದಾಜಿಸಲಾಗುತ್ತದೆ.  ಆದರೆ, ಫೆಬ್ರವರಿಯಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಅಂದರೆ ಅದು ಮಾರುತಿ ಸುಜುಕಿ ಬಲೆನೊ. ಆಲ್ಟೊ, ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅನ್ನು  ಹಿಂದಿಕ್ಕಿ ಬಲೆನೊ ಈ ಸ್ಥಾನಕ್ಕೆ ಏರಿದೆ. 

ಮಾರುತಿ ಬಲೆನೊ : ಮಾರುತಿ ಸುಜುಕಿ ಬಲೆನೊ ಫೆಬ್ರವರಿ 2023 ರಲ್ಲಿ 18,592 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಫೆಬ್ರವರಿ 2022 ರಲ್ಲಿ ಬಲೆನೋದ 12,570 ಯೂನಿಟ್ ಗಳು ಮಾರಾಟವಾಗಿತ್ತು, ಅಂದರೆ 2022ಕ್ಕೆ ಹೋಲಿಸಿದರೆ ಈ ಬಾರಿ ಕಾರಿನ ಮಾರಾಟದಲ್ಲಿ 47.91 ಶೇಕಡಾದಷ್ಟು  ಹೆಚ್ಚಳವಾಗಿದೆ. ಮಾರುತಿ ಬಲೆನೊದ ಬೆಲೆ 6.56 ಲಕ್ಷದಿಂದ 9.83 ಲಕ್ಷದ (ಎಕ್ಸ್ ಶೋರೂಂ) ನಡುವೆ ಇದೆ.  ಇದು ಪೆಟ್ರೋಲ್ ಎಂಜಿನ್ ಜೊತೆಗೆ CNG ಕಿಟ್ ಆಯ್ಕೆಯೊಂದಿಗೆ ಲಭ್ಯವಿದೆ.

ಇದನ್ನೂ ಓದಿ : ನಿಮ್ಮ ಸ್ಮಾರ್ಟ್‌ಫೋನ್ ಸ್ಪೀಕರ್‌ನಿಂದ ಸೌಂಡ್ ಕಡಿಮೆ ಬರ್ತಿದ್ಯಾ? ಈ ರೀತಿ ಸರಿಪಡಿಸಿ

ಮಾರುತಿ ಸ್ವಿಫ್ಟ್ : ಫೆಬ್ರವರಿ 2023 ರಲ್ಲಿ, ಅತಿ ಹೆಚ್ಚು ಮಾರಾಟವಾಗುವ ಎರಡನೇ  ಮಾರುತಿ ಸ್ವಿಫ್ಟ್ ಎರಡನೇ ಸ್ಥಾನದಲ್ಲಿದೆ. ಆದರೆ, ಈ ಬಾರಿ ಅದರ ಮಾರಾಟದಲ್ಲಿ ಕುಸಿತ ಕಂಡಿದೆ. ಫೆಬ್ರವರಿ 2023 ರಲ್ಲಿ ಮಾರುತಿ ಸ್ವಿಫ್ಟ್ ನ 18,412 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಫೆಬ್ರವರಿ 2022 ರರಲ್ಲಿ 19,202 ಯೂನಿಟ್ ಗಳಷ್ಟೇ ಮಾರಾಟವಾಗಿದೆ. ಅಂದರೆ ಮಾರುತಿ ಸ್ವಿಫ್ಟ್ ಮಾರಾಟದಲ್ಲಿ 4.11% ರಷ್ಟು ಇಳಿಕೆಯಾಗಿದೆ. 

ಮಾರುತಿ ಆಲ್ಟೊ: ಫೆಬ್ರವರಿ 2023 ರಲ್ಲಿ, ಮಾರುತಿ ಸುಜುಕಿ ಆಲ್ಟೊ ಮೂರನೇ ಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಈ ಕಾರಿನ 18,114  ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಫೆಬ್ರವರಿ 2022 ರಲ್ಲಿ ಈ ಕಾರಿನ 11,551ಯೂನಿಟ್ ಗಳನ್ನೂ ಮಾರಾಟ ಮಾಡಲಾಗಿತ್ತು. ಅಂದರೆ ಈ ಕಾರಿನ ಮಾರಾಟದಲ್ಲಿ 56.82 ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಫ್ರಿಡ್ಜ್ ಅನ್ನು ಯಾವ ತಾಪಮಾನದಲ್ಲಿ ಚಲಾಯಿಸಬೇಕು? ಇಲ್ಲಿದೆ ಮಹತ್ವದ ಮಾಹಿತಿ

ಮಾರುತಿ ವ್ಯಾಗನ್ ಆರ್: ಮಾರುತಿ ವ್ಯಾಗನ್ ಆರ್ ಫೆಬ್ರವರಿ 2023 ರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಮಾರುತಿ ವ್ಯಾಗನ್ ಆರ್ 16,889  ಯುನಿಟ್‌ಗಳು ಮಾರಾಟವಾಗಿದ್ದು, ಫೆಬ್ರವರಿ 2022 ರಲ್ಲಿ 14,669 ಯುನಿಟ್‌ಗಳು ಮಾರಾಟವಾಗಿವೆ. ವಾರ್ಷಿಕ ಆಧಾರದಲ್ಲಿ ನೋಡುವುದಾದರೆ ಇದರ ಮಾರಾಟದಲ್ಲಿ 15.13% ದಷ್ಟು ಏರಿಕೆ ಕಂಡು ಬಂದಿದೆ. 

 

Trending News