ಬೆಂಗಳೂರು : Samsung Galaxy F14 5G ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದು ಸೂಪರ್ ವೈಶಿಷ್ಟ್ಯಗಳನ್ನು ಹೊಂದಿರುವ ಕೈಗೆಟುಕುವ 5G ಸ್ಮಾರ್ಟ್ಫೋನ್ ಆಗಿದೆ. ಫೋನ್ 90Hz ನ ರಿಫ್ರೆಶ್ ರೇಟ್ , ದೊಡ್ಡ ಬ್ಯಾಟರಿ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇಂದಿನಿಂದ ಸ್ಮಾರ್ಟ್ಫೋನ್ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿದೆ. ಫೋನ್ನ ವಿನ್ಯಾಸವೂ ಉತ್ತಮವಾಗಿದೆ. ಹಾಗಿದ್ದರೆ Samsung Galaxy F14 5G ಬೆಲೆ ಮತ್ತು ಬ್ಯಾಂಗ್ ವೈಶಿಷ್ಟ್ಯಗಳನ್ನು ತಿಳಿಯೋಣ...
ಭಾರತದಲ್ಲಿ Samsung Galaxy F14 5G ಬೆಲೆ :
Samsung Galaxy F14 5G ಅನ್ನು ಭಾರತದಲ್ಲಿ ಎರಡು ಸ್ಟೋರೇಜ್ ಆಪ್ಷನ್ ಜೊತೆ ಬಿಡುಗಡೆ ಮಾಡಲಾಗಿದೆ. ಮೂಲ ಮಾದರಿಯು 4GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದ್ದು, ಇದರ ಬೆಲೆ 12,990 ರೂ. ಹೆಚ್ಚುವರಿಯಾಗಿ, 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 14,490 ರ್ಯುಪಾಯಿ ದರ ನಿಗದಿ ಪಡಿಸಲಾಗಿದೆ. ಈ ಫೋನ್ ಅನ್ನು OMG ಬ್ಲಾಕ್, ಗೋಟ್ ಗ್ರೀನ್ ಮತ್ತು ಬೇ ಪರ್ಪಲ್ ಹೀಗೆ ಮೂರು ಬಣ್ಣಗಳಲ್ಲಿ ಪರಿಚಯಿಸಲಾಗಿದೆ.
ಇದನ್ನೂ ಓದಿ : ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಿರುವುದು ಮಾರುತಿಯ ಈ ಕಾರನ್ನೇ !
Samsung Galaxy F14 5G ವಿಶೇಷಣಗಳು :
Samsung Galaxy F14 5G 6.6-ಇಂಚಿನ IPS LCD ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು FHD+ ರೆಸಲ್ಯೂಶನ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ನೀಡಲಾಗಿದೆ. ಡಿಸ್ಪ್ಲೇಯಲ್ಲಿ ಇನ್ಫಿನಿಟಿ ವಿ ನಾಚ್ ಕೂಡ ಇದೆ.
Galaxy F14 5G ಸ್ಯಾಮ್ಸಂಗ್ನ Exynos 1330 SoC ನಿಂದ ಚಾಲಿತವಾಗಿದೆ. ಇದನ್ನು 5nm ಪ್ರೋಸೆಸ್ ಜೊತೆ ತಯಾರಿಸಲಾಗಿದೆ. ಇದು 6GB ಯ RAM ಮತ್ತು 128GB ವರೆಗಿನ ಇಂಟರ್ ನೆಲ ಸ್ಟೋರೇಜ್ ನೊಂದಿಗೆ ಬರುತ್ತದೆ. ಇದನ್ನು ವರ್ಚುವಲ್ RAM ವಿಸ್ತರಣೆಯ ಮೂಲಕ 12GB ವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ : ನಿಮ್ಮ ಸ್ಮಾರ್ಟ್ಫೋನ್ ಸ್ಪೀಕರ್ನಿಂದ ಸೌಂಡ್ ಕಡಿಮೆ ಬರ್ತಿದ್ಯಾ? ಈ ರೀತಿ ಸರಿಪಡಿಸಿ
Samsung Galaxy F14 5G ಕ್ಯಾಮೆರಾ :
ಹಿಂಭಾಗದಲ್ಲಿ, Galaxy F14 5G ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅದು 50-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸಾಧನವು 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ವಾಟರ್ಡ್ರಾಪ್ ನಾಚ್ನಲ್ಲಿ ಇರಿಸಲಾಗಿದೆ.
Samsung Galaxy F14 5G ಬ್ಯಾಟರಿ :
Samsung Galaxy F14 5G 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜರ್ ಬಾಕ್ಸ್ನೊಂದಿಗೆ ಬರುವುದಿಲ್ಲ. ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು AI ಫೇಸ್ ಅನ್ಲಾಕ್ ಅನ್ನು ಸಪೋರ್ಟ್ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.